ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ವಿಶೇಷ ಧನಲಾಭ

Nitya-Bhavishya-vvani-1-2-1-1
Published on

ಮೇಷ: ವಿಶೇಷ ಧನಲಾಭ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನಗೊಂಡು ಸಮಾಧಾನ. ಶುಭಸಂಖ್ಯೆ:3

ವೃಷಭ: ಅನವಶ್ಯಕ ಖರ್ಚು. ಸಂಗಾತಿಯೊಂದಿಗೆ ವಿರಸ ತಲೆದೋರುವ ಸಾಧ್ಯತೆ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ:5

ಮಿಥುನ: ಆತ್ಮವಿಶ್ವಾಸಕ್ಕೆ ಪ್ರತಿರೋಧ. ಮನಸ್ಸಿನ ಚಂಚಲತೆ ನಿಮ್ಮ ಅವನತಿಗೆ ಕಾರಣವಾದೀತು. ಏಕಾಗ್ರತೆ ಸಾಧಿಸಲು ಪ್ರಯತ್ನಿಸಿ. ಶುಭಸಂಖ್ಯೆ:7

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ ಸಿಗಲಿದೆ. ವಿಶೇಷ ವಸ್ತ್ರ ಲಾಭ ಸಾಧ್ಯತೆ. ಶುಭಸಂಖ್ಯೆ:8

ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗದ ವಿಚಾರದಲ್ಲಿ ಅವಮಾನವಾದೀತು. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ:2

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ಸಂತಸದ ಸುದ್ದಿ ಬರಲಿದೆ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ:1

ತುಲಾ: ದುಂದುವೆಚ್ಚ ಉಂಟಾಗಲಿದೆ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ:9

ವೃಶ್ಚಿಕ: ಕೇತು ರಾಶಿಗತನಾದಾಗ ಎಲ್ಲ ಕೆಲಸಗಳಲ್ಲಿ ವಿಳಂಬವಾದರೂ ಅಂತ್ಯದಲ್ಲಿ ಜಯ-ಕಾರ್ಯ ಸಿದ್ಧಿ ನಿಮ್ಮದೇ ಆಗಿರಲಿದೆ. ಶುಭಸಂಖ್ಯೆ: 7

ಧನಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 6

ಮಕರ: ದೈಹಿಕ ಶ್ರಮ. ಫಲಿತಾಂಶದಲ್ಲಿ ನಿರಾಸೆ ಕಾಡೀತು. ಒತ್ತಡದ ಜೀವನ. ಹೊಟ್ಟೆಗೆ ಸಂಬಂಧಪಟ್ಟಂತೆ ನೋವು. ಹುಷಾರಾಗಿರಿ. ಶುಭಸಂಖ್ಯೆ:7

ಕುಂಭ: ಶತ್ರುಗಳಿಂದ ತೊಂದರೆ. ಯಾವುದರಲ್ಲೂ ದೃಢತೆ ಇಲ್ಲ. ಆಹಾರ ಸೇವಿಸುವಾಗ ಮಿತಿ ಇರಲಿ. ಎಚ್ಚರ ತಪ್ಪಿದರೆ ಆಪತ್ತು. ಶುಭಸಂಖ್ಯೆ:5

ಮೀನ: ಇಷ್ಟಪಟ್ಟ ವಸ್ತು ಸಿಗಲಿದೆ. ಉತ್ತಮ ಭೋಜನದಿಂದ ಸಂತೋಷ. ಮಾತ್ರವಲ್ಲ, ಧನಲಾಭದ ಸಂತಸವೂ ಜತೆಗಿರಲಿದೆ. ಶುಭಸಂಖ್ಯೆ:2

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net