

ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತೆ ಅಡಿಯಿಟ್ಟಿದ್ದು, ಪುಳಕದ ಅನುಭವ ಮೂಡಿಸಿದೆ. ದಣ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಲಾದ ಈ ದಿನ, ಸಂಭ್ರಮಾಚರಣೆಯ ಜತೆಜತೆಗೆ ಆತ್ಮಾವಲೋಕನದ ದಿನವೂ ಆಗಬೇಕಾದ್ದು ಇಂದಿನ ಅನಿವಾರ್ಯತೆ. ಏಕೀಕರಣದ ಆಶಯಗಳು ಈಡೇರಿವೆಯೇ, ಅಭಿವೃದ್ಧಿಯ ಕನಸುಗಳು ನನಸಾಗಿವೆಯೇ ಎಂಬ ಚಿಂತನೆಗೆ ತೊಡಗಿಕೊಳ್ಳಬೇಕಿದೆ. ಕಾಲಟ್ಟ ಬದಲಾದಂತೆ ಹೊಸ ಸ್ವರೂಪದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲೂ ಗಮನ ಹರಿಸಬೇಕಿದೆ. ಅದು ಕನ್ನಡದ, ಕರ್ನಾಟಕದ ಮತ್ತು ಕನ್ನಡಿಗರ ಉಜ್ವಲ ಭವಿಷ್ಯಕ್ಕೆ ಸಮರ್ಥ ಚಿಮ್ಮುಹಲಗೆಯಾಗಿ ಪರಿಣಮಿಸಬೇಕು ಎಂಬುದು ನಾಡಿನ ಹಿತಚಿಂತಕರ ಸದಾಶಯ.
ಯುವಪೀಳಿಗೆ ಕನ್ನಡವನ್ನು ಬಳಸುವ ಪ್ರಮಾಣ ಕಡಿಮೆಯಾಗುತ್ತಿದೆ, ಮನೆಗಳಿಂದಲೇ ಕನ್ನಡ ಕಣ್ಮರೆಯಾದರೆ ಭಾಷೆಗೆ ಅಪಾಯ ಎಂಬ ಆತಂಕವೂ ಕಾಡುತ್ತಿದೆ. ಈ ಕಳವಳ ದೂರವಾಗಬೇಕಾದರೆ ಬರೀ ಸರ್ಕಾರದ ಪ್ರಯತ್ನಗಳು ಸಾಕಾಗುವುದಿಲ್ಲ. ಮನೆ&ಮನೆಗಳಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕು. ಅಷ್ಟೇ ಅಲ್ಲ, ನಮ್ಮ ಚಿಂತನೆಗಳ ಅಭಿವ್ಯಕ್ತಿಗೂ ಮಾತೃಭಾಷೆ/ರಾಜ್ಯಭಾಷೆ ಹೆಚ್ಚು ಸಮರ್ಥ ಎಂಬುದು ಗೊತ್ತಿರುವಂಥದ್ದೇ. ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿ, ಸಮಾಜದ ವಿವಿಧಕ್ಷೇತ್ರಗಳಲ್ಲಿನ ಕನ್ನಡದ&ಕನ್ನಡತನದ ಅಸ್ತಿತ್ವ, ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇತ್ಯಾದಿ ವಿಷಯಗಳ ಕುರಿತಾದ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಭುತ್ವ ಗಮನ ಹರಿಸಬೇಕಿದೆ.
