

ಆಂಧ್ರಪ್ರದೇಶ: ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದ 'ಲೈಗರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿತ್ತು. ಈ ಬಗ್ಗೆ 'ಖುಷಿ' ಚಿತ್ರದ ಟ್ರೇಲರ್ ಲಾಂಚ್ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ, ಈ ಚಿತ್ರ ನನ್ನ ಮೊದಲ ಫ್ಲಾಪ್ ಅಲ್ಲ ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ 'ಖುಷಿ' ಚಿತ್ರದ ಟ್ರೇಲರ್ ಲಾಂಚ್ ವೇಳೆ ಸುದ್ದಿಗಾರರೊಬ್ಬರು ಲೈಗರ್ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ನಿಮ್ಮ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯಿತು. ಚಿತ್ರದ ಸೋಲಿನ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ನಟ ವಿಜಯ್ ದೇವರಕೊಂಡ, "ಒಂದು ಸಿನಿಮಾ ಉತ್ತಮವಾಗಿ ಕೆಲಸ ಮಾಡಲಿಲ್ಲ ಎಂದಾಗ ಅದು ಬಹಳ ನೋವುಂಟು ಮಾಡುತ್ತದೆ. ಲೈಗರ್ಗಿಂತ ಹಿಂದಿನ ಚಿತ್ರಗಳು ಕೂಡ ಸೋಲನ್ನು ಕಂಡಿದೆ. ನಾನು ಈ ಹಿಂದೆ ಸಾಕಷ್ಟು ಫ್ಲಾಪ್‌ಗಳನ್ನು ಅನುಭವಿಸಿದ್ದೇನೆ. ಲೈಗರ್ ಚಿತ್ರವೇ ಮೊದಲಲ್ಲ. ಸೋಲಿನ ಜತೆಗೆ ಗೆಲುವು ಎರಡನ್ನು ಸಹ ಮುಂದುವರಿಸುತ್ತೇನೆ" ಎಂದು ಹೇಳಿದರು,(ಏಜೆನ್ಸೀಸ್).