ಯುವರತ್ನನ ಮುಡಿಗೆ ವಿಜಯರತ್ನ; ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಪ್ರಮೋದ್ ಶ್ರೀನಿವಾಸ್

ವಿಜಯವಾಣಿ
Published on

ವಿದೇಶದಲ್ಲಿ ಎಂಬಿಎ ಮುಗಿಸಿ ಸ್ವದೇಶಕ್ಕೆ ಬಂದನಂತರ ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಪ್ರಮೋದ್ ಶ್ರೀನಿವಾಸ್ ಅವರ ಹಂಬಲ ನ್ಯಾಷನಲ್ ಪಬ್ಲಿಕ್ ಶಾಲೆ ಫ್ರಾಂಚೈಸಿ ತೆರೆಯುವಂತೆ ಮಾಡಿತು. ಜೆ.ಪಿ ನಗರ ಮತ್ತು ವರ್ತರಿನಲ್ಲಿ ಕ್ಯಾಂಪಸ್ ಆರಂಭಿಸಿದರು. ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯದಲ್ಲಿಯೂ ಗುರುತಿಸಿಕೊಂಡು ಸಮಾಜಮುಖಿ ಕೆಲಸ ಮಾಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ. ಪದ್ಮನಾಭನಗರದ ಗ್ಯಾರಂಟಿ ಸಮಿತಿ ಅಧ್ಯಕ್ಷರಾಗಿರುವ ಪ್ರಮೋದ್ ಸಾಧನೆಯನ್ನು ಗುರುತಿಸಿ ವಿಜಯವಾಣಿ ಪತ್ರಿಕೆಯು ಪ್ರತಿಷ್ಠಿತ ‘ವಿಜಯರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.

ಬೆಂಗಳೂರು: ಸರಸ್ವತಿ ಮತ್ತು ಲಕ್ಷ್ಮೀ ಇಬ್ಬರೂ ಒಂದೇ ಕಡೆ ಇರುವುದಿಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದ ಎಂಬಂತೆ ಯುವನಾಯಕ ಪ್ರಮೋದ್ ಶ್ರೀನಿವಾಸ್ ಇದ್ದಾರೆ. ಇವರು ದೇಶ ಸುತ್ತಿದ್ದಾರೆ, ಜತೆಗೆ ಕೋಶವನ್ನು ಓದಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದು, ಯಾವುದೇ ಅಹಂ ಇಲ್ಲದೇ ಎಲ್ಲರನ್ನು ವಿನಮ್ರವಾಗಿ ಕಾಣುತ್ತಾರೆ. ಸದ್ದಿಲ್ಲದೆ ತನ್ನದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ವರ್ತೂರು ಮತ್ತು ಜೆ.ಪಿ.ನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಪದ್ಮನಾಭನಗರದ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಶಿಕ್ಷಣ ಕ್ಷೇತ್ರದ ಐಕಾನ್ ಆಗಿದ್ದಾರೆ. ಇವರ ತಾತ ಲಕ್ಷ್ಮಯ್ಯ, ಅಜ್ಜಿ ಚೌಡಮ್ಮ, ತಂದೆ ಎಲ್. ಶ್ರೀನಿವಾಸ್ ಅವರು ಮಾಜಿ ಉಪ ಮಹಾಪೌರರಾಗಿದ್ದವರು. ತಾಯಿ ಯಶೋದ ಗೃಹಿಣಿಯಾಗಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ನಿವಾಸಿಗಳು.

