

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ತೃತೀಯ ಬಹುಮಾನ ಗಳಿಸಿದ ಕಥೆ.
ಪ್ರಹಲ್ಲಾದ ಬೆಂಗಳೂರಿಗೆ ಬರುತ್ತೇನೆಂದಾಗ ನನಗೆ ಖುಷಿಯೂ, ಭಯವೂ ಒಟ್ಟಿಗೇ ಆಯಿತು. ಆ್ಯಕ್ಸಿಡೆಂಟಾದ ಮೇಲೆ ಮೊದಲ ಬಾರಿಗೆ ಬರುತ್ತಿದ್ದಾನೆಂಬುದು ಖುಷಿಗೆ ಕಾರಣವಾದರೆ ಈ ಜನರಾಶಿಯ ನಡುವೆ ಅರೆನೆನಪಿನ ಅವನನ್ನು ಹೇಗೆ ಕಾಪಾಡಿಕೊಳ್ಳುವುದೆಂಬುದು ಆತಂಕಕ್ಕೆ ಕಾರಣವಾಗಿತ್ತು.
ಮೂರು ವರ್ಷಗಳ ಹಿಂದೆ ಆ್ಯಕ್ಸಿಡೆಂಟೊಂದು ಆಗದೇ ಹೋಗಿದ್ದರೆ ಇವತ್ತಿಗೆ ಪ್ರಹಲ್ಲಾದನೂ ನನ್ನಂತೆಯೇ ಈ ಶಹರವೆಂಬ ಬೃಹತ್ ಮರದ ಕೋಟಿ ಮಾನವ ಎಲೆಗಳ ನಡುವೆ ಕರಿಬೇವಿನ ಸೊಪೋ, ಕೊತ್ತಂಬರಿ ಸೊಪೋ ಆಗಿ ಪ್ರತಿದಿನ ಯಾರದೋ ಬಾಂಡಲಿಯಲ್ಲಿ ಒಗ್ಗರಣೆ ಹಾಕಿಸಿಕೊಳ್ಳುತ್ತ ಬದುಕಿರುತ್ತಿದ್ದ. ಆದರೆ ಹಣೆಯ ಗೆರೆಗಳಿಗೆ ಅವನ ಬದುಕನ್ನು ಅಷ್ಟು ನೇರ ದಾರಿಯಲ್ಲಿ ನಡೆಸುವುದು ಬೇಕಿರಲಿಲ್ಲ. ಕುಂದಾಪುರ ಹೈವೇಯಲ್ಲವನು ಕುಳಿತಿದ್ದ ಬಸ್ಸಿಗೆ ಅಪಘಾತವಾಗಿ, ಇಡೀ ಜೀವನ ಪಥವೇ ುದ್ರಗ್ರಹದಿಂದ ಬಡಿಸಿಕೊಂಡ ಉಪಗ್ರಹದಂತೆ ಕೆ ಬದಲಿಸಿತ್ತು. ತಿಂಗಳುಗಟ್ಟಲೆ ಹಾಸಿಗೆಯಲ್ಲೆ ಕಳೆದವನು ನಿಧಾನವಾಗಿ ಬಾಯ್ತೆರೆದು ಕೇಳಿದ ಮೊದಲ ಪ್ರಶ್ನೆ 'ನಾನ್ಯಾರು?' ಎಂದು. ಒಬ್ಬನಿಗೆ ಇನ್ನೊಬ್ಬನನ್ನು ನೆನಪಿಸಬಹುದು. ಅವನನ್ನು ಅವನಿಗೇ ಪರಿಚಯ ಮಾಡಿಸುವುದೆಂತು? ನೀನು ಇಂಥವರ ಮಗ, ಇಂಥವಳ ಗಂಡ, ಇಂಥಾ ಕೆಲಸ ಮಾಡುತ್ತಿದ್ದೆ, ಈ ಊರಿನಲ್ಲಿದ್ದೆ.. ಇವುಗಳ ಪೈಕಿ ಯಾವ ಮಾಹಿತಿ ಅವನನ್ನು ಅವನಿಗೆ ಸಂಪೂರ್ಣವಾಗಿ ನೆನಪು ಮಾಡಿಕೊಡುತ್ತದೆ? ಅವನಿಗಷ್ಟೇ ಗೊತ್ತಿರಬಹುದಾದ ಅಂತರಂಗದ ಸಂಗತಿಗಳ ರಿಟ್ರೀವ್ ಮಾಡುವುದೆಂತು? ಮಧ್ಯಕ್ಕೆ ತುಂಡಾದ ತಂತುವನ್ನು ಮುಂದಿನ ಯಾವುದೋ ಕೊಂಡಿಗೆ ಬೆಸುಗೆ ಹಾಕಬಹುದು. ಆದರೆ ಬುಡಕ್ಕೇ ಕತ್ತರಿಸಲ್ಪಟ್ಟ ತಂತಿಯನ್ನೇನು ಮಾಡುವುದು?
ಐದಾರು ತಿಂಗಳ ಬಳಿಕ ನಿಧನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸದನಾದರೂ ಅವನ ಸ್ಮರಣೆಯ ಕೋಶಗಳು ಮಾತ್ರ ವಿಚಿತ್ರವಾಗಿ ವರ್ತಿಸತೊಡಗಿದವು. ತನ್ನದು ಮಾಸ್ತಿಕಟ್ಟೆಯೆಂಬ, ಇಡೀ ಟ್ಟವೇ ಕೊನೆಯಾಗುವ ಪರ್ವತದಂಚಿನ ಊರು, ತಾನು ಸ್ಕೂಲು, ಪಿಯೂಸಿ ಓದಿದ್ದು ಹೊಸನಗರದಲ್ಲಿ, ಉದ್ಯೋಗ ಮಾಡಿದ್ದು ಬೆಂಗಳೂರಿನಲ್ಲಿ ಎನ್ನುವುದನ್ನೆಲ್ಲ ನೆನಪು ಮಾಡಿಕೊಂಡವನು ಮಧ್ಯೆ ಡಿಗ್ರಿ ಓದಿದ ಕುಂದಾಪುರದ ದಿನಗಳನ್ನು ಮಾತ್ರ ಮರೆತೇ ಬಿಟ್ಟಿದ್ದ. ಕಾಲೇಜಿನಲ್ಲಿ ಕವನ, ಲೇಖನ ಎಂದೆಲ್ಲ ಗೀಚಿ ಅಧ್ಯಾಪಕರಾದ ಪುರುಷೋತ್ತಮರ ನೆಚ್ಚಿನ ವಿದ್ಯಾರ್ಥಿಯಾಗಿದ್ದು, ಅವರ ಮಗಳು ಸಾಹಿತ್ಯಳನ್ನೇ ಪ್ರೀತಿಸಿದ್ದು, ಕೊನೆಗವರ ಮೇಲಿನ ಗೌರವದಿಂದ ಅವಳನ್ನು ಅವಳ ಪ್ರೀತಿಯ ಸಮೇತ ಕಡಲ ತೀರದಲ್ಲೆ ಬಿಟ್ಟುಬಂದಿದ್ದು.. ಇವುಗಳ ಪೈಕಿ ಯಾವೊಂದನ್ನು ನೆನಪಿಸಿದರೂ ಅಜ್ಜಿಯ ಬಳಿ ಹುಲಿಯ ಕಥೆ ಹೇಳಿಸಿಕೊಳ್ಳುತ್ತಿರುವ ಆಸಕ್ತ ಬಾಲಕನಂತೆ ಬಾಯಿ ತೆರೆದು ಆಲಿಸುತ್ತಿದ್ದನೇ ಹೊರತು ಅವೆಲ್ಲ ತನ್ನದೇ ಬದುಕಿನ ಟನೆಗಳೆಂಬ ಸಣ್ಣ ಸಂಚಲನವೂ ಅವನ ಕಣ್ಣಲ್ಲಿ ವ್ಯಕ್ತವಾಗುತ್ತಿರಲಿಲ್ಲ್. ಹೀಗೆ ಮಧ್ಯದ ಕೆಲ ಪುಟಗಳು ಹರಿದು ಹೋಗಿರುವ ನೆನಪಿನ ಡೈರಿಯನ್ನು ತಲೆಯಲ್ಲಿಟ್ಟುಕೊಂಡಿರುವ ಈ ಬಾಲ್ಯದ ಗೆಳೆಯನೀಗ ನನ್ನ ಮನೆಗೆ ಬರಲಿದ್ದಾನೆಂಬ ವಿಷಯವನ್ನು ಅವನ ಹೆಂಡತಿ ಬಿಂದುವೇ ಖುದ್ದು ಕರೆ ಮಾಡಿ ತಿಳಿಸಿದಳು.
