''ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ''- ಸ್ಪಂದನಾ ಬಗ್ಗೆ ಭಾವುಕ ಸಾಲುಗಳನ್ನು ಹೇಳಿದ ವಿಜಯ್ ರಾಘವೇಂದ್ರ

svf
Published on

ಚಂದನವನದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ತಿಸಿ ಮದುವೆ ಆದವರು. ಅವರು ಹಲವು ವರ್ಷಗಳ ಕಾಲ ಸುಖ ಸಂಸಾರ ನಡೆಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು. ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟರು. ಮೊದಲ ಬಾರಿಗೆ ಪತ್ನಿ ಕುರಿತು ಅವರು ಮಾತನಾಡಿದ್ದಾರೆ.
ಪತ್ನಿಯನ್ನು ಕಳೆದುಕೊಂಡ ಬಳಿಕ ವಿಜಯ್ ರಾಘವೇಂದ್ರ ಅವರು ಮೌನವಾಗಿದ್ರು.

ಈಗ ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮೌನ ಮುರಿದ್ದಾರೆ. ಪತ್ನಿಯ ಬಗ್ಗೆ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೃಪಟ್ಟು ಇಂದಿಗೆ (ಆಗಸ್ಟ್ 18) 13 ದಿನಗಳು ಕಳೆದಿವೆ.

ಅವರು ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಕುಟುಂಬದವರ ಬಳಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲಾ ಸದಸ್ಯರು ದುಃಖದಲ್ಲಿದ್ದಾರೆ.
ಈಗ ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮೌನ ಮುರಿದ್ದಾರೆ. ಪತ್ನಿಯ ಬಗ್ಗೆ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.
ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ

ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ

ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ

ನಾನೆಂದೂ ನಿನ್ನವ.. ಕೇವಲ ನಿನ್ನವ..


ಆಗಸ್ಟ್ 16ರಂದು ಸ್ಪಂದನಾ ಅವರ 11ನೇ ದಿನದ ಕಾರ್ಯ ನಡೆದಿದೆ. ಮಲ್ಲೇಶ್ವರದ ಕಬಡ್ಡಿ ಗ್ರೌಂಡ್​ನಲ್ಲಿ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net