

ಹೈದರಾಬಾದ್: ಟಾಲಿವುಡ್ ನಟ ವಿಜಯ್(Vijay) ದೇವರಕೊಂಡ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಡಿದಾಡತೊಡಗಿದೆ. ಇತ್ತೀಚೆಗಷ್ಟೇ ವಿಜಯ್ ಮತ್ತು ರಶ್ಮಿಕಾ ಔಟಿಂಗ್ ಗೆ ಹೋಗಿದ್ದು ಗೊತ್ತೇ ಇದೆ. ವಿಜಯ್ ಮತ್ತು ರಶ್ಮಿಕಾ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.
ಇದೀಗ ರಶ್ಮಿಕಾ ಮಂದಣ್ಣ ಸಂಬಂಧದ ಜತೆಗಿನ ವದಂತಿಗಳಿಗೆ ನಟ ವಿಜಯ್ ದೇವರಕೊಂಡ ಕೊನೆಗೂ ಮೌನ ಮುರಿದಿದ್ದಾರೆ. ಅಲ್ಲದೇ, ಇಬ್ಬರ ನಡುವಿನ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಜತೆಗಿನ ಡೇಟಿಂಗ್ ಬಗ್ಗೆ ಹೇಳಿ ಎಂದು ಸಂದರ್ಶಕ ಪ್ರಶ್ನೆ ಮುಂದಿಟ್ಟಾಗ ಮಾತನಾಡಿದ ವಿಜಯ್, ''ನಾನು ಸಿದ್ಧನಾದಗ, ಜಗತ್ತೀಗೆ ತಿಳಿಸಬೇಕು ಎಂದು ನಾನು ಭಾವಿಸಿದಾಗ ಮತ್ತು ಅದನ್ನು ನಾನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿದಾಗ ನಾನು ಅದರ ಬಗ್ಗೆ ಮಾತನಾಡುವೆ'' ಎಂದಿದ್ದಾರೆ.
ಅಲ್ಲದೇ, ಅದಕ್ಕೆ ಉದ್ದೇಶ, ಕಾರಣ ಮತ್ತು ಸಮಯ ಇರಬೇಕು. ಆದ್ದರಿಂದ ಅಂತಹ ದಿನದಲ್ಲಿ ನಾನು ನನ್ನ ರೀತಿಯಲ್ಲಿ ಪ್ರಪಂಚದೊಂದಿಗೆ ಸಂತೋಷದಿಂದ ಹಂಚಿಕೊಳ್ಳುಲು ಬಯಸುತ್ತೇನೆ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಇವರೆಗೂ ರಶ್ಮಿಕಾ ಯಾವ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2018ರಲ್ಲಿ 'ಗೀತ ಗೋವಿಂದಂ' ಮತ್ತು 2019ರಲ್ಲಿ ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅಭಿನಯದ ' ದಿ ಗರ್ಲ್‌ಫ್ರೆಂಡ್ ' ಚಿತ್ರದ ಟೀಸರ್ ಅನ್ನು ವಿಜಯ್ ದೇವರಕೊಂಡ ಲಾಂಚ್ ಮಾಡಿದ್ದರು. ಟೀಸರ್ ಕೂಡ ಅವರ ವಾಯ್ಸ್ ಓವರ್ ಅನ್ನು ಒಳಗೊಂಡಿದೆ,(ಏಜೆನ್ಸೀಸ್).