ಬಸ್ಸು ಹತ್ತಿ ಸಿಟಿಗೆ ಹೋಗ್ತಾನೆ. ಕೆಲಸ ಮಾಡ್ತಾನೆ. ಹೇಳಿದ ಸಾಮಾನೆಲ್ಲ ತರ್ತಾನೆ. ಇಷ್ಟು ಸಾಕು& ಡಾಕ್ಟರಿಗೆ, ಅವನ ಭೌತಿಕ ರೂಪದೊಡನೆ ವ್ಯವಹರಿಸುವ ಹೊರ ಜಗತ್ತಿಗೆ ಅವನು ಗುಣವಾದ ಅಂತ ೂಶಿಸೋದಕ್ಕೆ. ಆದ್ರೆ ಹೆಂಡತಿಯಾಗಿ ಅವನ ಭಾವನೆಗಳನ್ನ, ಅರ್ಧ ಕಂಡ & ಪೂರ್ತಿ ಮಾಡಲೇಬೇಕಾದ ಕನಸುಗಳನ್ನ, ಅಂತರಾಳದ ಕದಲಿಕೆಗಳನ್ನ ಹಂಚಿಕೊಳ್ಳೋ ನನಗೆ ಮಾತ್ರ ಗೊತ್ತಿರೋದು ಅವನ ಕ್ರಾಸ್ ಕನೆನ್ ಗಳ ಬಗ್ಗೆ. ರಾತ್ರಿ ಇದ್ದಕ್ಕಿದ್ದ ಹಾಗೆ ಎದ್ದುಕೂತು ನನ್ನ ಮಗಳೆಲ್ಲಿ? ಅಂತ ಹಾಸಿಗೆಯೆಲ್ಲ ತಡಕಾಡ್ತಾನೆ. ನಮಗಿನ್ನೂ ಮಕ್ಕಳಾಗಿಲ್ಲ ಕಣೋ. ಅವಳಿದ್ದದ್ದು ನಾವು ಜೊತೆಯಾಗಿ ಕಂಡ ಕನಸಲ್ಲಿ ಮಾತ್ರ ಅಂದ್ರೆ ಹೌದಾ? ಅಂತ ಕಣ್ಣರಳಿಸ್ತಾನೆ. ಹಿತ್ತಲಲ್ಲಿ ಅಲೆಯುತ್ತ 'ಇಲ್ಲೊಂದು ಬೆಕ್ಕಿನ ಬಾಲದ ರೀತಿ ಹೂಬಿಡೋ ಗಿಡವಿತ್ತಲ್ಲಾ, ಅದೆಲ್ಲಿ?' ಅಂತಾನೆ. ಅದು ನೀನು ಚಿಕ್ಕೋನಿದ್ದಾಗ ಇದ್ದಿದ್ದು ಅಂದ್ರೆ ಮತ್ತದೇ ಅಚ್ಚರಿ. ಭೂತ&ವರ್ತಮಾನಗಳೆಲ್ಲ ಕಲಸಿಹೋದ, ಕನಸು&ವಾಸ್ತವಗಳೆಲ್ಲ ಒಂದರೊಳಕ್ಕೊಂದು ಬೆರೆತ ವಿಚಿತ್ರ ಅರಿವು ಅವನದು. ಈ ತಪ್ಪು ಬೆಸುಗೆಗಳ ನಡುವೆ ನನ್ನನ್ನೆಲ್ಲಿ ಮರೆತು ಬಿಡುತ್ತಾನೋ ಅಂತ ಭಯವಾಗ್ತದೆ ಪುನೀ. ವಾತಾವರಣ ಬದಲಾಗಲಿ. ಸ್ವಲ್ಪ ದಿನ ಹೊರಗೆಲ್ಲಾದ್ರೂ ಕಳಿಸಿ ಅಂದಿದ್ದಾರೆ ಡಾಕ್ಟರು. ಸ್ವಲ್ಪ ದಿನ ನಿಮ್ಮನೇಲಿಟ್ಕೊಂಡು ಅವನನ್ನ ಗುಣಮಾಡಿಕೊಡ್ತೀಯ?
