ಭವಿಷ್ಯ: ಈ ರಾಶಿಯವರಿಗಿಂದು ಸಮಾಜದಲ್ಲಿ ಸ್ಥಾನಮಾನ ವೃದ್ಧಿ, ಕೀರ್ತಿ ಪ್ರಾಪ್ತಿ, ಸ್ಥಿರ ಧನ ಸಂಪತ್ತು ಹೆಚ್ಚಳ

Nithya Bhavishya
Published on

ಮೇಷ: ಭೂ ವ್ಯವಹಾರದಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ನಿರೀಕ್ಷಿಸಿದಷ್ಟು ಲಭಿಸದಿದ್ದರೂ ಹಣಕ್ಕೆ ಕೊರತೆಯಾಗದು. ಶುಭಸಂಖ್ಯೆ: 2

ವೃಷಭ: ವ್ಯವಹಾರಗಳಲ್ಲಿ ನಿಷ್ಠೆ. ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದಿಸುವಿರಿ. ಉತ್ತಮ ಕಾರ್ಯವೈಖರಿಗೆ ಹಿರಿಯರ ಪೋ›ತ್ಸಾಹ. ಶುಭಸಂಖ್ಯೆ: 9

ಮಿಥುನ: ಚುರುಕುತನದಿಂದ ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಧನ ಸಂಪತ್ತು ಹೆಚ್ಚಳ. ಸಾಂಸಾರಿಕ ಸುಖ ತೃಪ್ತಿದಾಯಕ. ಶುಭಸಂಖ್ಯೆ: 8

ಕಟಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಮಾನಸಿಕ ಸಮಾಧಾನ. ಶುಭಸಂಖ್ಯೆ: 3

ಸಿಂಹ: ಸ್ಥಿರ ಬುದ್ಧಿಯಿಂದ ಕಾರ್ಯಪ್ರವೃತ್ತಿ. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಶುಭಸಂಖ್ಯೆ: 1

ಕನ್ಯಾ: ದೂರ ಪ್ರಯಾಣ. ಬಂಧು ಮಿತ್ರರ ಭೇಟಿ. ಸಂತೋಷ ವೃದ್ಧಿ. ಗೃಹದಲ್ಲಿ ಮನೋರಂಜನಾ ವಾತಾವರಣ. ಮಕ್ಕಳಿಂದ ಸಂತೋಷ. ಶುಭಸಂಖ್ಯೆ: 7

ತುಲಾ: ನಿರೀಕ್ಷಿತ ಸ್ಥಾನ ಗೌರವ. ನೂತನ ಮಿತ್ರರ ಸಮಾಗಮ. ಧರ್ಮ ಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಶುಭಸಂಖ್ಯೆ: 6

ವೃಶ್ಚಿಕ: ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಕಾಲ. ಶುಭಸಂಖ್ಯೆ: 9

ಧನುಸ್ಸು: ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಧನಾರ್ಜನೆಗೆ ಕೊರತೆ ಇರದು. ಅನಗತ್ಯ ವಾರ್ತೆಗಳಿಗೆ ಕಿವಿಕೊಡಲು ಹೋಗಬೇಡಿ. ಶುಭಸಂಖ್ಯೆ: 4

ಮಕರ: ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯಲಾಭ. ಮಿತ್ರರಂತೆ ವರ್ತಿಸುವ ವೃಕ್ತಿಗಳಿಂದಲೂ ಕಿರಿಕಿರಿ. ದೂರದ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 8

ಕುಂಭ: ಸಹೋದರರಲ್ಲಿ ನಿಷ್ಠುರ ಮಾಡದೇ, ಪೋ›ತ್ಸಾಹಿಸಿ. ನಿರೀಕ್ಷಿತ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯದವರಿಗೆ ಲಾಭ. ಶುಭಸಂಖ್ಯೆ: 2

ಮೀನ: ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ಕಾರ್ವಿುಕರಿಗೆ ನಿರೀಕ್ಷಿತ ಲಾಭ. ರಾಜಕೀಯದಲ್ಲಿ ಗುಟ್ಟಿನ ವ್ಯವಹಾರದಿಂದ ಲಾಭ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net