ವಿಜಯಲಕ್ಷ್ಮೀ ಪೋಸ್ಟ್​​​​​​ ದರ್ಶನ್​ ಬಿಡುಗಡೆಯ ಸೂಚನೆ ನೀಡ್ತಿದೆ, ಫುಲ್​ ಖುಷ್​ ಆದ ಡಿ ಬಾಸ್​​ ಫ್ಯಾನ್ಸ್​​…!

vijaya
Published on

ದರ್ಶನ್​ ಅಭಿನಯಿಸಿರುವಂತಹ ''ನವಗ್ರಹ'' ಚಲನಚಿತ್ರ ಮತ್ತೆ ಚಿತ್ರಮಂದಿರಗಲಲ್ಲಿ ತೆರೆ ಕಾಣಲಿದೆ ಎಂದು ದರ್ಶನ್​​ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಫೋಸ್ಟ್​ ಒಂದನ್ನ ಹಂಚಿಕೊಂಡಿದ್ದಾರೆ.

ಇದೀಗ ಚಿತ್ರ ಬಿಡುಗಡೆಗೂ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರೋ ದರ್ಶನ್​​ ಬಿಡುಗಡೆಗೂ ಸಂಬಂಧವಿದೆ ಎಂಬ ಚರ್ಚೆಗಳು ಶುರುವಾಗಿವೆ.

''ನಿಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದ ಚಿತ್ರ ನವಗ್ರಹ ಅತೀ ಶೀಘ್ರದಲ್ಲಿ ರಿಲೀಸ್​ ಆಗಲಿದೆ. ಇದು ಮೊದಲಿಗಿಂತ ಸ್ಪೆಷಲ್​ ಆಗಿರಲಿದೆ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ'' ಎಂದು ವಿಜಯಲಕ್ಷ್ಮೀ ತಮ್ಮ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್​ ಬಂಧನದಿಂದ ಸ್ಥಗಿತಗೊಂಡಿದ್ದ ಡೆವಿಲ್​ ಚಿತ್ರತಂಡವೂ ದಸರಾ ಹಬ್ಬದ ಶುಬಾಶಯದ ಪೋಸ್ಟ್​​​ ಒಮದನ್ನ ಹಂಚಿಕೊಂಡಿದ್ದಾರೆ.ಸದ್ಯ ಜೈಲಿನಿಂದ ದರ್ಶನ್​ ಅವರಿಗೆ ಜಾಮೀನು ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದೇ ಸಮಯದಲ್ಲಿ ನವಗ್ರಹ ರೀ ರಿಲೀಸ್​ ಆಗೋದು ಕುತೂಹಲ ಸೃಷ್ಟಿಸಿದ್ದು, ವಿಜಯಲಕ್ಷೀ ಅವರ ಈ ಒಂದು ಪೋಸ್ಟ್​ ದರ್ಶನ್​ ಬಿಡುಗಡೆಯ ಸಂಕೇತ ಎಂದು ಹೇಲಲಾಗುತ್ತಿದೆ.

ಕನ್ನಡ ಚಿತ್ರರಂಗದ ಖಳನಟರ ಮಕ್ಕಳೆಲ್ಲರೂ ಈ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದ ಮತ್ತೊಂದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net