ಅಂಗಲಾಚುವಂತೆ ಕೇಳಿದ್ದಳು ಬಿಂದು. ಆದರೆ ಅವಳ ಬೇಡಿಕೆಯನ್ನೂ ಮೀರಿ ಪ್ರಹಲ್ಲಾದನ ಆಗಮನದ ಬಗ್ಗೆ ನನ್ನಲ್ಲಿ ಆತಂಕ ಹುಟ್ಟಲು ಕಾರಣವಾಗಿದ್ದು ವೀರೇಶಿ. ಪ್ರಹಲ್ಲಾದನನ್ನು ಬಿಡದೇ ಕಾಡಿದ ಕರಾಳ ಅಧ್ಯಾಯವದು. ನಮಗಿಂತ ಮೊದಲೇ ಮಹಾನಗರಿಗೆ ಬಂದು, ಉದ್ಯೋಗ ಹಿಡಿದು ಬೇರೂರಿದ್ದ ಅವನ ಬೆರಳು ಹಿಡಿದೇ ನಾನು, ಪ್ರಹಲ್ಲಾದ ಬೆಂಗಳೂರು ಪ್ರವೇಶಿಸಿದ್ದೆವು. ಮೆಜಸ್ಟಿಕ್ಕಿನ ಪಾಸೋವರಿನ ಮೇಲೆ ನಿಲ್ಲಿಸಿಕೊಂಡು ಬೆಂಗಳೂರಿಗೆ ಬರೋ ಪ್ರತಿಯೊಬ್ಬನ ಪ್ರಯಾಣವೂ ಇಲ್ಲಿಂದಲೇ ಶುರುವಾಗೋದು ಕಣ್ರೋ. ಅಲ್ಲಿ ಕಾಣ್ತಿರೋ ಯಾವ ಕ್ರಾಸಿನಲ್ಲಿ ನಡೆದ್ರೂ ನಿಮಗೆ ಹೊಸ ಬದುಕೇ ಸಿಗುತ್ತದೆ ಎಂದಿದ್ದ. ಮೊದಲ ಕೆಲಸ ಕೊಡಿಸಿದ್ದ. ಬಳಿಕ ಕೆಲ ಸಮಯ ನಮ್ಮ ಬಿಡುವಿನ ಭಾನುವಾರಗಳೆಲ್ಲ ಅವನ ಮನೆಯಲ್ಲೆ ಸಂಪನ್ನವಾಗುತ್ತಿದ್ದವು.
ಹಠಾತ್ತನೆ ಆತ್ಮೀಯವಾಗುವ ಸ್ನೇಹಗಳು ಅಷ್ಟೇ ಬೇಗ ದೂರಾಗುತ್ತವೆ. ಅಪರಿಚಿತ ನಗರದಲ್ಲಿನ ಏಕಮಾತ್ರ ಪರಿಚಿತನಾಗಿದ್ದ ವೀರೇಶಿಯ ಜೊತೆ ಪ್ರಹಲ್ಲಾದ ಪಾಲುದಾರಿಕೆಯಲ್ಲಿ ಸೈಟೊಂದನ್ನು ಕೊಂಡ. ಮುಂದೆ ಕೆಲ ವರ್ಷಗಳ ಬಳಿಕ ಅದನ್ನು ಮಾರುವ ವಿಷಯ ಬಂತು. ಪ್ರಹಲ್ಲಾದನ ಕಡೆಯಿಂದ ಬಂದು ಸೈಟು ಕೊಂಡುಕೊಂಡ ಆಸಾಮಿಯಾದರೂ ತನ್ನ ನೈಪುಣ್ಯವನ್ನೆಲ್ಲ ಬಳಸಿ ಕೆಲ ಲಗಳಿಗೆ ಎಪ್ಪೆಯಿಟ್ಟುಬಿಟ್ಟ. ಅಷ್ಟು ಸಾಕಾಗಿತ್ತು ನಂಬಿಕೆಯೆಂಬ ತೂತು ಮಡಿಕೆ ಒಡೆಯಲು. ಇಬ್ಬರೂ ತಾರಾಮಾರಿ ಕಿತ್ತಾಡಿಕೊಂಡುಬಿಟ್ಟರು.್ ಅಲ್ಲಿಂದ ಮುಂದಕ್ಕೆ ನಡೆದಿದ್ದು ಅರಷ@ ಯುದ್ಧ. ಪರಿಚಯದ ಪೇದೆಯೊಬ್ಬನಿಗೆ ಹಣ ತಿನ್ನಿಸಿದ ವೀರೇಶಿ ಪ್ರಹಲ್ಲಾದನನ್ನು ಸ್ಟೇಷನ್ನಿಗೆ ಕರೆಸಿ ತನ್ನ ಹಣ ಹೊಡೆದಿದ್ದಾನೆಂದು ವಿಚಾರಣೆ ನಡೆಸಿದ. ಖೈದಿಯಂತೆ ಕೈಕಟ್ಟಿ ನಿಲ್ಲಿಸಿ ಅವಮಾನ ಮಾಡಿದ. ಈ ಸಮಾಜದಲ್ಲಿ ಮಾಡಿದ ಅಪರಾಧವನ್ನು ಮಾಡಿಲ್ಲವೆಂದು ಸಾಬೀತು ಮಾಡುವುದು ಸುಲಭ. ಆದರೆ ಮಾಡದ ತಪ್ಪನ್ನು ಮಾಡಿಲ್ಲ ಎಂದು ನಂಬಿಸುವುದು ಕಷ್ಟ. ಈ ಅಪವಾದದಿಂದ ಪಾರಾಗುವ ಹೊತ್ತಿಗೆ ಪ್ರಹಲ್ಲಾದನಿಗೆ ಸಾಕುಸಾಕಾಗಿತ್ತು. ಅಷ್ಟರಲ್ಲಾಗಲೇ ಸಾವಿರಾರು ರೂಪಾಯಿ, ಲೆಕ್ಕವಿಲ್ಲದಷ್ಟು ಸಮಯ ಹಾಗೂ ಈ ಎರಡನ್ನೂ ಮೀರಿದ ಮೊತ್ತದ ಗೌರವವನ್ನವನು ಕಳೆದುಕೊಂಡಿದ್ದ.
ಅಲ್ಲಿಂದ ಮುಂದೆ ಪ್ರಹಲ್ಲಾದ ದಾಟಿದ್ದು ಹೇಳಲಾಗದ ಯಾತನೆಯನ್ನು. ಎಲ್ಲೆ ಯಾವುದೇ ಪೋಲೀಸು ಕಂಡರೂ ರೊಚ್ಚಿಗೇಳುತ್ತಿದ್ದ. ಯಾವ ವೀರೇಶಿಯ ಲಂಚ ನುಂಗಿ ಯಾವ ಬಡಪಾಯಿಯ ಮೇಲೆ ಅಪವಾದ ಹೊರಿಸಲು ಹೋಗ್ತಿದ್ದಾರೋ ಎಂದು ಸಿಡಿಯುತ್ತಿದ್ದ. ನಡುರಾತ್ರಿಯಲ್ಲೆದ್ದು ಕುಳಿತು ನಾನು ಹಣ ನುಂಗಿಲ್ಲಾಂತ ನೀನಾದ್ರೂ ನಂಬ್ತೀಯಾ ಪುನೀ? ಎಂದು ದೀನವಾಗಿ ಕೇಳುತ್ತಿದ್ದ. ಕೇಸು ಕ್ಲೋಸಾಗಿ, ಅಪವಾದ ತೀರಿದ ಬಳಿಕವೂ ಮಾಯದ ಗಾಯವೊಂದು ಅವನೊಳಗೆ ಉಳಿದು ಹೋಗಿತ್ತು. ತನಗೆ ಅಷ್ಟೆಲ್ಲ ದ್ರೋಹ ಮಾಡಿದವನಿಗೆ ತಿರುಗಿ ಏನೂ ಮಾಡದೇ, ಎಲ್ಲವನ್ನೂ ಕೇಳಿಸಿಕೊಂಡು ಹೇಡಿಯಂತೆದ್ದು ಬಂದೆನಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಆದ ಅವಮಾನಕ್ಕಿಂತ ಹೆಚ್ಚಾಗಿ ಪ್ರತಿಕಾರದ ಹಪಹಪಿ ಅವನ ನಿದ್ರೆಗೆಡಿಸಿತ್ತು.