ಪ್ರಮೋದ್ ಚಿಕ್ಕಲಸಂದ್ರ ಗ್ರಾಮದಲ್ಲಿಯೇ ಹುಟ್ಟಿದ್ದು, ಪದ್ಮನಾಭನಗರದ ಕಾರ್ಮಲ್ ಸ್ಕೂಲ್​ನಲ್ಲಿ 3ನೇ ತರಗತಿವರೆಗೂ ಓದಿದ್ದರು. ಲಿಟಲ್ ರಾಕ್ ಇಂಡಿಯನ್ ಎಂಬ ವಸತಿ ಶಾಲೆಯಲ್ಲಿ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದರು. ಪಿಯುಸಿಯನ್ನು ಬೆಂಗಳೂರಿನ ಕ್ರೖೆಸ್ಟ್ ಕಾಲೇಜಿನಲ್ಲಿ ಮುಗಿಸಿ, ಬಿಜಿಎಸ್​ನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದರು. ನಂತರ ಇಂಗ್ಲೆಂಡ್​ನಲ್ಲಿ (ಯುಕೆ) ಬಿಜಿನೆಸ್ ಮ್ಯಾನೇಜ್​ವೆುಂಟ್ ವಿಭಾಗದಲ್ಲಿ ಎಂಬಿಎ ಮಾಡಿದ್ದಾರೆ. ಅಲ್ಲಿ ವಿವಿಧ ದೇಶಗಳಿಂದ ಬಂದ ವಿದ್ಯಾರ್ಥಿಗಳು ಇದ್ದರು. ಹೀಗಾಗಿ ಇವರಿಗೆ ಹಲವು ಭಾಷೆ, ಸಂಸ್ಕೃತಿಗಳ ಪರಿಚಯ ಇದೆ.

ಒಂಟಿಯಾಗಿ ಜೀವನ ನಡೆಸುವುದನ್ನು ಕಲಿಯಲಿ ಎಂದು ಪಾಲಕರು ಹಾಸ್ಟೆಲ್​ಗೆ ಸೇರಿಸಿದ್ದರು. ಹಾಸ್ಟೆಲ್​ನಲ್ಲಿ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದರು. ಹಾಸ್ಟೆಲ್ ಜೀವನದಿಂದ ಶಿಸ್ತನ್ನು ಕಲಿತಿದ್ದಾರೆ. ಹಾಸ್ಟೆಲ್​ನಿಂದ ಮನೆಗೆ ಹಿಂದಿರುಗಿದಾಗ ಅಜ್ಜಿ ಸೇರಿ ಕುಟುಂಬದವರು ತುಂಬಾ ಮುದ್ದು ಮಾಡುತ್ತಿದ್ದರು. ಪ್ರೌಢಶಾಲೆ ವ್ಯಾಸಂಗ ಮಾಡುತ್ತಿದ್ದಾಗಲೇ ಎನ್​ಸಿಸಿ ಆರ್ವಿು ವಿಂಗ್​ಗೆ ಸೇರಿದ್ದರು. ಆರ್ವಿು ಕ್ಯಾಂಪ್​ಗಳಿಗೂ ಹಾಜರಾಗುತ್ತಿದ್ದರು. ಅಲ್ಲಿ ಮತ್ತಷ್ಟು ಶಿಸ್ತು ಮೈಗೂಡಿಸಿಗೊಂಡಿದ್ದಾರೆ. ಶಾಲಾ-ಕಾಲೇಜು ಹಂತದಲ್ಲಿ ಬಾಸ್ಕೆಟ್​ಬಾಲ್ ಕ್ರೀಡಾಪಟುವಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ.

