More

    ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯನ್ನು ನಿಂದಿಸಿದ ವ್ಯಕ್ತಿ; ಎಫ್​ಐರ್​ ದಾಖಲಿಸಿ ವ್ಯಕ್ತಿ ಅರೆಸ್ಟ್​..!

    ಏರ್ ಇಂಡಿಯಾ ವಿಮಾನದಲ್ಲಿ, 21 ಬಿ 45 ಎಚ್‌ನಲ್ಲಿ ಕುಳಿತಿದ್ದ ವ್ಯಕ್ತಿಗಳಿಬ್ಬರು, ಅಶ್ಲೀಲವಾಗಿ ವರ್ತಿಸಿದ್ದು ಅವರನ್ನ ಬಂಧಿಸಲಾಗಿದೆ. ಎಕನಾಮಿಕ್​ ಕ್ಲಾಸ್​​ನ 21 ಬಿ ಸೀಟ್​​​ನಲ್ಲಿ ಕುಳಿತಿದ್ದ ವ್ಯಕ್ತಿ, 45 ಎಚ್​ನಲ್ಲಿ ಕುಳಿತಿದ್ದವನಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದ.


    ಲಿಖಿತ ಎಚ್ಚರಿಕೆ ನೀಡುವ ಮೊದಲು ಕ್ಯಾಬಿನ್ ಮೇಲ್ವಿಚಾರಕರಿಂದ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದ್ದು, ಕ್ಯಾಬಿನ್ರ್ ಕ್ರೂನ ಸದಸ್ಯರು ಆತನನ್ನ ಗಮನಿಸಿದ್ದರು. ತದನಂತರ ಆತನಿಗೆ ವಾರ್ನಿಂಗ್​ ಕೊಟ್ಟಿದ್ದಾರೆ. ವಾರ್ನಿಂಗ್​​ ಕೊಟ್ರೂ ಸುಮ್ಮನಿರದವನ ಮೇಲೆ ಕೊನೆಯಲ್ಲಿ ಎಫ್​ಐಆರ್​​ ದಾಖಲಿಸಲಾಗಿದೆ.
    ಎಫ್‌ಐಆರ್‌ನ ಪ್ರಕಾರ ಈ ವ್ಯಕ್ತಿ ದೂರುದಾರ ಮಹಿಳಾ ಪ್ರಯಾಣಿಕರು ಮತ್ತು ಇತರೆ ಸಿಬ್ಬಂದಿ ವರ್ಗದವರನ್ನು ನಿಂದಿಸಿದ್ದಾರೆ.


    ತುಂಬಾ ಜೋರಾಗಿ ಮಾತನಾಡುತ್ತಿದ್ದ ಬಂಧಿತ ವ್ಯಕ್ತಿ, ಅವನ ಸುತ್ತ ಕುಳಿತಿದ್ದ ಪ್ರಯಾಣಿಕರು ಮತ್ತು ಕುಟುಂಬದವರನ್ನ ಅಸಭ್ಯ ಮಾತುಗಳಿಂದ ನಿಂದಿಸಿದ್ದ. ಅಷ್ಟೇ ಅಲ್ಲ ನಮ್ಮ ದೇಶದ ಬಗ್ಗೆಯೂ ಅಗೌರವ ತೋರಿದ್ದಾನೆ. ಎಂದು ಎಫ್‌ಐಆರ್ನಲ್ಲಿ ಉಲ್ಲೇಖಿಸಲಾಗಿದೆ.


    ಪಂಜಾಬ್‌ನ ಜಲಂಧರ್‌ನ ನಿವಾಸಿ ಅಭಿನವ್ ಶರ್ಮಾ ಮೇಲೆ ಇದೀಗ ಸೆಕ್ಷನ್ 509 (ವಿಮಾನ ನಿಯಮಗಳ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts