ನಟ ವಿಜಯ್​ ದೇವರಕೊಂಡ ಭಾವುಕ​​; ಕಾರಣ ಹೀಗಿದೆ

Untitled design - 2023-10-06T135600.003
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್​ ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿದ 'ಖುಷಿ' ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಇದೀಗ ಒಟಿಟಿ ವೇದಿಕೆಯಲ್ಲೂ ಈ ಚಿತ್ರ ರಿಲೀಸ್​ ಆಗಿದ್ದು, ಸಿನಿಪ್ರೇಕ್ಷಕರು ಕೊಟ್ಟ ರೆಸ್ಪಾನ್ಸ್​ಗೆ ನಟ ಭಾವುಕರಾಗಿದ್ದಾರೆ.

ಸೆಪ್ಟೆಂಬರ್ 1 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ ಚಿತ್ರ, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ವಿಯಾಯಿತು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಕಳೆದ ಒಂದೆರಡು ದಿನಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಪಾದಾರ್ಪಣೆ ಮಾಡುವ ಮೂಲಕ ಸಿನಿಪ್ರೇಕಕ್ಷರ ಮುಂದೆ ಬಹು ಭಾಷೆಗಳಲ್ಲಿ ಸ್ಟ್ರೀಮಿಂಗ್​ಗೆ ಲಭ್ಯವಾಯಿತು.

ಒಟಿಟಿಯಲ್ಲಿ ಬಿಡುಗಡೆಗೊಂಡ 'ಖುಷಿ' ಚಿತ್ರಕ್ಕೆ ದೊರೆತ ಅಭೂತಪೂರ್ವ ಬೆಂಬಲ ಕಂಡು ವಿಜಯ್​ ದೇವರಕೊಂಡ ಭಾವುಕರಾಗಿದ್ದಾರೆ. “ಪ್ರೀತಿಗೆ ಭಾಷೆ ಗೊತ್ತಿಲ್ಲ, ಭಾವನೆಗಳಿಗೆ ಎಲ್ಲೆಯಿಲ್ಲ ಎಂಬ ನಂಬಿಕೆಯಿಂದ ‘ಖುಷಿ' ಮಾಡಿದ್ದೇವೆ. ಒಟಿಟಿ ರಿಲೀಸ್​ಗೆ ಸಿಕ್ಕ ಅಗಾಧವಾದ ಪ್ರೀತಿಯು ನಂಬಲಾಗದಷ್ಟು ಸಂತೋಷ ನೀಡಿದೆ. ಈ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ, ಕನ್ನಡ ಅಥವಾ ಹಿಂದಿಯಲ್ಲಿ ನೋಡುತ್ತಿರಲಿ, ಇದು ನಮ್ಮ ಹೃದಯಕ್ಕೆ ತಂದಷ್ಟು ಖುಷಿಯನ್ನು ನಿಮ್ಮ ಹೃದಯಕ್ಕೂ ತರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಭಾವುಕವಾಗಿ ಹೇಳಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡ ಈ ಚಿತ್ರ ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಸದ್ಯ ನಟನ ಮುಂದಿನ ಸಿನಿಮಾ 'ವಿಡಿ 12' ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅವರ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net