ವಿಜಯ ಮಲ್ಯಗೆ ಕರೊನಾ ವರದಾನ: ಲಂಡನ್ ಹೈಕೋರ್ಟ್​ನಿಂದ ರಿಲೀಫ್

Vijay Mallya vvani
Published on

ಲಂಡನ್: ಭಾರತದ ಬ್ಯಾಂಕುಗಳಿಗೆ -ಠಿ; 9000 ಕೋಟಿ ವಂಚನೆ ಮಾಡಿ ಲಂಡನ್​ನಲ್ಲಿರುವ ಉದ್ಯಮಿ ವಿಜಯ್ ಮಲ್ಯರನ್ನು ವಿರುದ್ಧದ ಪ್ರಕರಣದ ವಿಚಾರಣೆಯನ್ನು ಲಂಡನ್ ಹೈಕೋರ್ಟ್ ಮುಂದೂಡಿದೆ.

ವಿಜಯ್ ಮಲ್ಯ ಭಾರತದ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗಬೇಕು ಹಾಗೆಯೇ ಕರ್ನಾಟಕದ ಹೈಕೋರ್ಟ್​ನಲ್ಲಿರುವ ಅರ್ಜಿಯೂ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಅವರಿಗೆ ಸಮಯ ನೀಡಬೇಕು ಎಂದು ಲಂಡನ್ ಹೈಕೋರ್ಟ್​ನ ದಿವಾಳಿತನ ವಿಭಾಗದ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಹೇಳಿದ್ದಾರೆ. ಈ ಸಮಯಾವಕಾಶವು ಮಲ್ಯ ತನ್ನ ಸಾಲವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 1ರ ನಂತರ ಕರೊನಾಕ್ಕೆ ತುತ್ತಾಗಿರುವ ದೇಶದ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ನಿರ್ಧರಿಸಲಾಗುವುದು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟಗಳು ಮಲ್ಯ ವಿರುದ್ಧ ಹೂಡಿರುವ ವ್ಯಾಜ್ಯ ಇದಾಗಿದೆ. ತಮ್ಮನ್ನು ಗಡಿಪಾರಿಗೆ ಆದೇಶಿಸಿರುವ ಬ್ರಿಟನ್ ಸರ್ಕಾರದ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿರುವ ಅರ್ಜಿ ಕೂಡ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net