ಈಗ, ಭೂತ ಮತ್ತು ವರ್ತಮಾನಗಳ ನಡುವೆ ಯಾರೋ ತಳ್ಳಿಬಿಟ್ಟ ಜೋಕಾಲಿಯಂತೆ ಜೀಕುತ್ತಿರುವ ಸ್ಥಿತಿಯಲ್ಲಿರುವ ಪ್ರಹಲ್ಲಾದ ಮತ್ತದೇ ವೀರೇಶಿಯ ಕೈಗೆ ಎಲ್ಲಿ ಸಿಕ್ಕೀಬಿಳುತ್ತಾನೋ ಎಂಬ ಆತಂಕ ನನ್ನನ್ನಾವರಿಸಿತು.
ಹೇಗಿದ್ಯೋ ಪುನಿ ಬೆಂಗ್ಳೂರು?
ಬಸ್ಸಿನ ಕಿಟಕಿಯಿಂದ ಹೊರಗೆ ನೋಡುತ್ತ ಕೇಳಿದ ಪ್ರಹಲ್ಲಾದ. ಕೇಳಿದ್ದು ನನಗಾದರೂ ಉತ್ತರವನ್ನು ತಾನೇ ಹುಡುಕಿಕೊಳ್ಳುವವನಂತೆ ಹೊರಗಡೆ ನೋಡುತ್ತಿದ್ದವನಲ್ಲಿ ಹಿಂದೆಂದೂ ಇಲ್ಲದ ನೆಮ್ಮದಿಯೊಂದು ನೆಲೆಯಾಗಿರುವಂತೆನಿಸಿತು. ಮರೆವು ಕೊಡುವ ವರವೇ ಇದು. ನೆನ್ನೆಯ ನೋವನ್ನೂ, ನಾಳೆಯ ಭಯವನ್ನೂ ಮರೆತವನ ವರ್ತಮಾನ ಅತ್ಯಂತ ಸುಂದರವಾಗಿರುತ್ತದಂತೆ. ಆದರೆ ಇವನ ಜೊತೆಗಿರುವ ಬಿಂದುವಿನಂಥವರ ಪಾಡೇನು? ಇವನ ಈ ಅಜೈವಿಕ ನೆಮ್ಮದಿ ಅವಳಲ್ಲುಂಟುಮಾಡಿದ ಆತಂಕವಾದರೂ ಎಂಥದು?
ಹಿಂದೊಮ್ಮೆ ತನ್ನೊಳಗೆ ಕಹಿಯ ಕುರುಹಾಗಿ ಹೊತ್ತಿ ಆರಿದ್ದ ಬೆಂಗಳೂರನ್ನು ಪ್ರಹಲ್ಲಾದ ಈಗ ಹೊಸತಾಗಿ ಕಣ್ತುಂಬಿಕೊಳ್ಳುತ್ತಿದ್ದ. ಅರ್ಧರ್ಧ ಅಳಿಸಿದ ಅವನ ನೆನಪಿನ ಸಾಲುಗಳಲ್ಲಿ ಮಹಾನಗರದ ಯಾವ್ಯಾವ ಅಧ್ಯಾಯಗಳು ಜೀವಂತವಾಗಿವೆಯೋ, ಯಾವ್ಯಾವುದು ಅಳಿಸಿ ಹೋಗಿದೆಯೋ ನನಗಂತೂ ತಿಳಿಯಲಿಲ್ಲ. ವಾರಾಂತ್ಯದಲ್ಲಿ, ಈ ಹಿಂದೆ ನಾವು ವಾಸವಿದ್ದ, ಓಡಾಡಿದ್ದ, ನಮ್ಮ ನಗು&ಅಳುಗಳ ಭಾಗವಾಗಿದ್ದ ಹಳೆಯ ಏರಿಯಾಗಳಲ್ಲವನನ್ನು ಓಡಾಡಿಸಬೇಕೆಂದುಕೊಂಡೆ. ನೆನ್ನೆಗಳ ಯಾವ ಕುರುಹು ಯಾವ ತಂತುವಿಗೆ ಬೆಸೆದುಕೊಳ್ಳುತ್ತದೋ, ಯಾವ ತಾಣದಲ್ಲಿ ಯಾವ ನೆನಪು ಜೀವಂತವಾಗುತ್ತದೆಯೋ ಬಲ್ಲವರಾರು? ಆದರೆ ಈ ಎಲ್ಲದರ ನಡುವೆ ಒಂದಂತೂ ಖಾತ್ರಿಯಾಗಿತ್ತು. ವೀರೇಶಿ ಮಾಡಿದ ದ್ರೋಹವಾಗಲೀ, ಪ್ರೀತಿಸಿ ಕಳೆದುಕೊಂಡ ಸಾಹಿತ್ಯಾಳಾಗಲೀ ಅವನಿಗೆ ನೆನಪೇ ಇರಲಿಲ್ಲ.
ದ್ವೇಷವನ್ನೂ, ಪ್ರೀತಿಯನ್ನೂ ಒಟ್ಟೊಟ್ಟಿಗೇ ಮರೆಯುವ ಇದೆಂಥಾ ಪೆಟ್ಟನ್ನು ಬದುಕು ಇವನಿಗೆ ಕೊಟ್ಟಿದೆಯೋ ಎಂದು ಅಚ್ಚರಿಯಾಯಿತು.
ಪುನೀ, ಪ್ರಹಲ್ಲಾದ ಎಲ್ಲೂ ಕಾಣ್ತಿಲ್ಲ. ಕಾಲ್ ಮಾಡಿದ್ರೆ ತೆಗೀತಿಲ್ಲ!
ಆಫೀಸಿನಲ್ಲಿದ್ದ ನನಗೆ ಕರೆ ಮಾಡಿದ ಮಡದಿ ಅಂಬಿಕಾ ಹಾಗೆಂದಾಗ ಇಡೀ ಕಟ್ಟಡವೇ ತಲೆಯ ಮೇಲೆ ಕುಸಿದಂತೆ ಬೆಚ್ಚಿಬಿದ್ದೆ. ಕರೆ ಕತ್ತರಿಸಿ ನೋಡಿದರೆ ಮೊಬೈಲಿನಲ್ಲಿ ಅವನು ಕಳಿಸಿದ ಸಂದೇಶ ಕಂಡಿತು. ಎಲ್ಲಿಗೋ ಹೋಗುತ್ತಿರುವುದಾಗಿ ಮೆಸೇಜು ಕಳಿಸಿದ್ದಾನೆ. ಅದನ್ನು ಅಂಬಿಕಾಗೆ ಹೇಳುವುದನ್ನು ಮರೆತಿದ್ದಾನೆ ಎಂದು ಸಮಾಧಾನವಾಯಿತು. ಆದರೆ ಪೂರ್ತಿ ಮೆಸೇಜು ಓದಿದ್ದೇ ಮೊದಲಿಗಿಂತ ಹೆಚ್ಚು ಆಘಾತವಾಗಿ ಕುಸಿಯುವಂತಾಯಿತು.
