

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸೆನ್ಸೇಷನಲ್ ಸ್ಟಾರ್, ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತು ಪ್ರಭು ಜೋಡಿಯಾಗಿ ನಟಿಸಿರುವ ಖುಷಿ ಚಿತ್ರದ ಬಗ್ಗೆ ಇದೀಗ ಹೊಸದೊಂದು ಮಾಹಿತಿ ಲಭಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣ ಪತ್ರ ಬಂದಿದೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಇದರ ಕುರಿತಾಗಿ ಸಾಕಷ್ಟು ಚರ್ಚೆಗಳು ಕೂಡ ಪ್ರಾರಂಭವಾಗಿದೆ.
ಇದನ್ನೂ ಓದಿ: ಹಿರಗಪ್ಪ ತಾತಾ ಅಜ್ಞಾನ ತೊಲಗಿಸುವ ಗುರು
ಶಿವ ನಿರ್ವಾಣ ನಿರ್ದೇಶನದ 'ಖುಷಿ' ಚಿತ್ರ ಈಗಾಗಲೇ ಚಿತ್ರತಂಡ ನಿಗದಿಪಡಿಸಿರುವಂತೆ ಸೆಪ್ಟಂಬರ್ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ಸಿನಿಮಾಗೆ 'ಯು' ಪ್ರಮಾಣ ಪತ್ರ ದೊರಕಿದೆ ಎಂದು ಹೇಳಲಾಗಿದೆ. ಇದಕ್ಕೆ ಇತ್ತೀಚಿನ ವರದಿಗಳು ನೀಡಿರುವ ಮಾಹಿತಿ ಪ್ರಕಾರ, ಚಿತ್ರ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಪಡೆದುಕೊಂಡಿದೆ ಎನ್ನಲಾಗಿದೆ. ಆದ್ರೆ, ಈ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಇದೇನಾದರೂ ನಿಜವಾದರೆ, ವಿಜಯ್ ದೇವರಕೊಂಡ ನಟನೆಯ 'ಖುಷಿ' ಮತ್ತು 'ಪೆಲ್ಲಿಚೂಪುಲು' ಎರಡು ಸಿನಿಮಾಗಳು ಮಾತ್ರ ಯು ಪ್ರಮಾಣ ಪತ್ರ ಪಡೆದುಕೊಂಡ ಚಿತ್ರಗಳಾಗಲಿವೆ. ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಪ್ರದೀಪ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).