

ನಾಗಾಲ್ಯಾಂಡ್ ಸಚಿವ ತಮ್ಜೆನ್ ಇಮ್ನಾ ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಬಾರಿಯೂ ವೈವಿಧ್ಯಮಯ ವಿಡಿಯೋಗಳನ್ನ ಹಂಚಿಕೊಳುತ್ತಾರೆ. ಸದಾ ಒಂದಿಲ್ಲೊಂದು ವಿಶಿಷ್ಟ ವಿಡಿಯೋಗಳನ್ನ ಹಂಚಿಕೊಳ್ಳುವ ತಮ್ಜೆನ್ ಇದೀಗ ತಮ್ಮ ರಾಜ್ಯದ ಹಳ್ಳಿಗಳಲ್ಲಿ ಜನರು ಬಿದಿರನ್ನು ಬಳಸಿ ಪರಿಸರ ಸ್ನೇಹಿ ವಾಶ್ ಬೇಸಿನ್ ತಯಾರಿಸಿರುವ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.
ವಿಶೇಷ ಅಂದ್ರೆ ಪರಿಸರದಲ್ಲಿ ದೊರೆಯುವಂತಹ ವಸ್ತುಗಳನ್ನೇ ಬಳಸಿಕೊಂಡು ಅಲ್ಲಿನ ಜನರು ಈ ವಾಶಿಂಗ್ ಬೇಸಿನ್ ತಯಾರಿಸಿದಕ್ಕೆ ಶ್ಲಾಘಿಸಿದ್ದಾರೆ.
''ಇದು ಬಿದಿರನ್ನು ಬಳಸಿ ತಯಾರಿಸಿರುವಂತ ವಾಶಿನ್ ಬೇಸಿನ್, ಶೇ 100 ರಷ್ಟು ಇದು ನೈಸರ್ಗಿಕವಾಗಿದ್ದು, ಇದರಿಂದ ಯಾವುದೇ ರೀತಿಯ ತೊಂದರೆ ಇಲ್ಲ. ನಾಗಲ್ಯಾಂಡ್ ಜನರು ತಮ್ಮ ಹಳ್ಳಿಗಳಲ್ಲಿ ಪರಿಸರ ಸ್ನೇಹಿ ವಾಶಿಂಗ್ ಬೇಸಿನ್ ತಯಾರಿಸಿ ಬಳಸುತ್ತಿದ್ದಾರೆ.
ಪರ್ವತ ಪ್ರದೇಶದಿಂದ ಹರಿದು ಬರುವ ನೀರನ್ನು ಬಿದಿರಿನ ಮೂಲಕ ಹಾಯಿಸಿ ಅದಕ್ಕೆ ರಮಧ್ರಗಳನ್ನ ಕೊರೆದು ತಮಗೆ ಅಗತ್ಯವಿದ್ದಾಗ ರಂಧ್ರಕ್ಕೆ ಸಿಕ್ಕಿಸಿದ ಮರದ ತುಂಡುಗಳನ್ನು ತೆಗೆದು ಕೈ, ಕಾಲುಗಳನ್ನು ತೊಳೆಯಬಹುದಾಗಿದೆ. ನಂತರ ಪುನ: ಮರದ ತುಂಡಿನಿಂದ ರಂಧ್ರವನ್ನು ಮುಚ್ಚುತ್ತಾರೆ. ಎಂಬುದಾಗಿ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.