

| ರಾಘವ ಶರ್ಮ ನಿಡ್ಲೆ, ನವದೆಹಲಿ
ಜಾತಿ, ಹಣಬಲ, ತೋಳ್ಬಲದ ರಾಜಕಾರಣಕ್ಕೆ ಕುಖ್ಯಾತಿಯಾಗಿರುವ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 28ಕ್ಕೆ ಮೊದಲ ಹಂತದ (71 ಕ್ಷೇತ್ರ) ಚುನಾವಣೆ ನಡೆಯಲಿದ್ದು, ಒಟ್ಟು ಮೂರು ಹಂತಗಳಲ್ಲಿ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ನ.3ಕ್ಕೆ 2ನೇ ಹಂತ (94 ಕ್ಷೇತ್ರ) ಮತ್ತು ನ.7ಕ್ಕೆ ಮೂರನೇ ಹಂತದ (78 ಕ್ಷೇತ್ರ) ಮತದಾನ ನಡೆಯಲಿದ್ದು, ನ. 10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕರೊನಾ ಲಾಕ್ಡೌನ್ನಿಂದಾಗಿ 2,30,000 ವಲಸೆ ಕಾರ್ವಿುಕರು ರಾಜ್ಯಕ್ಕೆ ವಾಪಸಾಗಿರುವುದರಿಂದ ಅವರೆಲ್ಲರನ್ನೂ ಮತದಾನ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಮಾಹಿತಿ ಹಂಚಿಕೊಂಡಿದ್ದಾರೆ. 2015ರಲ್ಲಿ ರಾಜ್ಯದ ಹಿಂದುಳಿದ ವರ್ಗ (ಒಬಿಸಿ), ಆರ್ಥಿಕ ಹಿಂದುಳಿದ ವರ್ಗ (ಇಬಿಸಿ), ದಲಿತ ಮತ್ತು ಮುಸ್ಲಿಮರ ಕಾಂಬಿನೇಷನ್ಗೆ
ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಆರ್ಜೆಡಿ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಚುನಾವಣೆ ಸ್ಪರ್ಧೆಗೆ ಅನರ್ಹಗೊಂಡಿರುವುದರಿಂದ ಲಾಲೂ ಹೆಸರು ಮತ್ತು ನಿತೀಶ್ ಆಡಳಿತ ವೈಫಲ್ಯಗಳನ್ನು ಮುಂದಿಟ್ಟು ಆರ್ಜೆಡಿ ಮತ ಯಾಚಿಸಲಿದೆ.
ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ. ಬಿಹಾರ ಮೂಲದ ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆ ಪ್ರಕರಣ ಹಾಗೂ ರಾಜ್ಯಸಭೆ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಮೇಲೆ ವಿಪಕ್ಷ ಮುಖಂಡರು ದಾಳಿ ಮಾಡಲು ಯತ್ನಿಸಿದ್ದು ಚುನಾವಣಾ ಕಣದಲ್ಲಿ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ.
ಸೀಟು ಹಂಚಿಕೆ ತಲೆನೋವು
ಚುನಾವಣೆ ಘೋಷಣೆಯಾಗಿದ್ದರೂ, ಎನ್ಡಿಎಗೆ ಸೀಟು ಹಂಚಿಕೆಯೇ ಸವಾಲಾಗಿ ಕಾಡುತ್ತಿದೆ. ಸಿಎಂ ನಿತೀಶ್ ಕುಮಾರ್ ಮತ್ತು ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ನಡುವಿನ ಒಡಕು ಹೊಸತೇನಲ್ಲ. ಎನ್ಡಿಎ ಸಿಎಂ ಅಭ್ಯರ್ಥಿಯಾಗಿ ನಿತೀಶ್ ಬೇಡ ಎಂದು ಎಲ್ಜೆಪಿ ಹೇಳಿದ್ದರೂ, ಬಿಜೆಪಿ ಮಾತ್ರ ಇದಕ್ಕೆ ಸೊಪು್ಪ ಹಾಕಿಲ್ಲ. ನಿತೀಶ್ ನೇತೃತ್ವದಲ್ಲೇ ಚುನಾವಣೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಪ್ರತ್ಯೇಕವಾಗಿ ಚುನಾವಣೆ ಎದುರಿಸಿ, ಚಿರಾಗ್ರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುತ್ತೇವೆ ಎಂದು ಎಲ್ಜೆಪಿ ಬೆದರಿಕೆ ಹಾಕಿದೆ. 2015ರ ಚುನಾವಣೆಯಲ್ಲಿ 42 ಸೀಟುಗಳಲ್ಲಿ ಸ್ಪರ್ಧಿಸಿದ್ದ
ಎಲ್ಜೆಪಿ ಗೆದ್ದಿದ್ದು 2 ಕ್ಷೇತ್ರಗಳಲ್ಲಿ ಮಾತ್ರ. ಈ ಬಾರಿ 25ಕ್ಕಿಂತ ಹೆಚ್ಚು ಸೀಟುಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಬಿಜೆಪಿ ಅಭಿಪ್ರಾಯ ಚಿರಾಗ್ ಪಾಸ್ವಾನ್ಗೆ ಪಥ್ಯವೆನಿಸಿಲ್ಲ. ಸೀಟು ಹಂಚಿಕೆಯಲ್ಲಿ ಎಲ್ಜೆಪಿ ಪಾಲೆಷ್ಟು ನಿರ್ಧರಿಸಿ, ನಂತರ ನಾವಿಬ್ಬರು ಸೀಟು ಹಂಚಿಕೆ ಇತ್ಯರ್ಥಪಡಿಸೋಣ ಎಂದು ಬಿಜೆಪಿ ದೆಹಲಿ ನಾಯಕರು ನಿತೀಶ್ಗೆ ತಿಳಿಸಿದ್ದಾರೆಂದು ಗೊತ್ತಾಗಿದೆ. 2015ರಲ್ಲಿ ಮಹಾಮೈತ್ರಿಯಲ್ಲಿದ್ದ ಜೀತನ್ ರಾಮ್ ಮಾಂಝಿ ನೇತೃತ್ವದ ಹಿಂದುಸ್ತಾನಿ ಅವಾಮಿ ಮೋರ್ಚಾ ಈ ಬಾರಿ ಎನ್ಡಿಎ ಮೈತ್ರಿಕೂಟ ಸೇರಿಕೊಂಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ಎನ್ಡಿಎಯಿಂದ ಪ್ರತ್ಯೇಕಗೊಂಡಿದ್ದ ಉಪೇಂದ್ರ ಖುಶ್ವಾಹಾ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್ಎಸ್ಎಲ್ಪಿ) ಕೂಡ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಸೇರ್ಪಡೆಯಾಗುವುದು ಬಹುತೇಕ ಖಚಿತ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಕೇಳಿದಷ್ಟು ಸೀಟುಗಳನ್ನು ನೀಡಲಿಲ್ಲ ಎಂದು ಮುನಿಸಿಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಆರ್ಎಸ್ಎಲ್ಪಿ, ಇದ್ದ 3 ಸೀಟುಗಳನ್ನೂ ಕಳೆದುಕೊಂಡು ಮೂಲೆ ಸೇರಿತ್ತು.
ಕರೊನಾ ಮುನ್ನೆಚ್ಚರಿಕೆ ಕ್ರಮಗಳು