ಭವಿಷ್ಯ: ಈ ರಾಶಿಯವರಿಗಿಂದು ಆದಾಯ ವೃದ್ಧಿ, ವ್ಯಯ ಸಮತೋಲನವನ್ನು ಸಾಧಿಸುವುದು

Nithya Bhavishya
Published on

ಮೇಷ: ಅಪವಾದದ ಭೀತಿಗೆ ಒಳಗಾಗದಿರಿ. ಆದಾಯ ವೃದ್ಧಿ, ವ್ಯಯ ಸಮತೋಲನವನ್ನು ಸಾಧಿಸುವುದು. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 9

ವೃಷಭ: ಕಠಿಣ ನಿರ್ಧಾರ ಕೈಗೊಳ್ಳುವ ಪ್ರಸಂಗ ಬರಬಹುದು. ವಿಚಲಿತರಾಗಬೇಕಾಗಿಲ್ಲ. ಸಮಸ್ಯೆ ಬಗೆಹರಿಸಲು ಜಾಣತನ ತೋರುವಿರಿ. ಶುಭಸಂಖ್ಯೆ: 5

ಮಿಥುನ: ಸಲಹೆಗಳನ್ನು ಮಾನ್ಯ ಮಾಡಿದ್ದಕ್ಕೆ ಸಂತೋಷ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು. ಮಹಿಳಾ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 4

ಕಟಕ: ಹಣಕಾಸಿನ ವ್ಯತ್ಯಾಸಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ. ಅಭಿರುಚಿಗೆ ಹೊಂದುವಂತಹ ಜನರೊಂದಿಗೆ ಒಡನಾಟವಿರಲಿ. ಶುಭಸಂಖ್ಯೆ: 8

ಸಿಂಹ: ಹೊಸ ಕಾರ್ಯದಿಂದ ಹೆಜ್ಜೆ ಹೆಜ್ಜೆಗೂ ಸಮಸ್ಯೆ. ಆದ್ದರಿಂದ ಈ ದಿನದಂದು ಯಾವುದೇ ಹೊಸ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 7

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಹಿನ್ನಡೆ ಅನುಭವಿಸಿ ಸಮಾಧಾನ ದೊರಕಲಿದೆ. ಕುಟುಂಬದ ಶುಭ ಕಾರ್ಯಗಳಿಗಾಗಿ ಪ್ರಯಾಣ. ಶುಭಸಂಖ್ಯೆ: 2

ತುಲಾ: ಅಧಿಕ ಆತ್ಮ ವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೋಗುವುದು ಸರಿಯಲ್ಲ. ಮಧ್ಯವರ್ತಿಗಳಿಂದ ಅನುಕೂಲ. ಶುಭಸಂಖ್ಯೆ: 8

ವೃಶ್ಚಿಕ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಮುಖ್ಯ ಕೆಲಸ ಕೈಗೆತ್ತಿಕೊಳ್ಳಿ. ಶುಭಸಂಖ್ಯೆ: 4

ಧನುಸ್ಸು: ನಿಮ್ಮ ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವ ದಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗುವುದು. ಶುಭಸಂಖ್ಯೆ: 9

ಮಕರ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚಿನ ತಯಾರಿಯಿಂದ ಉತ್ತಮ ಪ್ರತಿಫಲ. ಬರಬೇಕಾಗಿದ್ದ ಹಣಕ್ಕಾಗಿ ಓಡಾಡ ಬೇಕಾಗುವುದು. ಶುಭಸಂಖ್ಯೆ:1

ಕುಂಭ: ಜಾಣ್ಮೆಯಿಂದ ಅವಕಾಶವನ್ನು ಬಳಸಿಕೊಂಡಲ್ಲಿ ಅಧಿಕಾರ ಪಡೆದು ಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಮಾತು ಸತ್ಯವಾಗಿರಲಿ. ಶುಭಸಂಖ್ಯೆ: 6

ಮೀನ: ಇತರರ ಮಾತಿಗೆ ಕಿವಿಗೊಡದೆ ನಿಮ್ಮಂತೆ ಇರುವುದು ಕಷ್ಟವೆನಿಸಿದರೂ ಒಳ್ಳೆಯದು. ಮಗನ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net