ವೀರೇಶಿಯನ್ನ ಭೇಟಿಯಾಗದೇ ತುಂಬಾ ಟೈಮಾಗಿದೆ. ಒಮ್ಮೆ ಹೋಗಿ ಮಾತಾಡಿಸ್ಕೊಂಡು ಬರ್ತೇನೆ!
ಪರಮ ಶತ್ರು! ಸರ್ವನಾಶ ಮಾಡುವ ಒಂದು ಅವಕಾಶಕ್ಕಾಗಿ ಕಾದು ಕುಳಿತಿರುವನು! ಅವನ ಜೊತೆಗಿನ ದ್ವೇಷದ ಅಧ್ಯಾಯವನ್ನು ಮರೆತು, ಅದರ ಹಿಂದಿನ ಸ್ನೇಹವೊಂದನ್ನೇ ನೆನಪಿಟ್ಟುಕೊಂಡು ಭೇಟಿಯಾಗಲು ಹೊರಟಿದ್ದಾನೆ ಪ್ರಹಲ್ಲಾದ! ಕೈಕಾಲು ತಣ್ಣಗಾದಂತಾಯಿತು. ಏನು ಮಾಡುವುದೋ ತಿಳಿಯಲಿಲ್ಲ್. ಈ ಕಗ್ಗಂಟನ್ನೆಲ್ಲ ಪೋಲೀಸರಿಗೆ ಅರ್ಥಮಾಡಿಸಿ ಕರೆದೊಯ್ಯುವುದು ಸಾಧ್ಯವಿಲ್ಲ. ಬೇರೆ ದಾರಿಯೇ ಇಲ್ಲ. ಇಂಥಾ ವಿಷಯಗಳಲ್ಲಿ ಜೊತೆ ನಿಂತು ಬಡಿದಾಡಬಲ್ಲ ಏಕಮಾತ್ರ ಗೆಳೆಯನಾದ ಆ್ಯಂಡ್ರೂ$್ಯವಿಗೆ ವಿಷಯ ತಿಳಿಸಿದೆ.
ಮುಂದಿನ ಐದು ನಿಮಿಷದಲ್ಲಿ ನಮ್ಮಿಬ್ಬರನ್ನು ಕೂರಿಸಿಕೊಂಡ ಬೈಕು ಜಯನಗರದ ಕಡೆ ಓಡುತ್ತಿತ್ತು.
ಜಯನಗರದ ಬೀದಿಗಳನ್ನು ಮಧ್ಯಾಹ್ನದೂಟದ ನಂತರದ ಮೌನ ಆವರಿಸಿತ್ತು. ಒಳಗೊಳಗೆ ಸಾಗಿದಂತೆಲ್ಲ ಸದ್ದು ಕಡಿಮೆಯಾಯಿತು. ಎದೆಯ ಮೊರೆತವೂ ಹೆಚ್ಚಾಯಿತು. ವೀರೇಶಿಯ ಮನೆಯ ಬೀದಿ ತಲುಪಿದ್ದೇ ಆ್ಯಂಡ್ರೂ$್ಯಗೆ ಬೈಕು ನಿಲ್ಲಿಸಲು ಹೇಳಿದೆ. ಒಬ್ಬನೇ ನಡೆಯುತ್ತಾ ವೀರೇಶಿಯ ಮನೆಯನ್ನು ಸಮೀಪಿಸಿದೆ. ಇಷ್ಟು ಹೊತ್ತು ಮಾಡಿದ ಯಾವ ಕರೆಯನ್ನೂ ಪ್ರಹಲ್ಲಾದ ಸ್ವೀಕರಿಸಿರಲಿಲ್ಲ. ಅವನಿಗೇನೂ ಆಗಿಲ್ಲ ತಾನೇ? ದ್ರೋಹಿ ವೀರೇಶಿ. ನೆನಪು&ಮರೆವುಗಳ ವಿಚಿತ್ರ ಸಮ್ಮಿಶ್ರಣದಲ್ಲಿ ಬಳಲುತ್ತಿರುವ ಮುಗ್ಧನನ್ನು 'ಕೊಲ್ಲಲ್ಲು ಬಂದವ'ನೆಂದು ಒಳಗೆ ಹಾಕಿಸಿಬಿಟ್ಟನೇ? ಯಾಕೆ ಈ ಮನೆಯಿಂದ ಯಾವ ಸದ್ದೂ ಕೇಳುತ್ತಿಲ್ಲ? ಭಯವಾಯಿತು. ಬೀದಿಯ ಆ ಅಂಚಿನಲ್ಲಿ ನಿಂತು ನನ್ನೊಂದು ಸನ್ನೆಗಾಗಿ ಕಾಯುತ್ತಿದ್ದ ಆ್ಯಂಡ್ರೂ$್ಯನನ್ನು ಕರೆಯಲೆಂದು ತಿರುಗಿದೆ. ಅಷ್ಟರಲ್ಲಿ ಮಣಭಾರದ ಕೈಯೊಂದು ನನ್ನ ಹೆಗಲ ಮೇಲೆ ಬಿತ್ತು.
ವೀರೇಶಿ! ನನ್ನ ಹಿಂದೆಯೇ ನಿಂತಿದ್ದಾನೆ! ತನ್ನ ಮನೆಯೆದುರು ಅನುಮಾನಾಸ್ಪದವಾಗಿ ನಿಂತಿರುವ ನನ್ನನ್ನೇ ದಿಟ್ಟಿಸುತ್ತಿದ್ದಾನೆ! ಹೃದಯದಲ್ಲಿ ಬಡಿದುಕೊಳ್ಳುತ್ತಿದ್ದ ನಗಾರಿ ಧಡಾಲ್ಲನೆ ಒಡೆದಂತಾಯಿತು. ರಸ್ತೆಯಂಚಿನಲ್ಲಿ ನಿಂತಿದ್ದ ಆ್ಯಂಡ್ರೂ$್ಯವಿಗೆ ಅಪಾಯದ ಸುಳಿವು ಸಿಕ್ಕಿ ನನ್ನತ್ತ ಧಾವಿಸಿ ಬರತೊಡಗಿದ. ನಾನು ಮುಂದಿನ ಣಕ್ಕೆ ಅಣಿಯಾಗುತ್ತ ನಿಂತಲ್ಲೆ ಮುಷ್ಠಿ ಬಿಗಿದೆ.
