ಅಮೃತ ಬಿಂದು-ಶ್ರೀಶೈವಾಗಮ: ಐವತ್ತೊಂದನೆಯ ಶೀಲ ನಡೆಯುವುದು ಹೇಗೆ?

Sudina-7-Amrutabindu
Published on

ಕೈಂಕರ್ಯಕರಣಂ ಶಂಭೋರ್ಮನಸಾ ಸರ್ವದಾ ಹಿ ಯತ್ | ದಾಸ್ಯಂ ಶೀಲಮಿದಂ ಪಂಚಪಂಚಾಶಮಿತಿ ನಿಶ್ಚಿತಮ್ ||

ಮನಸ್ಸಿನಿಂದ ಯಾವಾಗಲೂ ಶಿವನ ಸೇವೆ ಮಾಡುವುದು ದಾಸ್ಯವೆಂದು ಕರೆಯಲ್ಪಡುವ ಐವತ್ತೊಂದನೆಯ ಶೀಲ. ಶಿವನನ್ನು ತನ್ನ ಸ್ವಾಮಿಯೆಂದೂ ತಾನು ಅವನ ದಾಸನೆಂದೂ ಭಾವಿಸಿದಾಗ ಈ ಶೀಲ ನಡೆಯುತ್ತದೆ. ಹನುಮನು ಶ್ರೀರಾಮನ ಬಗ್ಗೆ ಇರಿಸಿದ ಭಾವ ಇದಕ್ಕೆ ನಿದರ್ಶನ. ಆಧ್ಯಾತ್ಮಿಕ ಸಾಧನೆಯಲ್ಲಿ ಸ್ವಾಮಿ-ಭೃತ್ಯ ಭಾವದ ಮೂಲಕ ಶಿವನೊಂದಿಗಿನ ಸಂಬಂಧ ಪ್ರಾರಂಭವಾಗುತ್ತದೆ. ಸತಿ-ಪತಿ ಭಾವದ ಮೂಲಕ ಗಟ್ಟಿಗೊಳ್ಳುತ್ತದೆ. ಶಿವೊà—ಹಂ ಭಾವದ ಮೂಲಕ ಪೂರ್ಣತೆಯನ್ನು

ಪಡೆದು ಕೊನೆಗೆ ಶಿವಸಾಕ್ಷಾತ್ಕಾರವು ಲಭಿಸುತ್ತದೆ. ಹೀಗೆ ಶಿವ ಸಾಕ್ಷಾತ್ಕಾರಸೌಧಕ್ಕೆ ಸ್ವಾಮಿ-ಭೃತ್ಯ ಭಾವದ ದಾಸ್ಯ ಶೀಲವೇ ಅಡಿಪಾಯ.

| ಚಂದ್ರಜ್ಞಾನಾಗಮ (9.113) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net