ಕರ್ನಾಟಕದಲ್ಲಿ ಕನ್ನಡವೇ "ಸಾರ್ವಭೌಮ ಭಾಷೆ' ಎಂಬ ೂಷಣೆಯನ್ನು ಪರಭಾಷೆಗಳ ಪ್ರಾಬಲ್ಯ ಅಣಕಿಸುವಂತಾಗಿ, ಕನ್ನಡ ಭಾಷಿಕ ಪ್ರದೇಶ ಎಂಬ ಪರಿಕಲ್ಪನೆಯೇ ಮರೆಯಾಗುವಂಥ ಆತಂಕ ತಲೆದೋರುತ್ತಿದೆ. ನಿಜ, ಜಾಗತೀಕರಣ, ಉದಾರೀಕರಣದಂಥ ಪರಿಕಲ್ಪನೆಗಳಿಗೆ ತೆರೆದುಕೊಂಡಾಗ ಬಹುಭಾಷೆ, ಬಹುಸಂಸತಿಯಂಥ ಪರಿಸ್ಥಿತಿಗಳೂ ಅನಿವಾರ್ಯವಾಗುತ್ತವೆ. ಆದರೆ ಇಂಥ ರೆಂಬೆ&ಕೊಂಬೆಗಳನ್ನು ಬೆಳೆಸಿಕೊಳ್ಳುವ ಹಪಹಪಿಯಲ್ಲಿ ಕನ್ನಡ ಭಾಷೆ-ಸಂಸ್ಕೃತಿ-ಪರಂಪರೆ ಎಂಬ ಮೂಲಬೇರುಗಳೇ ನಾಶವಾಗಬಾರದಲ್ಲವೇ? ಕನ್ನಡವನ್ನು, ಕನ್ನಡತನವನ್ನು ಉಳಿಸಿ&ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ನೀತಿ&ನಿರೂಪಣೆ ರೂಪದಲ್ಲಿ ಹತ್ತು ಹಲವು ಉಪಕ್ರಮಗಳಿಗೆ ಮುಂದಾಗಬಹುದು. ಆದರೆ ಜವಾಬ್ದಾರಿಯುತ ನಾಗರಿಕರಾಗಿ ಮತ್ತು ಕನ್ನಡತನದ ಮುಂದುವರಿಕೆಯ ಅಧ್ವರ್ಯುಗಳಾಗಿ ನಮಗೆಲ್ಲರಿಗೂ ಒಂದಷ್ಟು ಜವಾಬ್ದಾರಿಗಳಿವೆ ಎಂಬುದನ್ನು ಮರೆಯಲಾಗದು. ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ, ಉನ್ನತ ವಿದ್ಯಾಭ್ಯಾಸ ಅಥವಾ ಜೀವನೋಪಾಯಕ್ಕಾಗಿ ಪರರಾಜ್ಯ&ಪರದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದರೂ, ಕನ್ನಡತನಕ್ಕೆ ಸಂಚಕಾರ ಒದಗದಂತೆ ನೋಡಿಕೊಳ್ಳುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ನಮ್ಮ ಸಂಸತಿ&ಪರಂಪರೆಗಳ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವ ಯತ್ನಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಆಗಬೇಕಿದೆ, ಮತ್ತು ಈ ನಿಟ್ಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಿದೆ.
ಏಕೆಂದರೆ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಸತಿ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ. ಇಂದಿನ ಮಾಹಿತಿ&ತಂತ್ರಜ್ಞಾನ ಯುಗಕ್ಕೂ ಕನ್ನಡ ಒಗ್ಗಿಕೊಂಡಿದ್ದು, ಗ್ಯಾಜೆಟ್ಗಳಲ್ಲಿ ಸುಲಭವಾಗಿ ಬಳಸಲ್ಪಡುತ್ತಿದೆ. ಹಾಗಾಗಿ, ಭಾಷೆ ಬಗ್ಗೆ ಬರೀ ಕಳವಳ ಪಡುವುದಕ್ಕಿಂತ ಹೊಸ ಸಾಧ್ಯತೆಗಳತ್ತಲೂ ಗಮನ ಹರಿಸಿ ಕನ್ನಡದ ಅಂತ@ಸತ್ವವನ್ನು ಹೆಚ್ಚಿಸುವ ಸಂಕಲ್ಪ ನಮ್ಮದಾಗಲಿ. ವಿಜ್ಞಾನ&ತಂತ್ರಜ್ಞಾನದಲ್ಲೂ ಕನ್ನಡದ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಲಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.