ಅರೇ ಪುನೀ, ಯಾಕೆ ಒಳಗೆ ಬರದೇ ಇಲ್ಲೆ ನಿಂತಿದ್ದೀ? ಪ್ರಹಲ್ಲಾದ ಒಳಗಿದ್ದಾನೆ. ಬಾ ಒಳಗೆ!
ನಮ್ಮ ನಡುವೆ ಇಂಥಾದ್ದೊಂದು ಮನಸ್ಥಾಪ ನಡೆದೇ ಇಲ್ಲವೆಂಬಂತೆ, ನಾವು ಇನ್ನಾದರೂ ಆತ್ಮೀಯವಾಗಿಯೇ ಇರುವ ಗೆಳೆಯರೇನೋ ಎಂಬಂತೆ ವೀರೇಶಿ ಮಾತಾಡಿಬಿಟ್ಟ. ನನಗೇನೂ ಅರ್ಥವಾಗಲಿಲ್ಲ. ಧಾವಿಸಿ ಬರುತ್ತಿದ್ದ ಆ್ಯಂಡ್ರೂ$್ಯವಿಗೆ 'ಇರು' ಎಂಬಂತೆ ಕೈ ಮಾಡಿ ಮೆಟ್ಟಿಲೇರಿ ವೀರೇಶಿಯ ಮನೆಯತ್ತ ನಡೆಯತೊಡಗಿದೆ. ಒಳಗಿನ ಪರಿಸ್ಥಿತಿ ಏನು ಎನ್ನುವುದನ್ನು ನೋಡಿ ಮುಂದಿನ ನಿರ್ಧಾರ ಮಾಡುವ ಇರಾದೆ ನನ್ನದಾಗಿತ್ತು. ಆ್ಯಂಡ್ರೂ$್ಯ ಸಹಾ ನನ್ನ ಇಶಾರೆಗೆ ಕಾಯುತ್ತ ತುಸು ದೂರದಲ್ಲಿ ನಿಂತ. ಮೆಟ್ಟಿಲುಗಳು ಮುಗಿದು ಬಾಲ್ಕನಿ ತಲುಪಿದೆ. ನಿಗೂಢತೆಯೆಲ್ಲವನ್ನೂ ಒಳಗಿಟ್ಟುಕೊಂಡಿರುವ ಮನೆಯ ಬಾಗಿಲು ಹೆಜ್ಜೆ ಹೆಜ್ಜೆಯಾಗಿ ಸಮೀಪವಾಯಿತು. ಚಪ್ಪಲಿ ಕಳಚುವ ತಾಳ್ಮೆಯೂ ಇಲ್ಲದೇ ಬಾಗಿಲಿನೆದುರು ಜಿಗಿದು ಒಳಗೆ ನೋಡಿಯೇ ಬಿಟ್ಟೆ..
ಒಳಗಡೆ ಕುರ್ಚಿಯಲ್ಲಿ ಪ್ರಹಲ್ಲಾದ ನಗುತ್ತಾ ಕುಳಿತಿದ್ದ!
ಜನ್ಮಾಂತರದ ವೈರಿಗಳಿಬ್ಬರು ಭೇಟಿಯಾದಾಗ ಹುಟ್ಟುವಂಥಾ ಯಾವ ಪ್ರುಬ್ಧತೆಯೂ ಅಲ್ಲಿರಲಿಲ್ಲ. ವೀರೇಶಿ ನನ್ನನ್ನೂ ಕುಳಿತುಕೊಳ್ಳಲು ಹೇಳಿದ. ದೇಶಾವರಿ ಹರಟಿದ. ಪ್ರಹಲ್ಲಾದನಿಗಾದ ಆಘಾತದ ಬಗ್ಗೆ ವಿಷಾದದಲ್ಲಿ ಮಾತಾಡಿದ. ಒಳಗೆಲ್ಲ ಹುಡುಕಿ ತನಗೆ ಗೊತ್ತಿರುವ ಆಯುರ್ವೇದದ ಡಾಕ್ಟರೊಬ್ಬರ ಕಾರ್ಡು ಕೊಟ್ಟು ಇವರ ಬಳಿ ಹೋಗುವುದಕ್ಕೆ ಹೇಳಿದ. ಅನಾಹುತದ ಅಧ್ಯಾಯವೊಂದು ಅಳಿಸಿಯೇ ಹೋಗಿದೆಯೆಂಬಂತೆ ಇಬ್ಬರೂ ನಗುನಗುತ್ತಾ ಮಾತಾಡತೊಡಗಿದರು. ಸಿಡಿಯಬೇಕಿದ್ದ ಜ್ವಾಲಾಮುಖಿಗಳೆರಡು ರ್ಜರನೆ ಇಳಿದುಹೋದ ಸೋಜಿಗವ ಅರಗಿಸಿಕೊಳ್ಳಲಾಗದ ನಾನು ಕುಳಿತು ನೋಡುತ್ತಲೇ ಇದ್ದೆ.
ಸಮಯ ಕಳೆಯಿತು. 'ಸರಿ. ನಾವಿನ್ನು ಬರ್ತೇವೆ' ಎಂದು ಮೇಲೆದ್ದೆವು. ತೀರಾ ಹೊಸಿಲು ದಾಟಬೇಕೆನ್ನುವಷ್ಟರಲ್ಲಿ ವೀರೇಶಿ 'ಪ್ರಹಲ್ಲಾದ' ಎಂದು ಕರೆದ. ಇಬ್ಬರೂ ಹೊರಳಿನೋಡಿದೆವು. ಮುರಿದು ತಲೆಯ ಮೇಲೆ ಬೀಳಬೇಕಿದ್ದ ರೆಂಬೆಯೊಂದು ಹೂವನ್ನಷ್ಟೇ ಉದುರಿಸಿ ಸುಮ್ಮನಾದಂತೆ ವೀರೇಶಿ ಮುನ್ನಡಿಯಿಟ್ಟವನೇ ಪ್ರಹಲ್ಲಾದನನ್ನು ಬಾಚಿ ತಬ್ಬಿಕೊಂಡುಬಿಟ್ಟ.
