ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಾರ್ವಜನಿಕ ಜೀವನದಲ್ಲಿ ಮನ್ನಣೆ

Nitya-Bhavishya-vvani-1-2-1-1
Published on

ಮೇಷ: ಕಚೇರಿಯಲ್ಲಿ ಕೆಲಸದ ಒತ್ತಡ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ ಬರಲಿದೆ. ಕಾಯಿರಿ. ಶುಭಸಂಖ್ಯೆ: 3

ವೃಷಭ: ಭಾಗ್ಯ ಭಾವದ ಗ್ರಹಕೂಟದಿಂದಾಗಿ ಕಾರ್ಯಸಿದ್ದಿ. ನಟರಿಗೆ ವಿಶೇಷ ಅವಕಾಶ. ದಿನಾಂತ್ಯದಲ್ಲಿ ಆಯಾಸದ ಅನುಭವ. ಶುಭಸಂಖ್ಯೆ: 3

ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಕ್ಷಿಸಿದಂತೆ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ. ಶುಭಸಂಖ್ಯೆ: 8

ಕಟಕ: ಗೃಹ ನಿರ್ವಣದ ಕನಸಿನ ಸಾಕಾರ. ಪತ್ನಿಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ: 9

ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕಾರಣಿಗಳಿಗೆ ವಿಶೇಷ ದಿನ. ಕಲಾವಿದರಿಗೆ ಅದೃಷ್ಟ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 9

ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತೀರ್ಪ. ಅನಾರೋಗ್ಯ. ಶುಭಸಂಖ್ಯೆ: 6

ತುಲಾ: ಮಾತೃಮೂಲವಾದಂತಹ ಧನಪ್ರಾಪ್ತಿ. ಮನೆ ಕಟ್ಟುವುದಕ್ಕೆ ಚಾಲನೆ ದೊರೆಯಲಿದೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಶುಭಸಂಖ್ಯೆ: 5

ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಲು ಹೋಗಬೇಡಿ. ಮನೆಗೆ ಅಪರೂಪದ ಅತಿಥಿಯ ಆಗಮನ. ಸುಖ ಭೋಜನ. ಶುಭಸಂಖ್ಯೆ: 2

ಧನಸ್ಸು: ಆರ್ಥಿಕ ಅಡಚಣೆ ಆದೀತು. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 9

ಮಕರ: ಧೃಡ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಸಂಬಂಧಿಕರಿಂದ ಸಲಹೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 6

ಕುಂಭ: ವಿದ್ಯಾರ್ಥಿಗಳಿಗೆ ಕನಸಿನ ಸಾಕಾರ. ಸೋಮಾರಿತನ ನಿಮ್ಮ ಶತ್ರು, ಅದಕ್ಕೆ ಅವಕಾಶ ಕೊಡಬೇಡಿ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 4

ಮೀನ: ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿಯರ ಮನೆಗೆ ಭೇಟಿ. ಶುಭಸಂಖ್ಯೆ: 5

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net