ನಟಿ ತ್ರಿಷಾ ಜೊತೆ ನಾರ್ವೆಯಲ್ಲಿ ಕಾಣಿಸಿಕೊಂಡ ದಳಪತಿ ವಿಜಯ್!

tvf
Published on

ನಟಿ ತ್ರಿಷಾ ಮತ್ತು ದಳಪತಿ ವಿಜಯ್ ಹಲವು ವರ್ಷಗಳ ಹಿಂದೆ ಗಿಲ್ಲಿ ಸೇರಿದಂತೆ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದರು. ಕೊನೆಯದಾಗಿ 2008 ರಲ್ಲಿ ಕುರುವಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು ಮತ್ತು ಈಗ, ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ, ಅವರು ಲೋಕೇಶ್ ಕನಕರಾಜ್ ಅವರ ಲಿಯೋಗಾಗಿ ಮತ್ತೆ ಒಟ್ಟಿಗೆ ಸೇರಿದ್ದಾರೆ.


ದಳಪತಿ ವಿಜಯ್ ಮತ್ತು ಸಂಗೀತಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ವಿಜಯ್​ ಅವರು ನಟಿ ತ್ರಿಷಾ ಜೊತೆಯಲ್ಲಿ ನಾರ್ವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ, 'ಲಿಯೋ' ಗಾಗಿ ತಮ್ಮ ಜೋಡಿಯ ಮೂಲಕ ಫೇಮಸ್​ ಆಗಿದ್ದು, ಇದೀಗ ಇನ್ನೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ, ಇವರಿಬ್ಬರೂ ನಾರ್ವೆಯಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಲಿಯೋ ಚಿತ್ರದ ಚಿತ್ರೀಕರಣ ಮುಗಿಸಿದ ವಿಜಯ್ ಸ್ವಲ್ಪ ವಿರಾಮಕ್ಕೆಂದು ನಾರ್ವೆಗೆ ಹೋಗಿರುವುದು ತಿಳಿದಿತ್ತು. ಆದರೆ ಈಗ ಅವರು ನಾರ್ವೆಯಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡಿದ್ದು, ಸದ್ಯ ವಿಜಯ್​ ಪತ್ನಿ ಸಂಗೀತಾಗೆ ಡಿವೋರ್ಸ್​​ ಕೊಡಲಿದ್ದಾರೆಯೇ ಅನ್ನೋ ಚರ್ಚೆಗಳು ನಡೆಯುತ್ತಿವೆ.
5 ವರ್ಷಗಳ ನಂತರ ಸಿನಿಮಾದಲ್ಲಿ ಒಂದಾಗುತ್ತಿರುವ ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ನಾರ್ವೆಯಲ್ಲಿ ಈ ಜೋಡಿ ಜೊತೆಯಾಗಿ ಓಡಾಡ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟ ವಿಜಯ್ ಪತ್ನಿಯಿಂದ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ವಿಷಯ ಹೊರಬಂದಿದೆ.

ವಿಜಯ್ ಮತ್ತು ತ್ರಿಷಾ ಡೇಟಿಂಗ್ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಡಿವೋರ್ಸ್ ಪಕ್ಕಾ ಎನ್ನುವ ಮಾತುಗಳು ಸಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net