ಶಿಕ್ಷಣ ಪ್ರಸಾರಕ್ಕೆ ಶಾಲೆ ಆರಂಭ

ಪ್ರಮೋದ್ ಅವರು ವಿದೇಶದಲ್ಲಿ ಎಂಬಿಎ ಮುಗಿಸಿ ಬಂದ ನಂತರ, ಇವರ ತಂದೆಗೆ ಮಗನನ್ನು ಐಎಎಸ್ ಅಧಿಕಾರಿ ಮಾಡಬೇಕೆಂಬ ಕನಸು ಹೊಂದಿದ್ದರು. ತಂದೆಯ ಆಸೆಯಂತೆ ಯುಪಿಎಸ್​ಸಿ ಪರೀಕ್ಷೆಗೆ ಸಿದ್ದತೆ ನಡೆಸಲು ದೆಹಲಿಗೆ ಹೋದರು. ಪರೀಕ್ಷೆ ಕೂಡ ಬರೆದರು. ನಂತರ ಕಾರಣಾಂತರಗಳಿಂದ ಬೆಂಗಳೂರಿಗೆ ವಾಪಸ್ ಆದರು. ಬಳಿಕ ಶಿಕ್ಷಣ ಕ್ಷೇತ್ರದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡ ಇವರು, ಮೊದಮೊದಲು ಉತ್ತರಹಳ್ಳಿಯಲ್ಲಿ ಒಂದು ಟ್ಯೂಷನ್ ಸೆಂಟರ್ ಅನ್ನು ಆರಂಭಿಸಿದ್ದರು. 10ನೇ ತರಗತಿಯ ಸುಮಾರು 25 ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಿದ್ದರು. ನಂತರ ಐಐಟಿ ಮತ್ತು ಜೆಡಬ್ಲ್ಯುಗೆ ಟ್ಯೂಷನ್ ಮಾಡುತ್ತಿದ್ದರು. ಈ ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಮನಗಂಡು ಶಾಲೆ ಆರಂಭಿಸಲು ನಿರ್ಧರಿಸಿ, ನ್ಯಾಷನಲ್ ಪಬ್ಲಿಕ್ ಶಾಲೆಯ ಎರಡು ಶಾಖೆಗಳನ್ನು ಪ್ರಾರಂಭಿಸಿದರು. ಜೆ.ಪಿ. ನಗರದ ಕ್ಯಾಂಪಸ್​ನಲ್ಲಿ 1,200 ವಿದ್ಯಾರ್ಥಿಗಳು, 180 ಸಿಬ್ಬಂದಿ, ವರ್ತೂರು ಕ್ಯಾಂಪಸ್​ನಲ್ಲಿ 500 ವಿದ್ಯಾರ್ಥಿಗಳು, 100 ಸಿಬ್ಬಂದಿ ಇದ್ದಾರೆ. ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತಿರುವ ದಿನದಲ್ಲಿ ಅದನ್ನು ವಾಪಸ್ ತರುವ ಉದ್ದೇಶದಿಂದ ತಮ್ಮ ಶಾಲೆಯಲ್ಲಿ ನೈತಿಕ ಮತ್ತು ಮೌಲ್ಯಯುತವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾಗಿ ಹೇಳಿಕೊಳ್ಳುತ್ತಾರೆ ಪ್ರಮೋದ್ ಶ್ರೀನಿವಾಸ್.

ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣೆ

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ್ದ ಪ್ರಮೋದ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು. ನ್ಯಾಷನಲ್ ಪಬ್ಲಿಕ್ ಶಾಲೆ ಇವರನ್ನು ಆಕರ್ಷಿಸಿತ್ತು. ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಾಲೆಗಳ ಪೈಕಿ ನ್ಯಾಷನಲ್ ಪಬ್ಲಿಕ್ ಶಾಲೆಯೂ ಒಂದಾಗಿದೆ. ಡಾ.ಕೆ.ಪಿ. ಗೋಪಾಲಕೃಷ್ಣ ಅವರು ಇದರ ಅಧ್ಯಕ್ಷರಾಗಿದ್ದಾರೆ. ಇದರ ಫ್ರಾಂಚೈಸಿಯನ್ನು ಪಡೆದ ಪ್ರಮೋದ್, ಮೊದಲು ಜೆ.ಪಿ ನಗರದ ಶಾಖೆಯನ್ನು 2020ರಲ್ಲಿ ಆರಂಭಿಸಿದರು. ನಂತರ ವರ್ತರಿನಲ್ಲಿ 2024ರಲ್ಲಿ ಶಾಲಾ ಕ್ಯಾಂಪಸ್ ಆರಂಭಿಸಿದರು. ಈ ಶಾಲೆಯನ್ನು ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿಯೇ ನಡೆಸಲಾಗುತ್ತಿದೆ. ಇಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಕಲ್ಪಿಸಿ ಕೊಡಲಾಗಿದೆ. ಇಲ್ಲಿ ಕ್ರೀಡೆಗೆ ಬೇಕಾದ ಎಲ್ಲ್ಲ ಸವಲತ್ತುಗಳಿವೆ. ಒಳಾಂಗಣ ಬಾಸ್ಕೆಟ್​ಬಾಲ್ ಕೋರ್ಟ್, ಜಿಮ್ನಾಸ್ಟಿಕ್, ಸ್ಕೇಟಿಂಗ್, ಆರ್ಚರಿ, ಕಿಕ್ ಬಾಕ್ಸಿಂಗ್ ಜತೆಗೆ ಸಂಗೀತಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗಿಟಾರ್, ಕೀ ಬೋರ್ಡ್ ಮತ್ತು ಡ್ರಮ್್ಸ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ಮನೆ ಮನೆಗೆ ಸರ್ಕಾರದ ಯೋಜನೆ

ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲು ಪದ್ಮನಾಭನಗರ ಕ್ಷೇತ್ರ ಮಾದರಿ ಎನಿಸಿಕೊಂಡಿದೆ. ಇದರ ಹಿಂದೆ ಪದ್ಮನಾಭನಗರ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಅವರ ಶ್ರಮವಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಅಭಿಯಾನ, ಮನೆ ಮನೆ ಭೇಟಿ, ಸಂವಾದ, ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದಕ್ಕಾಗಿಯೇ 14 ಜನರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ. ಫಲಾನುಭವಿಗಳ ಮನೆಯ ಬಳಿ ತೆರಳಿ ಶಿಬಿರವನ್ನು ಹಾಕಲಾಗುತ್ತದೆ. ಅಲ್ಲಿ ಸರ್ಕಾರದ ಯೋಜನೆಗಳ ಅರ್ಜಿ ಸ್ವೀಕರಿಸಿ, ಆ ಅರ್ಜಿಯನ್ನು ಅಪ್ಲೈ ಮಾಡಿ ಯೋಜನೆಗಳನ್ನು ಕೊಡಿಸಲಾಗಿದೆ. ನಂತರ ಗ್ಯಾರಂಟಿ ಸಂವಾದ ಮಾಡಲಾಗಿತ್ತು. ಪಾದಯಾತ್ರೆ ಮೂಲಕ ಮನೆ ಮನೆ ಅಭಿಯಾನ ಮಾಡಿದ್ದಾರೆ.

ಇದರ ಜತೆಗೆ ಪರಿಶೀಲನಾ ಸಭೆಗಳನ್ನು ಮಾಡಿದ್ದಾರೆ. ಇದರಿಂದ ಸರ್ಕಾರದ ಯೋಜನೆಗಳು ಶೇ.93 ಕಾರ್ಯರೂಪಕ್ಕೆ ಬಂದಿರುವುದು ಕಂಡು ಬಂದಿದೆ. ಇದನ್ನು ಶೇ.100ಕ್ಕೆ ಏರಿಸುವ ಗುರಿ ಹೊಂದಿದ್ದಾರೆ. ಪದ್ಮನಾಭನಗರದಲ್ಲಿ ಸುಮಾರು 1 ಲಕ್ಷ ಫಲಾನುಭವಿಗಳಿದ್ದು, 25-30 ಸಾವಿರ ಫಲಾನುಭವಿಗಳನ್ನು ಈಗಾಗಲೇ ತಲುಪಿದ್ದಾರೆ. ಮುಂದಿನ ದಿನಗಳಲ್ಲಿ 70 ಸಾವಿರ ಫಲಾನುಭವಿಗಳನ್ನು ತಲುಪಲಿದ್ದಾರೆ. ಪಿಂಚಣಿ ಸೇರಿ ಇತರ ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗುತ್ತಿದೆ. ಈ ಯೋಜನೆಗಳಿಂದ ಮಹಿಳೆಯರ ಸಬಲೀಕರಣವಾಗಿದೆ. ಇ-ಖಾತಾ ಪಡೆಯಲು ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ತಮ್ಮ ಕಚೇರಿಯಲ್ಲಿಯೇ ಇ-ಖಾತಾ ಒದಗಿಸುವುದನ್ನು ಮಾಡಿದ್ದಾರೆ. ಇದುವರೆಗೂ 450ಕ್ಕೂ ಹೆಚ್ಚು ಇ-ಖಾತಾ ಮಾಡಿಸಿಕೊಡಲಾಗಿದೆ.

