ವಿಜೃಂಭಣೆಯ ಶ್ರೀ ಬನ್ನಮ್ಮ ರಥೋತ್ಸವ

fb2b4600-8787-4f79-8c90-de9265982783
Published on
  • ಬನ್ನಿಕುಪ್ಪೆ: ಬನ್ನಿಕುಪ್ಪೆ ಗ್ರಾಮ ದೇವತೆ ಶ್ರೀ ಬನ್ನಮ್ಮ ಅವರ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಶ್ರೀ ಸಾಂಬಸದಾಶಿವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಹಣ್ಣು, ದವನ ಎಸೆದು ಹರಕೆ ತೀರಿಸಿದರು. ಭಕ್ತರಿಗೆ ಮಜ್ಜಿಗೆ, ಪಾನಕ, ಸಿಹಿ ವಿತರಿಸಲಾಯಿತು. ಶಾಸಕ ಜಿ.ಡಿ.ಹರೀಶ್‌ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದನಾಯಕ್, ಪಿಡಿಒ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ವೇದಮೂರ್ತಿ, ಪಿಎಸ್‌ಎಸ್ ನಿರ್ದೇಶಕ ಗೋವಿಂದೇಗೌಡ, ಮುಖಂಡರಾದ ಕೂಸಪ್ಪ, ಲೋಕೇಶ್‌ನಾಯಕ, ಪ್ರಸನ್ನಕುಮಾರ್, ರಾಮ ಚಂದ್ರನಾಯಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net