ವಿಶೇಷ ಸಂದರ್ಭಕ್ಕಾಗಿ ಭೇಟಿಯಾದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮತ್ತು ಪರಶುರಾಮ್

Untitled design - 2023-08-15T201137.084
Published on

ಆಂಧ್ರಪ್ರದೇಶ: ಟಾಲಿವುಡ್​ ಸ್ಟಾರ್​ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ರೋಮ್ಯಾಂಟಿಕ್​-ಕಾಮಿಡಿ ಬ್ಲಾಕ್​ ಬಸ್ಟರ್ 'ಗೀತಾ ಗೋವಿಂದಂ​' ಚಿತ್ರ ಬಿಡುಗಡೆಯಾಗಿ ಇಂದಿಗೆ 5 ವರ್ಷ ಕಳೆದಿದೆ. ಇದನ್ನು ವಿಶೇಷವಾಗಿ ಸಂಭ್ರಮಿಸಲು ಚಿತ್ರದ ನಿರ್ದೇಶಕ ಪರಶುರಾಮ್, ವಿಜಯ್​ ಮತ್ತು ರಶ್ಮಿಕಾ ಪರಸ್ಪರ ಭೇಟಿಯಾಗಿದ್ದಾರೆ.

ಈ ಕುರಿತು ನಟ ವಿಜಯ್ ದೇವರಕೊಂಡ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯ ಮೂಲಕ ತಿಳಿಸಿದ್ದು, ಮೂವರು 5 ವರ್ಷಗಳ ಸಂಭ್ರಮವನ್ನು  5 ಬೆರಳಿನಲ್ಲಿ ತೋರಿಸುತ್ತಿರುವ ಫೋಟೋವೊಂದನ್ನು ಪೋಸ್ಟ್​ ಮಾಡಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರೊಟ್ಟಿಗೆ ಗೀತಾ ಗೋವಿಂದಂ ಚಿತ್ರ 5 ವರ್ಷಗಳನ್ನು ಕಳೆದಿದೆ ಮತ್ತು 'ಖುಷಿ' ಚಿತ್ರದ ಮ್ಯೂಸಿಕ್​ ಕನ್ಸರ್ಟ್​ಗೆ ಸಜ್ಜಾಗಿರುವೆ ಎಂದು ಬರೆದು, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ ಮಾಡಿದ ಪೋಸ್ಟ್​ಗೆ ಸಾಕಷ್ಟು ಲೈಕ್ಸ್, ಕಮೆಂಟ್​ಗಳು ಹರಿದುಬಂದಿದ್ದು, ನಿಮ್ಮ ಮುಂದಿನ ಯೋಜನೆಗಳಿಗೆ ಶುಭವಾಗಲಿ ಎಂದು ನೆಟ್ಟಿಗರು ಶುಭಹಾರೈಸಿದ್ದಾರೆ. ಇದೀಗ ವಿಜಯ್ ಮತ್ತು ಪರಶುರಾಮ್ ಮತ್ತೊಮ್ಮೆ ಜತೆಯಾಗಿದ್ದು, ಫ್ಯಾಮಿಲಿ ಎಂಟರ್ಟೈನರ್​ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಸದ್ಯ ಈ ಪ್ರಾಜೆಕ್ಟ್​ ಇನ್ನು ನಿರ್ಮಾಣ ಹಂತದಲ್ಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net