ಆಸ್ತಿ ವಿವರದ ಜತೆಗೆ ಇಬ್ಬರು ಪತ್ನಿಯರು ಇರುವುದಾಗಿ ಘೋಷಿಸಿದ ಎಎಪಿ ಅಭ್ಯರ್ಥಿ!

Dasara Shankar
Published on

ವಿಜಯನಗರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳ ಜತೆಗೆ ಇನ್ನಿತರ ಮಾಹಿತಿಗಳನ್ನು ನಾಮಪತ್ರದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ. ಇದೀಗ ವಿಜಯನಗರ ಕ್ಷೇತ್ರದ ಆಮ್​ ಆದ್ಮಿ ಪಾರ್ಟಿ ಅಭ್ಯರ್ಥಿ ಆಸ್ತಿ ವಿವರದ ಜತೆ ಇಬ್ಬರು ಪತ್ನಿಯರು ಇರುವುದನ್ನು ಧೃಡಪಡಿಸಿಕೊಂಡಿದ್ದಾರೆ.

ವಿಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ದಾಸರ ಶಂಕರ್ ಅವರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಬಗ್ಗೆ ಶಂಕರ್​ ಉಲ್ಲೇಖಿಸಿದ್ದಾರೆ. ನೋಟರಿ ದೃಢಪಡಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಮಾಹಿತಿ ಇದೆ.

ಎಎಪಿ ಅಭ್ಯರ್ಥಿಯಾಗಿ ದಾಸರ ಶಂಕರ್​ ನಾಮಪತ್ರ ಸಲ್ಲಿಸಿದ್ದಾರೆ. ಎಎಪಿಯು ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಒಟ್ಟು 224 ಸ್ಥಾನಗಳನ್ನು ಕರ್ನಾಟಕ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆ ಮಾಡಲು 113 ಬಹುಮತ ಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net