ಇಂದಿನಿಂದ  ಮೈಸೂರಿನಲ್ಲಿ ‘ವಿಜಯವಾಣಿ’ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಕೃಷಿ ಹಬ್ಬ

krushi mela feb 2020
Published on

ಮೈಸೂರು : ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ ‘ಕೃಷಿಮೇಳ’ ಶುಕ್ರವಾರ ಉದ್ಘಾಟನೆಗೊಳ್ಳಲಿದ್ದು, ಕೃಷಿ ದಿಬ್ಬಣ ಕಣ್ತುಂಬಿಕೊಳ್ಳಲು ವೇದಿಕೆ ಸಜ್ಜಾಗಿದೆ.

ಕೃಷಿ ಸಂಸ್ಕೃತಿ ಅನಾವರಣಕ್ಕೆ ಸಾಕ್ಷಿಯಾಗುವ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡುವರು. ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ, ವಸತಿ ಸಚಿವ ವಿ.ಸೋಮಣ್ಣ, ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಸೇರಿ ಹಲವು ಗಣ್ಯರು, ಸಾವಿರಾರು ಜನರು ಈ ಉತ್ಸವಕ್ಕೆ ಸಾಕ್ಷೀಕರಿಸಲಿದ್ದಾರೆ. ಬಳಿಕ ವಿವಿಧ ಚಟುವಟಿಕೆಗಳು ಗರಿಗೆದರಲಿವೆ.

ಎಲ್ಲರಿಗೂ ಮುಕ್ತ ಆಹ್ವಾನ ಇರುವ ಈ ಮೇಳವು ರೈತರು, ಕೃಷಿ ಪರಿಣತರು ಮತ್ತು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ. ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯವು ಮೇಳಕ್ಕೆ ಸಹಯೋಗ ನೀಡಿದೆ. ಮೈದಾನದಲ್ಲಿ 100 ಮಳಿಗೆಗಳನ್ನು ತೆರೆಯಲಾಗಿದೆ.

ನವಧಾನ್ಯ ಶಿವಲಿಂಗ ದರ್ಶನ

ಶಿವರಾತ್ರಿ ಹಿನ್ನೆಲೆಯಲ್ಲಿ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ನವಧಾನ್ಯಗಳಿಂದ ನಿರ್ವಿುಸಿದ ಶಿವಲಿಂಗ ದರ್ಶನವೂ ಸಿಗಲಿದೆ. ನವಧಾನ್ಯಗಳಾದ ಅಕ್ಕಿ, ಗೋಧಿ, ಉದ್ದು, ಹೆಸರು, ಅವರೆ, ಕಡಲೆ, ತೊಗರಿ, ಎಳ್ಳು ಮತ್ತು ಹುರುಳಿ ಕಾಳುಗಳಿಂದ ಶಿವಲಿಂಗ ನಿರ್ವಿುಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net