ಸೋಷಿಯಲ್​ವಿುೕಡಿಯಾದಲ್ಲಿ ಸೆನ್ಸೇಷನ್

ವಾರ್ಡ್ ವ್ಯಾಪ್ತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಜತೆಗೆ ನಡೆಸುತ್ತಿರುವ ಸಂವಾದ, ನೋಂದಣಿ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗ್ಯಾರಂಟಿ ಫಲಾನುಭವಿಗಳಿಗೆ ಸರ್ಕಾರ ಅಥವಾ ಪಕ್ಷದ ನಾಯಕರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಪ್ರಮೋದ್ ಶ್ರೀನಿವಾಸ್ ಅವರ ಕಾರ್ಯವನ್ನು ಉಲ್ಲೇಖಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಮತ್ತು ಸ್ಥಳೀಯ ನಾಯಕರಿಗೆ ಪ್ರಮೋದ್ ಅವರ ಉದಾಹರಣೆ ಕೊಟ್ಟು, ಪದ್ಮನಾಭನಗರ ಮಾದರಿ ಅನುಕರಿಸುವಂತೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ, ಪ್ರಮೋದ್ ಶ್ರೀನಿವಾಸ್ ಅವರ ಗ್ಯಾರಂಟಿ ಅನುಷ್ಠಾನ ಅಭಿಯಾನ ರಾಜ್ಯಕ್ಕೆ ಮಾಡೆಲ್ ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ.

ಯುವ ಸಮುದಾಯದ ಆಶಾಕಿರಣ

ಯುವ ಶಕ್ತಿಯೇ ದೇಶದ ಶಕ್ತಿ. ಜಗತ್ತಿನಲ್ಲಿ ಯುವ ಜನತೆಯ ಸಂಖ್ಯೆಯಲ್ಲಿ ಭಾರತವೇ ಮೊದಲು. ಆದರೆ, ಯುವ ಜನತೆ ಕೇವಲ ತಮ್ಮ ವೈಯಕ್ತಿಕ ಜೀವನ ನೋಡಿಕೊಂಡು ಇದ್ದರೆ ದೇಶ ಉದ್ಧಾರ ಆಗುವುದಿಲ್ಲ. ಯುವ ಜನತೆ ಪ್ರತಿ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಮುಖ್ಯವಾಗಿ ಜನಸೇವೆಯಲ್ಲಿ ಕೂಡ ಯುವಕರು ಬರಬೇಕು. ಹೊಸ ಆಲೋಚನೆಗಳ ಮೂಲಕ ರಾಜಕೀಯದಲ್ಲಿ ಕೂಡ ಹೊಸ ಸಂಚಲನ ಸೃಷ್ಟಿ ಮಾಡಬೇಕೆಂದು ಪ್ರಮೋದ್ ಶ್ರೀನಿವಾಸ್ ಹೇಳಿಕೆ.

ಜನ ಸೇವೆಯೇ ಜನಾರ್ದನ ಸೇವೆ

ವಿದ್ಯಾರ್ಥಿಗಳಿಗೆ ಟ್ಯೂಷನ್ ಮಾಡುವ ವೇಳೆಯೇ 2018ರಲ್ಲಿ ರಾಷ್ಟ್ರೀಯ ಯುವ ಪ್ರತಿಷ್ಠಾನ ಎಂಬ ಎನ್​ಜಿಒ ಸಂಸ್ಥೆಯನ್ನು ಹುಟ್ಟುಹಾಕಿದರು. ಅದರ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಮೇಲೆ ಗಮನ ಹರಿಸಿದ್ದರು. ಸರ್ಕಾರಿ ಶಾಲೆಯನ್ನು ನವೀಕರಣ ಮಾಡುವ ಕೆಲಸ ಕೂಡ ಮಾಡಿದ್ದರು. ಪದ್ಮನಾಭನಗರದಲ್ಲಿ 2-3 ಸರ್ಕಾರಿ ಶಾಲೆಗೆ ಆಟದ ಸಾಮಗ್ರಿಯನ್ನು ನೀಡಿದ್ದರು. ಸರ್ಕಾರಿ ಶಾಲೆಗಳಿಗೆ ತೆರಳಿ ಮೌಲ್ಯಯುತವಾದ ಪಾಠ ಹೇಳಿಕೊಡುವುದನ್ನು ಮಾಡುತ್ತಿದ್ದರು.

