

ರಾಣೆಬೆನ್ನೂರ: ವಿಜಯವಾಣಿ ಕನ್ನಡ ನಂ. 1 ಪತ್ರಿಕೆ ವತಿಯಿಂದ ಇಲ್ಲಿಯ ಮಾರುತಿ ನಗರದ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ಐವರು ವಿಜೇತರನ್ನು ಕಿವುಡ ಹಾಗೂ ಮೂಕ ವಿದ್ಯಾರ್ಥಿನಿಯರು ಆಯ್ಕೆ ಮಾಡಿದರು.
ಕ್ಷೇತ್ರದ ಸಾವಿರಾರು ಜನ ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ನಿತ್ಯವೂ ಹಾಕಿದ ಕೂಪನ್‌ಗಳನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಬುಟ್ಟಿಯಲ್ಲಿ ಸುರಿದು ರಾಶಿ ಹಾಕಲಾಗಿತ್ತು. ವಸತಿ ಶಾಲೆಯ ಐದು ಜನ ವಿದ್ಯಾರ್ಥಿನಿಯರು ತಲಾ ಒಬ್ಬರು ಒಂದೊಂದು ಕೂಪನ್ ತೆಗೆದುಕೊಂಡು ವಿಜೇತರ ಆಯ್ಕೆ ಮಾಡಿದರು.
ಶಾಲೆಯ ಆಡಳಿತಾಧಿಕಾರಿ ಎನ್.ಕೆ. ಗಂಗಣ್ಣನವರ, ಉದ್ಯಮಿ ಚೇತನ ನಾಜರೆ, ನಿವೃತ್ತ ಶಿಕ್ಷಕಿ ನಾಗರತ್ನ ಬೇಲೂರಪ್ಪನವರ, ಶಿಕ್ಷಕಿಯರಾದ ನೇತ್ರಾವತಿ ಮಗ್ಗದ, ಸೌಮ್ಯ ಎಸ್.ಆರ್., ಚನ್ನಮ್ಮ ಮೇಡ್ಲೇರಿ, ಶಕುಂತಲಾ ಶಿಂಧೆ, ನಾಗರತ್ನ ಎಸ್.ಎಸ್., ಹಾಲಮ್ಮ ಎಚ್.ಎಚ್., ಲಕ್ಷ್ಮೀ ಎಸ್., ಗಂಗಮ್ಮ ಎಂ.ಜಿ. ಮತ್ತಿತರರು ಪಾಲ್ಗೊಂಡಿದ್ದರು.
ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ವಿಜೇತರು…
1) ರಾಜಶ್ರೀ ಉದಗಟ್ಟಿ, ಮೃತ್ಯುಂಜಯ ನಗರ
2) ನರ್ಮದಾ ವಿ., ಗೌರಿಶಂಕರ ನಗರ
3) ಸಂಜನಾ ಬಸನಗೌಡ್ರ, ಅರೇಮಲ್ಲಾಪುರ, ರಾಣೆಬೆನ್ನೂರ ತಾಲೂಕು
4) ಚೇತನಾ ಎಂ.ಎಚ್., ವಿನಾಯಕ ನಗರ
5) ಶ್ರೀಮತಿ ಮುಗದೂರ, ವಾಗೀಶ ನಗರ