

Blue Ink: ಹಾಲಿವುಡ್ನ ಅನೇಕ ಸ್ಟಾರ್ಗಳು ಸೇರಿದಂತೆ ಇತರೆ ಕ್ಷೇತ್ರದ ಸ್ಟಾರ್ ಸೆಲೆಬ್ರಿಟಿಗಳು ತಮ್ಮ ಬಳಿ ಆಟೋಗ್ರಾಫ್ ಕೊಡುವಂತೆ ಯಾರಾದರೂ ನೀಲಿ ಇಂಕ್ನ ಪೆನ್ ಅಥವಾ ಮಾರ್ಕರ್ ಹಿಡಿದು ಬಂದರೆ ಖಂಡಿತ ಸಹಿ ಹಾಕುವುದಿಲ್ಲ. ಬದಲಿಗೆ ಬೇರೆ ಬಣ್ಣದ ಇಂಕ್ ತಗೊಂಡು ಬನ್ನಿ ಸಿಗ್ನೇಚರ್ ಕೊಡ್ತೀನಿ ಎನ್ನುತ್ತಾರೆ. ಇದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಮನಸ್ಸಿಗೆ ನೋವುಂಟಾದ ಪ್ರಸಂಗಗಳು ಇವೆ. ತಮ್ಮ ನೆಚ್ಚಿನ ನಟರು ಹೀಗೆ ಹೇಳುತ್ತಿದ್ದಂತೆ ಕೆಲವರು ಮೌನಕ್ಕೆ ಜಾರಿದರೆ, ಇನ್ನು ಕೆಲವರು ಇದ್ಯಾಕೆ ಈ ರೀತಿ ಮಾಡ್ತಾರೆ? ಅವರಿಗೆ ಅಹಂಕಾರ, ಸ್ಟಾರ್ ಪಟ್ಟದ ನಶೆ ಏರಿರಬಹುದು ಎಂದು ಊಹಿಸಿಕೊಳ್ಳುತ್ತಾರೆ. ಆದರೆ, ಅದರ ಹಿಂದಿರುವ ಉದ್ದೇಶ ಬೇರೆಯೇ ಇದೆ.
ಇದಕ್ಕೆ ಓರ್ವ ಹಾಲಿವುಡ್ ನಟಿಯೊಬ್ಬರು ತಮ್ಮ ಫ್ಯಾನ್ಸ್ಗಳೊಂದಿಗೆ ನಡೆದುಕೊಂಡ ರೀತಿ ಜನಕ್ಕೆ ಸ್ವಲ್ಪವು ಇಷ್ಟವಾಗಿರಲಿಲ್ಲ. ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡಿ, ಚರ್ಚೆಗೆ ಗ್ರಾಸವಾಗಿತ್ತು. 'ದಿ ಕ್ರೌಂನ್' ಸೀರಿಸ್ನ ನಟಿ ಕ್ಲೇರ್ ಫೋಯ್ಗೆ ಅಭಿಮಾನಿಯೊಬ್ಬರು ಆಟೋಗ್ರಾಫ್ ನೀಡುವಂತೆ ತಮ್ಮ ಬಳಿಯಿದ್ದ ಬ್ಲೂ ಇಂಕ್ ಪೆನ್ ಕೊಟ್ಟರು. ಇದನ್ನು ನೋಡುತ್ತಿದ್ದಂತೆ ನಟಿ ಸಹಿ ಹಾಕಲು ನಿರಾಕರಿಸಿದರು. ಬದಲಿಗೆ ಕಪ್ಪು ಅಥವಾ ಬೇರೆ ಬಣ್ಣದ ಇಂಕ್ ಇದ್ದರೆ ತನ್ನಿ ಎಂದು ಹೇಳಿ, ಅಲ್ಲಿಂದ ಹೊರಟು ಹೋದರು. ಇದು ಅಭಿಮಾನಿಗೆ ಅತೀವ ನೋವು ಉಂಟುಮಾಡಿತು.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಸಹ ಭುಗಿಲೆದ್ದಿತು. ಫ್ಯಾನ್ಸ್ಗಳಿಗೆ ಸಹಿ ಹಾಕಲು ಯಾಕಿಷ್ಟು ಅಸಡ್ಡೆ ತೋರುತ್ತಾರೆ? ನೀಲಿ ಇಂಕ್ನಲ್ಲಿ ಆಟೋಗ್ರಾಫ್ ಹಾಕಲು ಏಕೆ ಹಿಂದೇಟು ಹಾಕ್ತಿದ್ದಾರೆ? ಇದರ ಹಿಂದಿನ ಉದ್ದೇಶವೇನು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ, ಇದ್ಯಾವುದಕ್ಕೂ ಸೂಕ್ತ ಉತ್ತರ ಸಿಗಲಿಲ್ಲ. ಆದರೆ, ಒಬ್ಬನೇ ಒಬ್ಬ ಕಮೆಂಟ್ ಸೆಕ್ಷನ್ನಲ್ಲಿ ವಿವರಿಸಿದ ರೀತಿಗೆ ಅಭಿಮಾನಿಗಳು ದಂಗಾದರು. ಅಸಲಿಗೆ ಆತ ಹೇಳಿದ್ದೇನು ಗೊತ್ತಾ? ಕೇಳಿದ್ರೆ ನೀವು ಶಾಕ್ ಆಗ್ತೀರಾ.
ನೀಲಿ ಬಣ್ಣದ ಇಂಕ್ನಲ್ಲಿ ಸಹಿ ಹಾಕೋದಿಲ್ಲ ಎಂಬ ಸಂಗತಿ ಒಂದು ರೀತಿ ವಿಚಿತ್ರ ಎನಿಸಿದರು, ಅದರ ಹಿಂದೆ ಭಯಾನಕ ಸಂಗತಿ ಅಡಗಿರುವುದು ಅಷ್ಟೇ ಸತ್ಯ. ಯಾರೇ ದೊಡ್ಡ ಸ್ಟಾರ್ಗಳಾಗಲಿ ಅವರು ನೀಲಿ ಇಂಕ್ನಲ್ಲಿ ಆಟೋಗ್ರಾಫ್ ನೀಡಲು ಬಯಸೋದಿಲ್ಲ. ಕಾರಣ, ಬ್ಲೂ ಇಂಕ್ನಲ್ಲಿ ಮಾಡಿದ್ರೆ, ಅದನ್ನು ಬಹಳ ಸುಲಭವಾಗಿ ಸ್ಕ್ಯಾನ್ ಮಾಡಿ, ನಂತರದಲ್ಲಿ ನಕಲು ಮಾಡಬಹುದು. ಇದನ್ನು ಮೀರಿ ಹಣದ ಆಸೆಗೆ ದುಬಾರಿ ಮೊತ್ತಕ್ಕೆ ಮಾರಾಟ ಕೂಡ ಮಾಡಬಹುದು ಎಂಬ ಭಯದಿಂದ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಎಂದಿಗೂ ಬ್ಲೂ ಇಂಕ್ನಲ್ಲಿ ಸಿಗ್ನೇಚರ್ ಕೊಡಲು ಇಚ್ಛಿಸುವುದಿಲ್ಲ,(ಏಜೆನ್ಸೀಸ್).