ವಿಜಯವಾಣಿ ಸಂಪಾದಕೀಯ: ಶಾಲೆಗಳು ಸುರಕ್ಷಿತವಾಗಿರಬೇಕು

h6-School 1
Published on

ಶಾಲೆಗಳು ಮಕ್ಕಳ ಜೀವನವನ್ನು ರೂಪಿಸುವ, ಅರಳಿಸುವ ಉತ್ಸಾಹದ ತಾಣಗಳು. ಆದರೆ, ಸೂಕ್ತ ಮೂಲಸೌಕರ್ಯದ ಜತೆಗೆ ಸುರತ ವಾತಾವರಣವೂ ಅಲ್ಲಿ ನೆಲೆಸಿರುವುದು ಅತ್ಯಗತ್ಯ. ಮಕ್ಕಳ ಸುರಕ್ಷತೆಯನ್ನು ನಿರ್ಲಸಿದರೆ, ಅವಡಗಳಿಗೆ ಆಸ್ಪದ ನೀಡಿದಂತಾಗುತ್ತದೆ. ಕೊಪ್ಪಳದ ಬನ್ನಿಕಟ್ಟಿ ಬಳಿಯ ಬಿಸಿಎಂ ಹಾಸ್ಟೆಲ್​ನಲ್ಲಿ 2019 ಆಗಸ್ಟ್​ 15ರಂದು ಧ್ವಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್​ ತಂತಿ ತಗುಲಿ ಐವರು ವಿದ್ಯಾಥಿರ್ಗಳು ಮೃತಪಟ್ಟ ಕಹಿಟನೆಯ ನೆನಪು ಮಾಸಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪಿಐಎಲ್​ ದಾಖಲಿಸಿಕೊಂಡಿರುವ ಹೈಕೋರ್ಟ್​ ರಾಜ್ಯದಾದ್ಯಂತ ಎಲ್ಲ ಶಾಲೆ&ಕಾಲೇಜುಗಳ ಸಮೀಪ ಮತ್ತು ಮೇಲ್ಭಾಗಗಳಲ್ಲಿ ಹಾದುಹೋಗಿರುವ ವಿದ್ಯುತ್​ ತಂತಿಗಳನ್ನು ಸ್ಥಳಾಂತರಿಸಲು ಕೆಪಿಟಿಸಿಎಲ್​ ಸೇರಿ ಎಲ್ಲ ಎಸ್ಕಾಂಗಳಿಗೆ ಮೂರು ತಿಂಗಳ ಗಡುವು ನೀಡಿದೆ. ಅಲ್ಲದೆ, ರಾಜ್ಯದಲ್ಲಿರುವ ಸರ್ಕಾರಿ ವಿದ್ಯಾಥಿರ್ ನಿಲಯಗಳಲ್ಲಿನ ಸೌಕರ್ಯಗಳೂ ಸೇರಿ ಅಲ್ಲಿನ ಸ್ಥಿತಿಗತಿ ಕುರಿತು ಸಮೀೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್​ ಸರ್ಕಾರಕ್ಕೆ 2019ರಲ್ಲೇ ತಿಳಿಸಿದ್ದರೂ, ವರದಿ ಸಲ್ಲಿಸಿಲ್ಲ. ಈ ಬಾರಿ ಕೊನೆಯ ಅವಕಾಶ ಕಲ್ಪಿಸಿರುವ ಹೈಕೋರ್ಟ್​ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ನ್ಯಾಯಾಲಯದ ಎಚ್ಚರಿಕೆಯ ಬಳಿಕವೂ ಪರಿಸ್ಥಿತಿ ಸುಧಾರಣೆಯಾಗಲು ಇಷ್ಟೊಂದು ದೀರ್ ಸಮಯ ತೆಗೆದುಕೊಳ್ಳುತ್ತಿರುವುದು ಅಧಿಕಾರಶಾಹಿಯ ನಿರ್ಲಕ್ಷ$್ಯ ಧೋರಣೆಗೆ ಸಾ. ಶಾಲೆಗಳು ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಆದರೆ ನೂರಾರು ಶಾಲೆ, ಅಂಗನವಾಡಿ ಗಳಿಗಂತೂ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಕೆಲವು ಶಾಲಾಕಟ್ಟಡಗಳು ನಿರ್ಮಾಣಗೊಂಡು ನಾಲ್ಕೆ$ದು ದಶಕಗಳು ಕಳೆದಿದ್ದು, ಈಗಲೋ&ಆಗಲೋ ಬೀಳುವಂತಿವೆ. ಶಿಥಿಲಗೊಂಡ ಕಟ್ಟಡಗಳು, ಛಾವಣಿ ಸೋರುವ ತರಗತಿ ಕೋಣೆಗಳು, ಅನೈರ್ಮಲ್ಯದಂಥ ಸಮಸ್ಯೆಗಳ ನಡುವೆಯೇ ಅಸಂಖ್ಯ ಮಕ್ಕಳ ಶೈಕ್ಷಣಿಕ ಯಾನ ಸಾಗುತ್ತಿದೆ.

ಗ್ರಾಮೀಣ ಭಾಗದಲ್ಲಂತೂ ಶೌಚಗೃಹದ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಅಂಗನವಾಡಿ ಮುಖ್ಯಸ್ಥರು ಸಂಬಂಧಿತ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಸಮಸ್ಯೆ ಬಗೆಹರಿಯುವುದಿಲ್ಲ.

ಪರಿಣಾಮ, ವಿದ್ಯಾಥಿರ್ಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ. ನಗರ ಪ್ರದೇಶದ ಶಾಲೆಗಳನ್ನು ಶಾಸಕರ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲು ಅವಕಾಶವಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಮುದಾಯದ ಸಹಭಾಗಿತ್ವದಿಂದಲೂ ಸರ್ಕಾರಿ ಶಾಲೆಗಳು ಹೊಸರೂಪ ಪಡೆದುಕೊಂಡಿದ್ದು, ಒಟ್ಟಾರೆ ಮಕ್ಕಳ ಮತ್ತು ಶೈಕ್ಷಣಿಕ ಕ್ಷೇತ್ರದ ಹಿತವನ್ನು ಗಮನದಲ್ಲಿ ಇರಿಸಿಕೊಂಡು, ಸುಧಾರಣೆಗಳನ್ನು ಕೈಗೊಳ್ಳುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net