ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಜೀವನದಲ್ಲಿ ನವೀನತೆ ಕಾಣುವುದು

Nithya Bhavishya
Published on

ಮೇಷ: ಸಾರ್ವಜನಿಕ ಜೀವನದಲ್ಲಿ ಅಗೌರವ. ಮನಸ್ಸಿಗೆ ನಾನಾರೀತಿಯ ಚಿಂತೆ. ತಾಯಿಯ ಸಲಹೆ ಪಾಲಿಸಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 2

ವೃಷಭ: ಭವಿಷ್ಯದ ದಿನಗಳಲ್ಲಿ ತೀರ್ಥಯಾತ್ರೆಗೆ ನಿರ್ಧಾರ. ಹೊಸ ಯೋಜನೆಯನ್ನು ಕೈಗೊಳ್ಳಬೇಡಿ. ವಿಫಲತೆ ಕಾಡಬಹುದು. ಶುಭಸಂಖ್ಯೆ: 9

ಮಿಥುನ: ಕುಟುಂಬದಲ್ಲಿ ಅಸಮಾಧಾನ. ಸಂಗಾತಿಯ ಸಲಹೆ ಮಾರ್ಗದರ್ಶನದಿಂದ ಹೊಸ ಆಶಾಕಿರಣ. ಆತ್ಮೀಯರ ವಿಯೋಗ. ಶುಭಸಂಖ್ಯೆ: 2

ಕಟಕ: ಆತ್ಮೀಯರ ಸಲಹೆಯಿಂದ ಹೊಸ ಯೋಜನೆಗೆ ಚಾಲನೆ. ಮಗನಿಗೆ ವಿದೇಶದಲ್ಲಿ ಉದ್ಯೋಗ. ಹಿತೈಷಿಗಳಿಂದ ಸಹಕಾರ. ಶುಭಸಂಖ್ಯೆ: 4

ಸಿಂಹ: ಖಾಸಗಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಅತಿ ಆತ್ಮಾಭಿಮಾನ ಸಮಸ್ಯೆಗೆ ಕಾರಣ. ಸಂಗಾತಿಯ ಸಹಾಯ. ಶುಭಸಂಖ್ಯೆ: 2

ಕನ್ಯಾ: ಕುಟುಂಬದ ಅಸಹಕಾರ. ಸ್ನೇಹಿತರಿಂದ ಸಹಾಯ. ಜೀವನದಲ್ಲಿ ನವೀನತೆ ಕಾಣುವುದು. ಧರ್ಮಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 3

ತುಲಾ: ವ್ಯಾಪಾರ, ಉದ್ಯೋಗಗಳು ಉತ್ತಮ. ಭೂ ವ್ಯವಹಾರದಲ್ಲಿ ದೃಢ ನಿರ್ಧಾರದಲ್ಲಿ ಗೊಂದಲ. ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 8

ವೃಶ್ಚಿಕ: ಕುಟುಂಬದವರೊಂದಿಗೆ ಸಂತೋಷದ ಸಹಜೀವನ. ಸರ್ಕಾರಿ ಕೆಲಸಗಳಲ್ಲಿ ಸಫಲತೆ. ಸಹೋದರಿಯ ಸಾಂತ್ವನ. ಶುಭಸಂಖ್ಯೆ: 7

ಧನಸ್ಸು: ಕುಟುಂಬದವರು ವಿಶ್ವಾಸದಿಂದ ನಡೆದುಕೊಳ್ಳುವರು. ಸಾರ್ವಜನಿಕ ಜೀವನದಲ್ಲಿ ಬೆಂಬಲ. ನಂಬಿದವರಿಂದಲೇ ಮೋಸ. ಶುಭಸಂಖ್ಯೆ: 6

ಮಕರ: ಧನಸ್ಥಾನದ ಗುರುವಿನಿಂದ ವ್ಯಾಪಾರದಲ್ಲಿ ಲಾಭ. ಅವಿವಾಹಿತರಿಗೆ ಶುಭ ಸುದ್ದಿ. ಹೊಸ ಕಾರ್ಯಯೋಜನೆ ಸಫಲ. ಶುಭಸಂಖ್ಯೆ: 5

ಕುಂಭ: ಮಕ್ಕಳಿಂದ ಧನವ್ಯಯ. ಸಂಗಾತಿಯೊಂದಿಗೆ ಕೋಪ ಬೇಡ. ಕಚೇರಿಯ ಒತ್ತಡಗಳನ್ನು ಸಮಾಧಾನದಿಂದ ನಿರ್ವಹಿಸಿ. ಶುಭಸಂಖ್ಯೆ: 4

ಮೀನ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ನಿಮ್ಮ ಅತಿ ನಿರೀಕ್ಷೆಯ ಪ್ರಯತ್ನ ಸಫಲ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 1

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net