

ನವದೆಹಲಿ: ಸಾಮಾಜಿಕ ಜಾಲತಾಣಕ್ಕೆ ಇರುವ ಶಕ್ತಿ ಅಪರಿಮಿತ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ತಿಳಿದಿದೆ. ಒಂದು ವಿಷಯವನ್ನು ಸಹಸ್ರಾರು ಸಂಖ್ಯೆಯ ಜನರಿಗೆ ಶರವೇಗದಲ್ಲಿ ತಲುಪಿಸುವ ಮೂಲಕ ವೈರಲ್ ಆಗಿ, ಜನರಿಂದ ವ್ಯಾಪಕ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ.
ಅದರಲ್ಲೂ ರೀಲ್ಸ್ ವಿಡಿಯೋಗಳು ನೆಟ್ಟಿಗರ ಗಮನವನ್ನು ಬಹಳ ವೇಗವಾಗಿ ಸೆಳೆಯುತ್ತಿದ್ದು, ಈ ಪೈಕಿ ಪುಟ್ಟ ಪೋರಿಯೊಬ್ಬಳು ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಕಾವಾಲಾ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೀಲ್ಸ್ನಲ್ಲಿ ನಟಿ ತಮನ್ನಾ ಭಾಟಿಯಾ ಹಾಕಿದ ಮಸ್ತ್ ಸ್ಟೆಪ್ಸ್ಗಳನ್ನೇ ಈಕೆಯೂ ಮುದ್ದು ಮುದ್ದಾಗಿ ಮಾಡಿರುವುದು ಅನೇಕ ನೆಟ್ಟಿಗರ ಗಮನವನ್ನು ಸೆಳೆದಿದೆ.
ಕಾವಾಲಾ ಹಾಡು ಬಿಡುಗಡೆಗೊಂಡ ಮೊದಲ ದಿನದಿಂದಲೂ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವರು ಈ ಸಾಂಗ್ಗೆ ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮುಖೇನ ಹಾಡನ್ನು ಮತ್ತಷ್ಟು ಟ್ರೆಂಡ್ ಮಾಡಿದರು. ಇದೀಗ ಈ ಸಾಲಿಗೆ ಪುಟ್ಟ ಪೋರಿ ವಿಡಿಯೋ ಕೂಡ ಸೇರ್ಪಡೆಗೊಂಡಿದ್ದು, ನೆಟ್ಟಿಗರು ಕಮೆಂಟ್ ಮಾಡಿ ಬಾಲಕಿಯ ಡ್ಯಾನ್ಸ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).