

ಮುಂಬೈ: ನಾನು ಸದ್ಯ ಡೇಟಿಂಗ್ನಲ್ಲಿ ಇದ್ದೇನೆ ಎಂದು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ(Vijay Deverakonda) ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸಂಬಂಧದ ವದಂತಿ ಬಗ್ಗೆ ಸೇರಿದಂತೆ ತಮ್ಮ ಪ್ರೀತಿ, ಸಂಬಂಧ ಮತ್ತು ಮದುವೆಯ ಆಲೋಚನೆಗಳ ಬಗ್ಗೆ ಸ್ವಾರಸ್ಯಕರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದುವರೆದು ಮಾತನಾಡಿರುವ ವಿಜಯ್, '' ನನಗೆ ಈಗ 35 ವರ್ಷ, ಒಬ್ಬಂಟಿಯಾರುತ್ತೇನೆ ಎಂದು ನೀವು ಭಾವಿಸುತ್ತಿರಾ?, ನಾನು ಸದ್ಯ ಒಬ್ಬರ ಜತೆ ಸಂಬಂಧದಲ್ಲಿ ಇದ್ದೇನೆ. ಅಲ್ಲದೇ,ಈ ಹಿಂದೆ ಸಹ ನಟಿಯರೊಂದಿಗೆ ಕೂಡ ಡೇಟಿಂಗ್ ಮಾಡಿರುವೆ ಎಂದು ಧೃಢಪಡಿಸಿದ ಅವರು, ನಮ್ಮ ಜತೆ ಯಾರದರೂ ಅಳವಾದ ಮತ್ತು ಬಲವಾದ ಸ್ನೇಹ ಹೊಂದಿದ್ದರೆ ಮಾತ್ರ ನಾನು ಡೇಟಿಂಗ್ಗೆ ಹೋಗುತ್ತೇನೆ'' ಎಂದರು.
ಇನ್ನೂ ರಶ್ಮಿಕಾ ಮಂದಣ್ಣ ಜತೆಗಿನ ಸಂಬಂಧದ ವದಂತಿ ಬಗ್ಗೆ ಕೇಳಿದಾಗ, '' ರಶ್ಮಿಕಾ ಮಂದಣ್ಣ ನಾನು ಒಳ್ಳೆ ಸ್ನೇಹಿತರು. ಗೀತಾ ಗೋವಿಂದಂ ಮತ್ತು ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಜನರು ಅ ರೀತಿಯ ಭಾವನೆಗಳನ್ನು ಮುಂದುವರೆಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸೋಷಿಯಲ್ ಮೀಡಿಯಾ ಸಾಥ್ ನೀಡುವುದರಿಂದ ಊಹಪೋಹಗಳು ಹೆಚ್ಚಿವೆ ಎಂದು ಅವರು ರಶ್ಮಿಕಾ ಸಂಬಂಧದ ಬಗ್ಗೆ ಅಲ್ಲಗೆಳೆದರು. ಅಲ್ಲದೆ, ರಶ್ಮಿಕಾರ ಮುಂಬರುವ ವಿಡಿ 12 ಮತ್ತು ಪುಷ್ಪ-2 ಚಿತ್ರದ ಬಗ್ಗೆ ಮತ್ತು ರಶ್ಮಿಕಾ ಬಗ್ಗೆ ಹೊಗಳಿದರು''.
ವಿಜಯ್ ದೇವರಕೊಂಡ ಸಿನಿಮಾ ವಿಚಾರಕ್ಕೆ ಬರುವುದಾರೆ ತಾತ್ಕಾಲಿಕವಾಗಿ ವಿಡಿ 12 ಎಂದು ನಾಮಕರಣ ಮಾಡಿದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಜರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನ ಮಾಡುತ್ತಿದ್ದು, ಗೂಢಚಾರಿ ಕಥೆಯನ್ನು ಹೊಂದಿದೆ, (ಏಜೆನ್ಸೀಸ್).