ನನ್ನ ಮಿಸು ಗೆಳೆಯಾ. ದೊಡ್ಡ ತಪ್ಪು ಮಾಡಿಬಿಟ್ಟೆ. ಸುಮ್ಮನೆ ದುಡುಕಿಬಿಟ್ಟೆ. ಆದರೆ ಅಷ್ಟೆಲ್ಲ ಆದಮೇಲೂ ನೀನು ನನಗೇನೂ ಕೆಡುಕು ಮಾಡದೇ ಎದ್ದು ಹೋದೆಯಲ್ಲ? ಅದು ನನ್ನನ್ನು ಕೊರೆಯುತ್ತಲೇ ಇತ್ತು. ಮುಂದೆ ಸತ್ಯ ಗೊತ್ತಾದ ಮೇಲಂತೂ ಪಶ್ಚಾತ್ತಾಪ ನನ್ನನ್ನು ಇರಿಯತೊಡಗಿತು. ಆದರೆ ಎದುರಿಗೆ ಬಂದು ಮೆ ಕೇಳುವ ಧೈರ್ಯವಾಗಲಿಲ್ಲ್. ಕೊನೆಗೆ ಆ ಬಿಡುಗಡೆಯನ್ನೂ ನೀನೇ ಕೊಟ್ಟುಬಿಟ್ಟೆ. ಆಗಿದ್ದೆಲ್ಲವನ್ನೂ ಮರೆತು ಮನೆಗೇ ಬಂದ್ಯಲ್ಲ! ನಾನು ಕಾಣುತ್ತಿದ್ದಂತೇ ಹೇಗಿದೀಯೋ ಅಂತ ಕೇಳಿದ್ಯಲ್ಲ? ನನ್ನ ಪಶ್ಚಾತ್ತಾಪದ ಬೆಂಕಿಯೆಲ್ಲ ಅಲ್ಲೆ ಆರಿಹೋಯ್ತು!
ಎಲ್ಲವೂ ನಿಚ್ಚಳವಾಗತೊಡಗಿದವು. ನಡೆದ ಮನಸ್ಥಾಪದ ಅರಿವೇ ಇಲ್ಲದೆ ಮನೆಬಾಗಿಲಿಗೆ ಬಂದ ಪ್ರಹಲ್ಲಾದನ ನಡೆಯನ್ನು ವೀರೇಶಿ ಮೆಯೆಂದು ತಿಳಿದಿದ್ದಾನೆ! ಇನ್ನಾದರೂ ಒಳಗೆ ವಿಷವೇ ತುಂಬಿರುವ, ಹಗೆಸಾಧನೆಗೆ ಕಾಯುತ್ತಿರುವ ಅವನನ್ನು ಕಲ್ಪಿಸಿಕೊಳ್ಳುತ್ತ ನಾವಿದ್ದ ಹೊತ್ತಿಗೇ ಇಲ್ಲಿ ನಿಜವಾದ ವೀರೇಶಿ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದ!
ವೀರೇಶಿಯ ಅಪ್ಪುಗೆಯಲ್ಲಿದ್ದ ಪ್ರಹಲ್ಲಾದ ಅವನೇನು ಹೇಳುತ್ತಿದ್ದಾನೆಂಬುದೇ ಅರ್ಥವಾಗದೇ ಮಿಕಿಮಿಕಿ ನೋಡುತ್ತಿದ್ದ. ಅವನ ಪ್ರಶ್ನೆಗಳೇನಾದರೂ ಆಚೆ ಬಂದರೆ ಕೆಲಸ ಕೆಡುತ್ತದೆಂದೆಣಿಸಿ ಫಟ್ಟನೆ ಮುಂದುವರಿದೆ. ವೀರೇಶಿಯ ಭುಜ ತಟ್ಟಿ ತಲೆ ಕಡಿಸ್ಕೋಬೇಡಿ. ಎಲ್ಲವೂ ಒಳ್ಳೇದಾಯ್ತಲ್ಲ? ನಾನು ಆಫೀಸಿನ ಮಧ್ಯ ಎದ್ದು ಬಂದಿದೀನಿ. ಇನ್ನೊಮ್ಮೆ ಸಿಗೋಣ ಎಂದವನೇ ಪ್ರಹಲ್ಲಾದನನ್ನು ಅವನ ಪ್ರಶ್ನೆಗಳ ಸಮೇತ ಎಳೆದುಕೊಂಡು ಹೊರಟೇಬಿಟ್ಟೆ. ಮೊಟ್ಟಮೊದಲ ಬಾರಿಗೆ ಮರೆವೂ ಎಂಥ ವರವಲ್ಲವೇ ಅನ್ನಿಸಿಬಿಟ್ಟಿತು.
ಟೆರಾಸಿನ ಮೇಲೆ ಹಾಸಿದ್ದ ಬೇವಿನ ಮರದ ನೆರಳಲ್ಲಿ ನಾನೂ, ಪ್ರಹಲ್ಲಾದನೂ ಕುಳಿತಿದ್ದೆವು. ಕಪ್ಪೂ ಅಲ್ಲದ, ಬಿಳುಪೂ ಅಲ್ಲದ ಇರುಳೊಂದು ಹೊರಗೆ ಜಾರಿಯಲ್ಲಿತ್ತು. ಅಷ್ಟರಲ್ಲಿ ಬಿಂದು ಕರೆಮಾಡಿದಳು. ಪ್ರಹಲ್ಲಾದನಿಗೆ ಕೇಳದಂತೆ ಬದಿಗೆ ಹೋಗಿ ನಡೆದಿದ್ದನ್ನೆಲ್ಲ ಹೇಳಿದೆ.
ನೋಡಿದ್ಯಾ ಪುನಿ, ಅವನ ಮರೆವು ಎಂಥಾ ಅನಾಹುತ ಮಾಡುತ್ತೆ ಅಂತ? ನಂಗಂತೂ ಭಯವಾಗುತ್ತೆ. ಒಂದೊಂದ್ಸಲ ನನ್ನನ್ನೇ ಸಾಹಿತ್ಯಾ ಅಂತಾನೆ. ಅವಳನ್ನ ಬಿಟ್ಬಂದಿರೋದೇ ಅವನಿಗೆ ನೆನಪಿಲ್ಲವೇನೋ? ನನ್ನನ್ನು ಅವಳು ಅಂದ್ಕೊಂಡೇ ಜೊತೆಗಿದಾನೇನೋ ಅನ್ನಿಸಿಬಿಡುತ್ತೆ. ಈ ಶಾಪದಿಂದ ಅದ್ಯಾವಾಗ ಮುಕ್ತಿ ಸಿಗುತ್ತೋ?
ಬಿಂದು ಖಿನ್ನಳಾಗಿ ನುಡಿದಳು. ಎದುರಿಗೆ ಶಹರ ಕರಿಗಂಬಳಿಯ ಮೇಲೆ ಚೆಲ್ಲಾಡಿದ ಬಿಳಿ ಮಣಿಗಳಂತೆ ಹೊಳೆಯುತ್ತ ನಿಂತಿತ್ತು.
