

ನವದೆಹಲಿ: ದೇಶದಿಂದ ಪಲಾಯನಗೈದ ಇಬ್ಬರು ಉದ್ಯಮಿಗಳಾದ(Businessmen) ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ತಮ್ಮ ಎಕ್ಸ್ ಖಾತೆಗಳಲ್ಲಿ ಸಂಭಾಷಣೆ ಮಾಡುವ ಮೂಲಕ ಭಾರತ ದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಇದೇ ಡಿ.18ರಂದು ವಿಜಯ್ ಮಲ್ಯ ಅವರ ಜನ್ಮದಿನ ನಿಮಿತ್ತ ಲಲಿತ್ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರ್ತಡೇ ಶುಭಾಷಯಗಳು ಹಂಚಿಕೊಂಡಿದ್ದಾರೆ. ''ನನ್ನ ಸ್ನೇಹಿತ ವಿಜಯ್ ಮಲ್ಯ ನಿಮಗೆ ಜನ್ಮ ದಿನದ ಶುಭಾಷಯಗಳು. ನಮ್ಮಿಬ್ಬರ ಜೀವನದಲ್ಲಿ ಹಲವಾರಿ ಏರಿಳಿತಗಳಿವೆ. ನಾವಿಬ್ಬರೂ ಅದನ್ನೂ ನೋಡಿದ್ದೇವೆ. ಇದು ಕೂಡ ಹಾದು ಹೋಗುತ್ತದೆ ಎಂದು ಬರೆದುಕೊಂಡಿದ್ದಾರೆ''
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ '' ಅತ್ಮೀಯ ಸ್ನೇಹಿತ, ನಿನಗೆ ಧನ್ಯವಾದಗಳು. ಆದರೆ, ದೇಶಕ್ಕೆ(ಭಾರತ) ನಾವು ಕೊಟ್ಟ ಕೊಡುಗೆ ತಪ್ಪಾಗಿದೆ'' ಎಂದು ಹೇಳಿದ್ದಾರೆ.
ವಿಜಯ್ ಮಲ್ಯ ಕಿಂಗ್ಪೀಶರ್ ಏರ್ಲೈನ್ಸ್ಗೆ ಸಂಬಂಧಿಸಿದಂತೆ 9 ಸಾವಿರ ಕೋಟಿ ರೂ. ಸಾಲಗಳನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡದ ಕಾರಣ 2016ರಲ್ಲಿ ದೇಶದಿಂದ ಪಲಾಯನ ಮಾಡಿದ್ದರು. ಅಲ್ಲದೇ, ಐಪಿಎಲ್ ದಂತ ಕತೆ ಎಂದೇ ಪ್ರಖ್ಯಾತರಾದ ಲಲಿತ್ ಮೋದಿ ಬಿಸಿಸಿಐ ಮತ್ತು ಐಪಿಎಲ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಆಕ್ರಮ ಹಣ ವ್ಯವಹಾರ, ವಂಚನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ 2010ರಲ್ಲಿ ದೇಶ ತೊರೆದರು.
ಇನ್ನು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೂಲಕ(ಪಿಎಸ್‌ಬಿ) 14,131 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಲೋಕಾಸಭೆಗೆ ನಿರ್ಮಲಾ ಸೀತಾರಾಮನ್ ಡಿ.17ರಂದು ತಿಳಿಸಿದ್ದರು.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದು, 6,203 ಕೋಟಿ ರೂ. ಸಾಲದ ಇರುವುದಾಗಿ ಕೋರ್ಟ್ ತೀರ್ಪು ಕೊಟ್ಟಿದೆ. ಆದರೆ, ಭಾರತದಲ್ಲಿ ನನ್ನ ಆಸ್ತಿಯ ಮೂಲಕ 14,131 ಕೋಟಿ ರೂ.ವಸೂಲಿ ಮಾಡಿದ್ದಾರೆ. ಇದು ಎರಡು ಪಟ್ಟು ಅಲ್ವವೇ?. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬ್ಯಾಂಕ್ ಹೇಗೆ ಅಷ್ಟೊಂದು ವಸೂಲಿ ಮಾಡಿವೆ. ಅಲ್ಲದೇ ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದಿಯೇ ಎಂದು ಪ್ರಶ್ನಿಸಿದ್ದರು,(ಏಜೆನ್ಸೀಸ್).