ಅತ್ಯಾಧುನಿಕ ಸಲಕರಣೆಗಳು

ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ರೊಬಾಟಿಕ್ಸ್ ಲ್ಯಾಬ್ಸ್, ಸೈನ್ಸ್ ಲ್ಯಾಬ್, ಎಲ್ಲ ತರಗತಿಗಳಲ್ಲಿ ಸ್ಮಾರ್ಟ್ ಬೋರ್ಡ್, ನುರಿತ ಶಿಕ್ಷಕರಿದ್ದು ಗುಣ ಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಿಕ್ಷಕರು ಇಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಮಕ್ಕಳು ತುಂಬಾ ಸೂಕ್ಷ್ಮರಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಕರು ಅವರ ಮೈಂಡ್​ಸೆಟ್​ನ ಅರ್ಥ ಮಾಡಿಕೊಂಡು ಪಾಠ ಮಾಡುತ್ತಿದ್ದಾರೆ. ಇದರಲ್ಲಿ ಪಾಲಕರು ಕೂಡ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಪ್ರಮೋದ್ ಅವರು ಮುಂದಿನ ದಿನಗಳಲ್ಲಿ ಈ ರೀತಿಯ ಶಾಲೆಯನ್ನು ಗ್ರಾಮೀಣ ಭಾಗದಲ್ಲಿಯೂ ಆರಂಭಿಸಿ ಅಲ್ಲಿನ ಮಕ್ಕಳಿಗೂ ಇದೇ ರೀತಿಯ ಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದಾರೆ.

ಉಚಿತ ಇ-ಖಾತಾ ಅಭಿಯಾನ

ಜನರು ಇ-ಖಾತಾ ಪಡೆಯಲು ಹಲವಾರು ಕಡೆ ಅಲೆದು ಸುಸ್ತಾಗುತ್ತಿ ದ್ದುದ್ದನ್ನು ಕಂಡ ಪ್ರಮೋದ್ ಶ್ರೀನಿವಾಸ್ ಅವರು 2025ರ ಫೆಬ್ರವರಿ 16ರಂದು ಉಚಿತ ಇ-ಖಾತಾ ಅಭಿಯಾನ ಆರಂಭಿಸಿದರು. ಎಂದೂ ನಿಲ್ಲಿಸದೆ ನಿರಂತರವಾಗಿ ಇನ್ನೂ ಇ-ಖಾತಾ ಮಾಡಿಸಿ ಕೊಡುತ್ತಿದ್ದು, 580 ಜನರು ಇದುವರೆಗೂ ಈ ಸೌಲಭ್ಯ ಪಡೆದಿದ್ದಾರೆ.

ನಮ್ಮ ಸಂಸ್ಕೃತಿ ಬೇಸಿಗೆ ಶಿಬಿರ

ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಯಬೇಕು, ಅವರಲ್ಲಿರುವ ಪ್ರತಿಭೆ ಹೊರತರಲು ಒಂದು ಉತ್ತಮ ವೇದಿಕೆ ಸೃಷ್ಟಿ ಮಾಡಬೇಕು ಎಂಬ ಆಶಯದಿಂದ ಪ್ರಮೋದ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪದ್ಮನಾಭನಗರ ನಮ್ಮ ಸಂಸ್ಕೃತಿ ಬೇಸಿಗೆ ಶಿಬಿರ ಆರಂಭಿಸಲಾಯಿತು. ನೃತ್ಯ, ಸಂಗೀತ ಮತ್ತು ಯೋಗ ಈ ವಿಭಾಗಗಳಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

