ಅನ್ನ ಸಾಂಬಾರ್‌ಗೆ ಗಾಜಿನ ಚೂರು ಹಾಕುತ್ತಿದ್ದ ಭೂಪ

923510_4755237_SC-takes-exception-to-filing-of-appeal-against-FIR-registration_akhbar
Published on

ಅನ್ನ ಸಾಂಬಾರ್‌ಗೆ ಗಾಜಿನ ಚೂರು ಹಾಕುತ್ತಿದ್ದ ಭೂಪ

ಕೋಟ: ಅನ್ನ ಸಾಂಬಾರ್‌ನಲ್ಲಿ ಗಾಜಿನ ಚೂರುಗಳನ್ನು ಹಾಕುತ್ತಿದ್ದಾತನ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟದ ಗೀತಾ ಎಂಬುವರ ಮನೆಯ ಆಹಾರದಲ್ಲಿ ಗಾಜಿನ ಚೂರುಗಳು ಪತ್ತೆಯಾಗುತ್ತಿದ್ದು, ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ನೋಡಿದಾಗ ಪಕ್ಕದ ಮನೆಯ ವಿಜೇಂದ್ರ ಎಂಬಾತ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಅನ್ನ ಸಾಂಬಾರ್‌ಗೆ ಗಾಜಿನ ಚೂರುಗಳನ್ನು ಹಾಕುತ್ತಿದ್ದ ದೃಶ್ಯ ದಾಖಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net