

ರಾಮನಗರ: ಕನ್ನಡದ ನಂಬರ್ 1 ಪತ್ರಿಕೆ 'ವಿಜಯವಾಣಿ'ಗೆ ದಶಮಾನೋತ್ಸವ ಸಂಭ್ರಮ. ಈ ಪ್ರಯುಕ್ತ ರಾಮನಗರ ಜಿಲ್ಲೆಯ ಗೊಲ್ಲರದೊಡ್ಡಿಯಲ್ಲಿ ಹಮ್ಮಿಕೊಂಡಿದ್ದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿಯೇ ಗ್ರಾಮದ ಜನರ ಅಹವಾಲು ಆಲಿಸಿದ ಡಿಸಿಎಂ, ಎಲ್ಲ ಸಮಸ್ಯೆಗಳನ್ನು ನಿಗದಿತ ಅವಧಿಯಲ್ಲಿ ಬಗೆಹರಿಸುವುದಾಗಿ ತಿಳಿಸಿದರು. ಕಲ್ಲು ಬಂಡೆ ಮೇಲೆ ನೆಲೆಯಾಗಿರುವ ಗ್ರಾಮದ ಶಿಳ್ಯೆಕ್ಯಾತ ಜನರಿಗೆ ಮನೆಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಕೆಲ ಸಮಸ್ಯೆಗಳ ಇತ್ಯರ್ಥಕ್ಕೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆ ಮೂಲಕ ವಿಜಯವಾಣಿಯ ಕಾರ್ಯಕ್ರಮ ಬಡಜನರ ಸಮಸ್ಯೆಗೆ ಧ್ವನಿಯಾಯಿತು.
ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಜಿಪಂ ಅಧ್ಯಕ್ಷ ಅಶೋಕ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಪಂ ಸಿಇಒ ಇಕ್ರಂ, ಎಸ್ಪಿ ಎಸ್.ಗಿರೀಶ್, ವಿಆರ್ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕೆ.ಆರ್., ಗ್ರಾಪಂ ಅಧ್ಯಕ್ಷೆ ಸರಿತಾ ಶ್ರೀಧರ್ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಜಾನಪದ ಕಲಾತಂಡಗಳು ಮೆರುಗು ನೀಡಿದವು.