ಶ್ರೀ ರಾಮ ಸ್ಮರಣೆಯೊಂದಿಗೆ ವಿಜಯವಾಣಿ ರಾಮೋತ್ಸವ ವಿಶೇಷ ಪುರವಣಿ ಬಿಡುಗಡೆ

22-RNR-01
Published on

ರಾಣೆಬೆನ್ನೂರ: ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆ ನಿಮಿತ್ತ ಹೊರತಂದ ರಾಮೋತ್ಸವ ವಿಶೇಷ ಪುರವಣಿಯನ್ನು ನಗರದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ನಗರದ ಕೋಟೆ ಓಣಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ನೇರ ಪ್ರಸಾರ ವೀಕ್ಷಿಸಲು ಸೇರಿದ್ದ ತಾಲೂಕು ಬ್ರಾಹ್ಮಣ ಸಮಾಜ ಹಾಗೂ ವಿವಿಧ ಮಹಿಳಾ ಮಂಡಳದವರು ರಾಮೋತ್ಸವ ಪುರವಣಿ ಬಿಡುಗಡೆಗೊಳಿಸಿದರು.
ಶ್ರೀರಾಮನ ಹುಟ್ಟು ಹಾಗೂ ಆತನ ಜೀವನ ಚರಿತ್ರೆ ಕುರಿತು ವಿಜಯವಾಣಿ ಪತ್ರಿಕೆ ರಾಮೋತ್ಸವ ವಿಶೇಷ ಪುರವಣಿಗೆ ಮೂಲಕ ಅದ್ಭುತವಾಗಿ ಹೊರ ತಂದಿದ್ದು, ವಿಜಯವಾಣಿ ಬಳಗದವರಿಗೆ ಶುಭವಾಗಲಿ ಎಂದು ಹಾರೈಯಿಸಿದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ದತ್ತಾತ್ರೇಯ ನಾಡಗೇರ, ಪ್ರಮುಖರಾದ ಗುರುರಾಜ ನಾಡಗೇರ, ಉಮೇಶ ಶಿರೂರ, ಗೋವಿಂದ ಚಿಮ್ಮಲಗಿ, ಮನೋಜ ನರಗುಂದ, ಗಣೇಶ ನಾಡಗೇರ, ಪುರೋಹಿತ ರಾಧಾ, ವಿಕ್ರಮ ಜೋಶಿ, ಸುಬ್ಬಣ್ಣ ದಿಕ್ಷಿತ, ರವಿ ವರಗೇರಿ, ಶ್ರೀಪಾದ ಕುಲಕರ್ಣಿ ಹಾಗೂ ಮಹಿಳಾ ಮಂಡಳದವರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net