ಇಲ್ಲ ಬಿಂದೂ, ಪ್ರಹಲ್ಲಾದನಿಗೆ ದೊರಕಿರುವುದು ಶಾಪವಲ್ಲ, ವರ. ನಮಗ್ಯಾರಿಗೂ ಸಿಗದ ಚಂದದ ವರ! ಅಪಘಾತವಾಗುವ ಮುನ್ನ ಅವನು ಹೇಗಿದ್ದ ಅಂತ ಒಮ್ಮೆ ನೆನಪು ಮಾಡ್ಕೋ? ಸಾಹಿತ್ಯಾಳನ್ನ ಕಳ್ಕೊಂಡೆ ಅಂತ ಕೊರಗುತ್ತಿದ್ದ. ವೀರೇಶಿಯ ದ್ರೋಹಕ್ಕೆ ಏನೂ ಮಾಡದೇ ಎದ್ದುಬಂದೆ ಅಂತ ರೊಚ್ಚಿಗೇಳುತ್ತಿದ್ದ. ನೆನಪೆನ್ನುವುದು ಅವನ ಪಾಲಿಗೆ ಯಾವತ್ತೂ ವರವಾಗಿರಲೇ ಇಲ್ಲ! ಆದರೆ ಈಗೇನಾಗಿದೆ ನೋಡು? ಸಾಹಿತ್ಯಾಳನ್ನು ಬಿಟ್ಟೆದ್ದುಬಂದ ಅಧ್ಯಾಯ ಅವನಿಗೆ ಮರೆತುಹೋಗಿದೆ. ನೀನು ಅವನ ಪಾಲಿಗೆ ಸಾಹಿತ್ಯ ಹಾಗೂ ಬಿಂದು ಎರಡೂ ಆಗಿದ್ದೀಯ! ಅಲ್ಲಿ ಕೊನೆಯಾಗದೇ ಉಳಿದ ಪ್ರೀತಿಯೀಗ ಹರಿಯುತ್ತಿರುವುದು ನಿನ್ನ ಮೇಲೇ ಅಲ್ವಾ? ಇನ್ನು ವೀರೇಶಿಯ ವಿಷಯದಲ್ಲೂ ದ್ವೇಷದ ಅಧ್ಯಾಯವ ಅವನು ಮರೆತಾಗಿದೆ. ನೆನಪಿರುವುದೆಲ್ಲ ಸ್ನೇಹದ ಪುಟಗಳು ಮಾತ್ರ. ಇನ್ನೆಂದೂ ಆ ವಿಷಯದಲ್ಲವನು ಕ್ರುದ್ಧನಾಗುವುದಿಲ್ಲ. ಕೊರಗುವುದೂ ಇಲ್ಲ. ಜೀವ ಹಿಂಡುತ್ತಿದ್ದ ನೆನಪುಗಳನ್ನು ಮನಸ್ಸು ತಾನಾಗಿಯೇ ನೀಗಿಕೊಂಡಿದೆ! ನನಗೆ ನಾನೇ ಹೇಳುತ್ತಿರುವಂತೆ ಮುಂದುವರೆಸಿದೆ.
ಖಾಯಿಲೆ ಅವನಿಗಲ್ಲ ಬಿಂದೂ, ನಮಗೆ! ನಮಗೆಲ್ಲ ನೆನಪಿನ ಖಾಯಿಲೆಯಿದೆ. ಕಹಿಯ ನೆನಪು, ಕಷ್ಟದ ನೆನಪು, ದ್ವೇಷದ ನೆನಪು.. ಬೇಕೆಂದರೂ ನಾವದನ್ನೆಲ್ಲ ಮರೆಯಲಾರೆವು. ಆದರೆ ಪ್ರಹಲ್ಲಾದನ ವಿಷಯದಲ್ಲಿ ಬದುಕೇ ಅವನ್ನೆಲ್ಲ ಅಳಿಸಿ ಹಾಕಿದೆ. ಇವತ್ತು ವೀರೇಶಿಯ ಮನದಲ್ಲಿ ಪಶ್ಚಾತ್ತಾಪ ಇಲ್ಲದೇ ಹೋಗಿದ್ದರೂ, ರೋಶವೇ ಇದ್ದಿದ್ದರೂ ಅದು ಸುಡುತ್ತಿದ್ದದ್ದು ಅವನನ್ನೇ ಹೊರತು ಎಲ್ಲವನ್ನೂ ಮರೆತ ಪ್ರಹಲ್ಲಾದನನ್ನಲ್ಲ. ದ್ವೇಷ, ದು@ಖ, ಆತಂಕಗಳು ಬೆರೆತ ನಮ್ಮೀ ಬದುಕು ಕಾಯುತ್ತಿರುವುದು ಎಲ್ಲವನ್ನೂ ಮಿಸಿಬಿಡುವ ಒಂದೇ ಒಂದು ಮರೆವಿಗಾಗಿ. ಅದು ಸಿಕ್ಕ ಕಾರಣಕ್ಕೇ ಪ್ರಹಲ್ಲಾದನೀಗ ನೆಮ್ಮದಿಯಾಗಿದ್ದಾನೆ. ಚಿಂತಿಸಬೇಡ.
ಬಿಂದುವಿನ ಪ್ರಶ್ನೆಗಳೆಲ್ಲ ಮುಗಿದಿದ್ದವು. ಅಷ್ಟರಲ್ಲೆ ಪ್ರಹಲ್ಲಾದ ಸಮೀಪ ಬಂದ. ವೀರೇಶಿಯೇಕೆ ಹಾಗೆಂದನೆಂದು ಕೇಳುತ್ತಾನೇನೋ ಅಂದುಕೊಂಡೆ. ಆದರೆ ಬಳಿಬಂದವನೇ ಪ್ರಹಲ್ಲಾದ ಇಲ್ಲೆಲ್ಲೋ ವರ್ಲ್ಡ್ ಟ್ರೇಡ್ ಸೆಂಟರ್ ಕಾಣ್ತಿತ್ತಲ್ಲೋ, ಅದೇ ನಿತ್ಯ ದೀಪೋತ್ಸವದ ಕಟ್ಟಡ ಅಂತ ಹೇಳ್ತಿದ್ವಲ್ಲ, ಎಲ್ಲಿ ಅದು? ಎಂದು ಆಚೆಯ ಕತ್ತಲಲ್ಲಿ ಹುಡುಕತೊಡಗಿದ. ಆ ವಿಷಯವನ್ನೂ ಅವನಾಗಲೇ ಮರೆತಾಗಿತ್ತು. ಅಪಘಾತವಾದ ದಿನದಿಂದ ಇಂಥಾ ಹಲವು ಭಾವುಕ ಅಪ್ಪುಗೆ, ಸಾಂತ್ವನಗಳನ್ನು ನೋಡಿದ್ದವನಿಗೆ ಇದೂ ಅಂಥದ್ದೇ ಒಂದು ಅನ್ನಿಸಿತ್ತೇನೋ? ಅವನ ಬದುಕಿನ ಖುಷಿಗಳೆಲ್ಲವ ಕಾಯುತ್ತಿರುವ ಪವಾಡದಂಥಾ ಮರೆವಿನಲ್ಲಿ ನಾನೂ ಪಾಲುದಾರನಾಗಬೇಕೆಂದುಕೊಳ್ಳುತ್ತಾ ಅವನ ಹುಡುಕಾಟದಲ್ಲಿ ಸೇರಿಕೊಂಡೆ.