ರಶ್ಮಿಕಾ ಮಂದಣ್ಣ,ವಿಜಯ್ ದೇವರಕೊಂಡ ನಿಶ್ಚಿತಾರ್ಥ ಫಿಕ್ಸ್​!

vijay deverakonda
Published on

ಬೆಂಗಳೂರು: ನಟ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ? ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಂತಿದೆ. ಅವರು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ಹಬ್ಬುತ್ತಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದಾರೆ ಎಂದು ಬಹಳ ದಿನಗಳಿಂದ ಸುದ್ದಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ವಿಹಾರಕ್ಕೆ ಹೋಗುವುದು, ವಿಜಯ್ ಮನೆಯಲ್ಲಿ ಪ್ರತಿ ಶುಭ ಸಮಾರಂಭ ಮತ್ತು ಹಬ್ಬಗಳಲ್ಲಿ ರಶ್ಮಿಕಾ ಭಾಗವಹಿಸುತ್ತಿರುವುದು ಕೂಡ ಈ ಸುದ್ದಿಗೆ ಬಲವನ್ನು ನೀಡಿದೆ. ಆದರೆ ಈ ಜೋಡಿ ಯಾವುದೇ ಸ್ಪಷ್ಟತೆ ನೀಡಿಲ್ಲ. ಫೆಬ್ರವರಿ ಎರಡನೇ ವಾರದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿವೆ.

ರಶ್ಮಿಕಾ ಈ ಹಿಂದೆ 'ಕಿರಿಕ್ ಪಾರ್ಟಿ' ಹೀರೋ ರಕ್ಷಿತ್ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಂತರ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ‘ಗೀತ ಗೋವಿಂದಂ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ರಶ್ಮಿಕಾ ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡರು. ಆ ಸಮಯದಲ್ಲಿ ವಿಜಯ್ ದೇವರಕೊಂಡನನ್ನು ಪ್ರೀತಿಸಿದ್ದೇ ಕಾರಣ ಎಂಬ ವರದಿಗಳೂ ಬಂದಿದ್ದವು.

‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ವಿಜಯ್ ಸ್ಟಾರ್ ಡಮ್ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಬಾಲಿವುಡ್ ನಾಯಕಿಯರ ಅಚ್ಚುಮೆಚ್ಚಿನ ಹೀರೋ ಕೂಡ ಎನಿಸಿಕೊಂಡಿದ್ದಾರೆ. 'ಅನಿಮಲ್​' ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್‌ನ ಮೋಸ್ಟ್ ವಾಂಟೆಡ್ ನಾಯಕಿಯೂ ಆದರು. ಸಾಲು ಸಾಲು ಅವಕಾಶಗಳು ಬರುತ್ತಿವೆ. ಇವರಿಬ್ಬರ ಲವ್ ಸ್ಟೋರಿ ಬಾಲಿವುಡ್ ನಲ್ಲೂ ಚರ್ಚೆಯಾಗತೊಡಗಿತು.

ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮಗಳು ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಸುದ್ದಿ ಬರೆದಿದ್ದವು. ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ಎರಡೂ ಕುಟುಂಬದ ಮುಖ್ಯಸ್ಥರು ನಿರ್ಧರಿಸಿದ್ದಾರೆ. ಆದರೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net