ಖುಷಿ ಸಿನಿಮಾ ಸಕ್ಸಸ್; 100 ಕುಟುಂಬಗಳಿಗೆ ತಲಾ 1ಲಕ್ಷ ರೂ.ನಂತೆ 1ಕೋಟಿ ರೂ. ದಾನ ಮಾಡಲಿದ್ದಾರೆ ನಟ ವಿಜಯ್ ದೇವರಕೊಂಡ

Vijay Deverakonda
Published on

ಹೈದರಾಬಾದ್​: ತೆರೆಯ ಮೇಲೆ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡುವ ವಿಜಯ್ ದೇವರಕೊಂಡ ರೀಲ್ ಮಾತ್ರವಲ್ಲ, ರಿಯಲ್ ಜೀವನದಲ್ಲಿಯೂ ಹೀರೋ ಎಂದು ಸಾಬಿತು ಮಾಡಿದ್ದಾರೆ. ತಮ್ಮ ನಟನೆಯ ಖುಷಿ ಸಿನಿಮಾದಿಂದ ಸಿಗುವ 1 ಕೋಟಿ ರೂ. ಹಣವನ್ನು ಬಡವರಿಗೆ ನಿಡುವುದಾಗಿ ಘೋಷಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಕಾಯರ್ಕ್ರಮವೊಂದರಲ್ಲಿ ಮಾತನಾಡಿ, 'ಖುಷಿ' ಚಿತ್ರ ಗಳಿಕೆಯಲ್ಲಿ 1 ಕೋಟಿ ರೂ. ಹಣವನ್ನು ಬಡ ಕುಟುಂಬಗಳಿಗೆ ಹಂಚಲಾಗುವುದು. ಅರ್ಹ 100 'ದೇವರ ಕುಟುಂಬ'ಗಳಿಗೆ ತಲಾ 1 ಲಕ್ಷ ರೂ. ಹಣವನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅರ್ಜಿ ಹರಿ ಬಿಟ್ಟು, ಆಯ್ಕೆಯಾಗುವ ಅರ್ಹ ಕುಟುಂಬಗಳಿಗೆ ವಾರದೊಳಗೆ ಹಣ ವಿತರಿಸಲಾಗುವುದು ಎಂದಿದ್ದಾರೆ. ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯ್ ದೇವರಕೊಂಡ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖುಷಿ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಸಕ್ಸಸ್​​ನ ಸಂಭ್ರಮಾಚರಣೆಗೆ ಚಿತ್ರ ತಂಡ ಕಾರ್ಯಕ್ರಮ ಆಯೋಜಿಸಿತ್ತು. ಈ ಸಮಯದಲ್ಲಿ "ಖುಷಿ ಸಿನಿಮಾದಲ್ಲಿ ಗಳಿಸಿರುವ ಹಣವನ್ನು ದೇವರ ಕುಟುಂಬಗಳಿಗೆ ಸಣ್ಣ ಆರ್ಥಿಕ ಸಹಾಯ ನೀಡಲು ಬಳಸುವುದು ನಿಜವಾದ ಯಶಸ್ಸು ಎಂದು ನಟ ವಿಜಯ್ ಹೇಳಿದ್ದಾರೆ.

ಖುಷಿ ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಬರೋಬ್ಬರಿ 50 ಕೋಟಿ ರೂ. ಗಳಿಸಿದೆ. ಕಾಮಿಡಿ, ರೊಮ್ಯಾಂಟಿಕ್ ಕಥಾಹಂದರವನ್ನು ಹೊಂದಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶವಿದೇಶಗಳಲ್ಲಿಯೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net