

ಶಿವ ನಿರ್ವಾಣ ನಿರ್ದೇಶನದಡಿಯಲ್ಲಿ ಮೂಡಿಬಂದ ಖುಷಿ ಸಿನಿಮಾ ಬಿಡುಗಡೆಯಾಗಿ ಫಸ್ಟ್ ವೀಕೆಂಡ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಅಲ್ಲದೇ ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ಈ ಸಿನಿಮಾದ ಕಲೆಕ್ಷನ್ ಸೋಮವಾರದಿಂದಲೇ ಕಡಿಮೆ ಆಗಿತ್ತು. ಈ ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾ ಸದ್ಯ ಮಿಶ್ರಪ್ರತಿಕ್ರಿಯೆ ಪಡೆಯುತ್ತಿದೆ ಎನ್ನಲಾಗುತ್ತಿದೆ.
ಖುಷಿ ಸಿನಿಮಾದಲ್ಲಿ ಸಮಂತಾ ಹಾಗೂ ವಿಜಿ ಹಾಗೂ ಸ್ಯಾಮ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಅದರ ಪ್ರತಿಫಲ ಮಾತ್ರ ಎಲ್ಲರಲ್ಲೂ ಬೇಸರ ಉಂಟು ಮಾಡಿದೆ. ಹೌದು ರೌಡಿಬಾಯ್ ಲೈಗರ್ ಸಿನಿಮಾ ಹಾಗೂ ಸ್ಯಾಮ್ ಶಾಕುಂತಲಂ ಹಾಗೂ ಯಶೋದ ಸಿನಿಮಾಗಳು ಭಾಕ್ಸಾಫೀಸ್ನಲ್ಲಿ ನೆಲಚ್ಚಿದ್ದವು. ಹೀಗಾಗಿ ಇವರಿಬ್ಬರು ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದ್ದರು.
ಇದೀಗ ಈ ಸಿನಿಮಾದ ಕಲೆಕ್ಷನ್ ಸೋಮವಾರದಿಂದಲೇ ಕಡಿಮೆಯಾಗಿದ್ದು, ಚಿತ್ರಕ್ಕೆ ಮತ್ತೆ ಸೋಲಾಗಲಿದ್ಯಾ ಎಂಬ ಸಂಶಯವನ್ನ ಮೂಡಿಸಿದೆ.
ವಿಜಯ್ ದೇವರಕೊಂಡ ಖುಷಿ ಸಿನಿಮಾದ ಮೂಲಕ ಬಂಪರ್ ಹಿಟ್ ಹೊಡೆದಿದ್ದಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಖುಷಿ ತಂಡ ಯಶಸ್ವಿ ಸಂಭ್ರಮಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ವಿಜಯ್ ಅವರ ಕೆಲವು ಘೋಷಣೆಗಳನ್ನು ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನನ್ನ ಮತ್ತು ನನ್ನ ಚಿತ್ರದ ಮೇಲೆ ದಾಳಿಗಳು ನಡೆಯುತ್ತಿವೆ.
ಖುಷಿ ಚಿತ್ರದ ಮೇಲೆ ಫೇಕ್ ರೇಟಿಂಗ್, ಫೇಕ್ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಕೆಲವರು ಹಣ ಖರ್ಚು ಮಾಡುತ್ತಿದ್ದಾರೆ ಎಂದು ವಿಜಯ್ ಹೇಳಿದ್ರು.
ಅದೆಲ್ಲವನ್ನೂ ಮೀರಿ, ಅಭಿಮಾನಿಗಳು ಮತ್ತು ಪ್ರೇಕ್ಷಕರ ಪ್ರೀತಿಯಿಂದಾಗಿ ನಾವು ಈ ಯಶಸ್ಸನ್ನು ಪಡೆಯುತ್ತಿದ್ದೇವೆ. ಈ ಯಶಸ್ಸಿಗೆ ನೀನೇ ಕಾರಣ. ನನ್ನ ಗೆಲುವಿಗೆ ನೀವೆಲ್ಲಾ ಕಾರಣ ಅದೇ ನನಗೆ ಖುಷಿ ಎಂದಿದ್ದು, ನನ್ನ ಸಂಪಾದನೆಯ ಜೊತೆಗೆ ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ನೀವೆಲ್ಲರೂ ದೇವರ ಕುಟುಂಬದವರು. ನಾನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಫಾರ್ಮ್ ಅನ್ನು ಹಾಕುತ್ತೇನೆ. ಖುಷಿ ಹರಡಿದೆ. ನಾನು ಕೊಡುವ ಹಣ ನಿಮಗೆ ಬಾಡಿಗೆ ಮತ್ತು ಕಷ್ಟಕ್ಕೆ ಸಹಾಯ ಮಾಡಿದರೆ ನನಗೆ ಸಂತೋಷವಾಗುತ್ತದೆ ಎಂದೂ ವಿಜಯ್ ಹೇಳಿದ್ದರು.