ರಾಜಕೀಯದ ಕಡೆಗೆ ಒಲವು

ಪ್ರಮೋದ್ ಅವರಿಗೆ ರಾಜಕೀಯದ ಕಡೆ ಆಸಕ್ತಿ ಮೂಡಿತ್ತು. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ 2023-24ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಪ್ರಮೋದ್​ರನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಸರ್ಕಾರದ ಐದು ಗ್ಯಾರಂಟಿ ಯೋಜನೆ ತಲುಪುತ್ತಿರುವುದು ಬಡವರಿಗೆ. ಈ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ? ಅದರಿಂದ ಅವರ ಜೀವನ ಬದಲಾವಣೆಯಾಗುತ್ತಿದೆಯೇ? ಎಂದು ಖುದ್ದು ಫೀಲ್ಡ್​ಗೆ ಇಳಿದು ತಿಳಿದುಕೊಳ್ಳಲು ಪ್ರಾರಂಭಿಸಿದರು. ಮನೆ ಮನೆಗೆ ಭೇಟಿ ಕೊಟ್ಟು ಫಲಾನುಭವಿಗಳನ್ನು ಮಾತನಾಡಿಸಿ, ಅವರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು.

ಈ ವೇಳೆ ಯುವತಿಯೊಬ್ಬರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮ ತಂದೆಯ ವೈದ್ಯಕೀಯ ವೆಚ್ಚ ಭರಿಸಿ ಅವರನ್ನು ಉಳಿಸಿಕೊಂಡಿರುವುದು ಕಂಡುಬಂತು. ಇದೇ ರೀತಿ ಮತ್ತೊಬ್ಬ ಮಹಿಳೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಒಂದು ಸ್ವಂತ ವ್ಯವಹಾರ ಮಾಡಲು ಮುಂದಾಗಿದ್ದಾರೆ. ಐದಾರು ಮಂದಿ ಸೇರಿ ಗೃಹಲಕ್ಷ್ಮೀ ಕ್ಯಾಂಟಿನ್ ಆರಂಭಿಸಲು ಮುಂದಾಗಿದ್ದು, ಸದ್ಯದಲ್ಲಿಯೇ ಉದ್ಘಾಟನೆಯಾಗಲಿದೆ. ಅದಕ್ಕೆ ಪ್ರಮೋದ್ ಶ್ರೀನಿವಾಸ್ ಅವರು ಉತ್ತೇಜನ ನೀಡಿದ್ದಾರೆ.

ನಮಗೂ ಮತ್ತು ವಿಜಯವಾಣಿ ಪತ್ರಿಕೆಗೂ ಮೊದಲಿನಿಂದಲೂ ತುಂಬಾ ಒಡನಾಟವಿದೆ. ನನ್ನಂತಹ ಒಬ್ಬ ಯುವಕನ ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ವಿಜಯವಾಣಿ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಸಹಕಾರಿಯಾಗಲಿದೆ. ಇದರ ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. | ಪ್ರಮೋದ್ ಶ್ರೀನಿವಾಸ್, ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪದ್ಮನಾಭನಗರ ಗ್ಯಾರಂಟಿ ಸಮಿತಿ ಅಧ್ಯಕ್ಷ

ಆರೋಗ್ಯ ಕರ್ನಾಟಕ ಕಾರ್ಡ್ ಉಚಿತ ವಿತರಣೆ

ತಮ್ಮ ಕಚೇರಿಯಿಂದ ಉಚಿತವಾಗಿ ಪದ್ಮನಾಭನಗರ ಕ್ಷೇತ್ರದ ಜನತೆಗೆ ಇದುವರೆಗೂ 500ಕ್ಕೂ ಹೆಚ್ಚು ಆರೋಗ್ಯ ಕರ್ನಾಟಕ ಆಯುಷ್ಮಾನ್ ಕಾರ್ಡ್​ಗಳನ್ನು ವಿತರಣೆ ಮಾಡಿ ಆರೋಗ್ಯ ವಿಮೆ ಬಗ್ಗೆ ಪ್ರಮೋದ್ ಶ್ರೀನಿವಾಸ್ ಅರಿವು ಮೂಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಶೇ.100 ಅನುಷ್ಠಾನ

ಪ್ರಮೋದ್ ಶ್ರೀನಿವಾಸ್ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ದಿನದಿಂದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ಕೊಟ್ಟು ಅನ್ನಭಾಗ್ಯ ಯೋಜನೆ ಪರಿಶೀಲನೆ ಮಾಡಿದ್ದರು. ತಮ್ಮ ಕಚೇರಿಯಲ್ಲಿ ಗ್ಯಾರಂಟಿ ಸಹಾಯವಾಣಿ ಆರಂಭಿಸಿದರು. ನಂತರ ಪದ್ಮನಾಭನಗರದ 8 ವಾರ್ಡ್​ಗಳಲ್ಲಿ ಪಂಚ ಗ್ಯಾರಂಟಿಗಳ ಸಂಪೂರ್ಣ ಜಾರಿ ಶಿಬಿರ ನಡೆಸಿದರು. ಫಲಾನುಭವಿಗಳಿಂದ ಅರ್ಜಿ ಪಡೆದು ಒಂದು ವಾರದೊಳಗೆ ವಿಲೇವಾರಿ ಮಾಡಿದ್ದರು. ಜತೆಗೆ ಗ್ಯಾರಂಟಿ ಸಂವಾದ ಆಯೋಜಿಸುತ್ತಿದ್ದಾರೆ. ಅದಷ್ಟೇ ಅಲ್ಲದೇ ಜನರ ಮನೆ ಬಾಗಿಲಿಗೆ ತಾವೇ ಖುದ್ದು ಭೇಟಿ ಕೊಟ್ಟು ಗ್ಯಾರಂಟಿ ಭೇಟಿ ಎಂಬ ವಿನೂತನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಕೃಷ್ಣಪ್ಪ ಅವರೇ ಬೆಂಗಳೂರಿನ ಎಲ್ಲ 28 ವಿಧಾನಸಭಾ ಸಮಿತಿಗಳಿಗೆ ಪತ್ರ ಬರೆದು ಪದ್ಮನಾಭ ನಗರ ಕ್ಷೇತ್ರದ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಅವರ ಕಾರ್ಯವನ್ನು ಅಳವಡಿಸಿಕೊಳ್ಳುವಂತೆ ಪತ್ರ ಬರೆದಿದ್ದರು.

ಯುವಕರೇ ದೇಶದ ಶಿಲ್ಪಿಗಳು

ಶಿಕ್ಷಣ ನನ್ನ ವೃತ್ತಿ, ರಾಜಕೀಯ ನನ್ನ ಪ್ರವೃತ್ತಿಯಾಗಿದೆ. ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ನನಗೆ ಒಂದು ರೀತಿ ತೃಪ್ತಿಯನ್ನು ನೀಡುತ್ತದೆ. ಯುವಕರೇ ದೇಶದ ಶಿಲ್ಪಿಗಳು. ದೇಶ ಕಟ್ಟಲು ಅಡಿಪಾಯವಾಗಿ ಯುವಕರೇ ನಿಲ್ಲಬೇಕಾಗುತ್ತದೆ. ಯುವ ಶಕ್ತಿ ಜಾಸ್ತಿ ಇರುವ ದೇಶ ನಮ್ಮದು. ಹೀಗಾಗಿ ದೇಶ ಕಟ್ಟುವುದರಲ್ಲಿ ಯುವಕರ ಜವಾಬ್ದಾರಿ ಹೆಚ್ಚಿದೆ. ಯುವ ಸಮೂಹ ಮುಂದೆ ಬಂದು ರಾಜಕೀಯ ಸೇರಿ ಎಲ್ಲ ಕ್ಷೇತ್ರದಲ್ಲಿ ಭಾಗವಹಿಸಿ ತಮ್ಮದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡಬೇಕು ಎಂದು ಪ್ರಮೋದ್ ಶ್ರೀನಿವಾಸ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net