ಇದೆಲ್ಲ ಯಾಕೆ ಬೇಕು? ನಟಿ ನಯನತಾರಾ ಮತ್ತು ವಿಘ್ನೇಶ್​ ಶಿವನ್​ಗೆ​ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ! | Criticism

ವಿಜಯವಾಣಿ - 2025-07-03T200120.387 (1)
Published on

Criticism: ಬಹುಭಾಷಾ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್​ ಶಿವನ್ ವಿರುದ್ಧ ತೀವ್ರ ಕಿಡಿಕಾರಿರುವ ನೆಟ್ಟಿಗರು, ಜಾಲತಾಣದಲ್ಲಿ ನಿರ್ದೇಶಕ ಹಂಚಿಕೊಂಡ ಫೋಟೋ ಕಂಡು ಕೆರಳಿದ್ದಾರೆ. ​​

ತೆಲುಗು ಡ್ಯಾನ್ಸ್​ ಕೊರಿಯೋಗ್ರಾಫರ್ ಜಾನಿ ಮಾಸ್ಟರ್​ ಜೊತೆಗಿರುವ ಫೋಟೋವನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದರು. ಈ ಫೋಟೋ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ಇದಕ್ಕೆ ಕಾರಣ, ಜಾನಿ ಮಾಸ್ಟರ್​! ಕಳೆದ ವರ್ಷ ಲೈಂಗಿಕ ದೌರ್ಜನ್ಯದ ಆರೋಪದಡಿ ಜೈಲು ಸೇರಿದ್ದ ಡ್ಯಾನ್ಸ್ ಮಾಸ್ಟರ್​ ಜೊತೆ ಕೆಲಸ ಮಾಡಿದ್ದಕ್ಕಾಗಿ ನಯನತಾರಾ ಮತ್ತು ವಿಘ್ನೇಶ್ ವಿರುದ್ಧ ತೀವ್ರ ಅಸಮಾಧಾನ ಭುಗಿಲೆದ್ದಿದೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ಸ್ಟೋರಿಯಲ್ಲಿ ಜಾನಿ ಮಾಸ್ಟರ್ ಜೊತೆಗಿರುವ ಪೋಟೋ ಹಂಚಿಕೊಂಡಿರುವ ವಿಘ್ನೇಶ್ ಶಿವನ್, ಫೋಟೋಗೆ ಸ್ವೀಟ್​ ಮಾಸ್ಟರ್​ ಜೀ ಎಂಬ ಶೀರ್ಷಿಕೆ ನೀಡಿದ್ದಾರೆ. ಸದ್ಯ ಇದೇ ನೋಡುಗರ ಕಿಚ್ಚಿಗೆ ಕಾರಣವಾಗಿದೆ. ಹಲವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕಿದ್ದು, ನಿಮ್ಮ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ. ನೀವು ಯಾರೊಂದಿಗೆ ನಿಲ್ಲುತ್ತಿದ್ದೀರಿ ಎಂಬುದು ಗೊತ್ತಾಗ್ತಿದೆ. ಇದಕ್ಕೆ ನಯನತಾರಾ ಕೂಡ ಓಕೆನಾ? ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

ಏನಿದು ಜಾನಿ ಮಾಸ್ಟರ್​ ಕೇಸ್​?

ತಮಿಳು, ತೆಲುಗು ಚಿತ್ರರಂಗದಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ ಸ್ಟಾರ್​ ಡ್ಯಾನ್ಸ್ ಕೋರಿಯೋಗ್ರಾಫರ್​ ಜಾನಿ ಮಾಸ್ಟರ್ (Jani Master) ವಿರುದ್ಧ ಕೇಳಿಬಂದ ಅತ್ಯಾಚಾರ ಆರೋಪವು ಟಾಲಿವುಡ್​ ಅಂಗಳದಲ್ಲಿ ದೊಡ್ಡ ಗೊಂದಲವನ್ನೇ ಸೃಷ್ಟಿಸಿತ್ತು. ಸೆ.16ರಂದು ಶೈಖ್ ಜಾನಿ ಬಾಷಾ ಅಲಿಯಾಸ್​ ಜಾನಿ ಮಾಸ್ಟರ್​ ವಿರುದ್ಧ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡ ನರಸಿಂಗಿ ಪೊಲೀಸರು ಜಾನಿಯನ್ನು ಗೋವಾದಲ್ಲಿ ಬಂಧಿಸಿ, ಹೈದರಾಬಾದ್​ಗೆ ಕರೆತಂದಿದ್ದರು. ಒಂದಷ್ಟು ದಿನಗಳ ಕಾಲ ಕಸ್ಟಡಿಯಲ್ಲಿರಿಸಿ ತನಿಖೆ ನಡೆಸಿದ ಬಳಿಕ ಅ.24ರಂದು ತೆಲಂಗಾಣ ಕೋರ್ಟ್​ ಜಾನಿಗೆ ಮಧ್ಯಂತರ ಜಾಮೀನು ಘೋಷಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net