

ಮೇಷ: ಹೊಸ ಜವಾಬ್ದಾರಿ ಹೆಗಲೇರಲಿದೆ. ಯಶಸ್ವೀ ನಿರ್ವಹಣೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಹಣದ ಅಡಚಣೆ. ಶುಭಸಂಖ್ಯೆ: 1
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ತಿರುಗಾಟ ಮಾಡಬೇಕಾದೀತು. ಆತ್ಮೀಯ ಸ್ನೇಹಿತನ ಮನೆಗೆ ಭೇಟಿ. ಶುಭಸಂಖ್ಯೆ: 7
ಮಿಥುನ: ಸರ್ಕಾರಿ ಕೆಲಸಗಳಲ್ಲಿ ವಿಘ್ನ ಉಂಟಾಗಿ ಬೇಸರ. ಅನವಶ್ಯಕ ಖರ್ಚು. ಆರೋಗ್ಯ ಸುಧಾರಣೆಯಾಗುವುದು. ಶುಭಸಂಖ್ಯೆ: 7
ಕಟಕ: ವ್ಯಾಪಾರ ಉದ್ಯೋಗಸ್ಥರಿಗೆ ಅಲ್ಪ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ಸಂಜೆಯ ವೇಳೆಗೆ ಶುಭವಾರ್ತೆ ಬರಲಿದೆ. ಶುಭಸಂಖ್ಯೆ: 6
ಸಿಂಹ: ಶುಭಕಾರ್ಯ ಯತ್ನ ಸಫಲ. ಅಧಿಕ ತಿರುಗಾಟ. ತಾಯಿ ಮಾತನ್ನು ನಿರ್ಲಕ್ಷಿಸುವುದು ಸಲ್ಲದು. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ಕೃಷಿಕರಿಗೆ ಪ್ರಗತಿದಾಯಕ ದಿನ. ದಿನದ ಮಧ್ಯಭಾಗದಲ್ಲಿ ಚಿಂತೆ. ಸಂಜೆಗೆ ನಿರಾಳ. ಶುಭಸಂಖ್ಯೆ: 4
ತುಲಾ: ಮಿತ್ರರಿಂದ ವಂಚನೆ. ಕುಟುಂಬದಲ್ಲಿ ಸಮಾಧಾನಕರ ವಾತಾವರಣ. ಮನೆಯಲ್ಲಿ ಮಂಗಳ ಕಾರ್ಯದ ನಿರ್ಧಾರ. ಶುಭಸಂಖ್ಯೆ:3
ವೃಶ್ಚಿಕ: ಪತ್ನಿಯೊಂದಿಗೆ ವಿರಸ. ಮಾತುಕತೆಯಿಂದ ಶಾಂತಿ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭ ಸಿಗಲಿದೆ. ಶುಭಸಂಖ್ಯೆ: 2
ಧನಸ್ಸು: ಕಾರ್ಯಸಾಧನೆಗಾಗಿ ಅನವಶ್ಯಕ ಖರ್ಚು. ಮಾತಿನಿಂದ ಶತ್ರುಗಳು ಸೃಷ್ಟಿಯಾಗುವ ಸಾಧ್ಯತೆ ಜಾಸ್ತಿಯಿದೆ. ಹುಷಾರು. ಶುಭಸಂಖ್ಯೆ: 8
ಮಕರ: ದುಷ್ಟ ಜನರ ಸಹವಾಸ. ಮನಸ್ಸಿಗೆ ಚಿಂತೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ ಉಂಟಾಗಬಹುದು. ಪತ್ನಿಗೆ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 6
ಕುಂಭ: ಅನಗತ್ಯವಾಗಿ ಧನವ್ಯಯ. ಕೃಷಿಯಲ್ಲಿ ಲಾಭ. ಹಿತೈಷಿಗಳಿಂದ ಕಿರುಕುಳ. ಕೋರ್ಟು ವ್ಯವಹಾರಗಳಲ್ಲಿ ಅಡಚಣೆ. ಶುಭಸಂಖ್ಯೆ: 8
ಮೀನ: ವ್ಯಾಪಾರದಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ . ನಿರೀಕ್ಷಿಸಿದ ಧನಲಾಭ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 9
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