ಸೆ.13ಕ್ಕೆ ವಿಕಾಸಪರ್ವ ಸಿನಿಮಾ ತೆರೆಗೆ

cinema
ವಿಕಾಸಪರ್ವ ಚಿತ್ರತಂಡ ಅನ್ಬು ಅರಸ್, ರೋಹಿತ್ ನಾಗೇಶ್, ಸ್ವಾತಿ, ವಿಶೃತ್ ನಾಯಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದರು.
Published on

ಶಿವಮೊಗ್ಗ: ಕಿರುತೆರೆಯಲ್ಲಿ ಮಿಂಚಿರುವ ನಟ, ನಟಿಯನ್ನು ಬೆಳ್ಳಿಪರದೆಯಲ್ಲಿ ನಾಯಕ-ನಾಯಕಿಯಾಗಿ ಪರಿಚಯಿಸುತ್ತಿರುವ ವಿಕಾಸ ಪರ್ವ ಸಿನಿಮಾ ಸೆ.13ರಂದು ತೆರೆ ಕಾಣಲಿದೆ. ಮನುಷ್ಯನ ವಿವೇಚನೆಯೇ ವಿಕಾಸಕ್ಕೆ ದಾರಿ ಎಂಬುದು ಸಿನಿಮಾ ಥೀಮ್ ಎಂದು ನಿರ್ದೇಶಕ ಅನ್ಬು ಅರಸ್ ತಿಳಿಸಿದರು.

ಚಿತ್ರದ ಮೂಲಕ ಸಾಮಾಜಿಕ ಜವಾಬ್ದಾರಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಕುತೂಹಲದೊಂದಿಗೆ ಚಿತ್ರ ಸಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಒಂದು ಗಹನವಾದ ಸಮಸ್ಯೆ ಇದ್ದೇ ಇರುತ್ತದೆ. ಅದರಿಂದ ಹೊರಬರಲು ವಿವೇಚನೆ ಅಗತ್ಯ ಎಂಬುದನ್ನು ಹೇಳುವ ಪ್ರಯತ್ನ ವಿಕಾಸ ಪರ್ವದ ಮೂಲಕ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧಾರಾವಾಹಿಗಳಲ್ಲಿ ಗಮನಸೆಳೆದಿರುವ ಯುವ ನಟ ರೋಹಿತ್ ನಾಗೇಶ್ ಚಿತ್ರದ ನಾಯಕ. ಕಿರುತೆರೆಯಲ್ಲಿ ಖಳನಟಿಯಾಗಿ ಖ್ಯಾತಿ ಪಡೆದಿರುವ ಸ್ವಾತಿ ನಾಯಕಿ. ಇದರಲ್ಲಿ ಚಿತ್ರಕಥೆಗೆ ಮಹತ್ವದ ಸ್ಥಾನ ನೀಡಲಾಗಿದೆ. ವಿಶೃತ್ ನಾಯಕ್ ಸಂಭಾಷಣೆ ಬರೆದಿದ್ದು, ಡಾ. ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ನವೀನ್ ಸುವರ್ಣ ಛಾಯಾಗ್ರಹಣವಿದ್ದು, ತಾರಾಗಣದಲ್ಲಿ ಅಶ್ವಿನ್ ಹಾಸನ್, ನಿಶಿತಾ ಗೌಡ, ಬಲರಾಜವಾಡಿ, ಕುರಿ ರಂಗ ಇತರರಿದ್ದಾರೆ ಎಂದರು.
ಚಿಕ್ಕಮಗಳೂರು, ಸಕಲೇಶಪುರ, ಕೊಡಗು ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕತೆಗೆ ತಕ್ಕಂತೆ ಹೊಡೆದಾಟದ ದೃಶ್ಯಗಳಿವೆ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಒಂದು ಹಾಡು ಬಿಡುಗಡೆಯಾಗಿ ಜನಪ್ರಿಯಗೊಂಡಿದೆ ಎಂದು ಹೇಳಿದರು. ನಟ ರೋಹಿತ್ ನಾಗೇಶ್, ನಟಿ ಸ್ವಾತಿ, ಸಂಭಾಷಣೆಕಾರ ವಿಶೃತ್ ನಾಯಕ್ ಚಿತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net