

ಸೌತ್ ಲೇಡಿ ಸೂಪರ್ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಆಗ ಮದುವೆಯಾಗುತ್ತಾರೆ, ಈಗ ಮದುವೆಯಾಗುತ್ತಾರೆ ಅಥವಾ ಈಗಾಗಲೇ ಇಬ್ಬರದ್ದೂ ಮದುವೆ ಆಗಿದೆಯಾ? … ಹೀಗೆ ಈ ಜೋಡಿಯ ಬಗ್ಗೆ ಚಾಲ್ತಿಯಲ್ಲಿರುವ ಮದುವೆ ಬಗೆಗಿನ ಮಾತುಗಳಿವು. ಆದರೆ, ಈ ಜೋಡಿ ಇನ್ನೂ ಮದುವೆ ಆಗಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಲ್ಲಿ ನಯನತಾರಾ ಮತ್ತು ವಿಘ್ನೇಶ್ ಕಲ್ಯಾಣ ನಡೆದಿರುತ್ತಿತ್ತು. ಅದಕ್ಕೆ ಕರೊನಾ ಅಡ್ಡಿಯಾಯ್ತು. ಇದೀಗ ಇದೇ ಜೋಡಿ ಮದುವೆ ಯಾವಾಗ ಎಂಬ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದೆ.
ಇದನ್ನೂ ಓದಿ: ‘ನಿಮಗೊಂದು ಸಿಹಿ ಸುದ್ದಿ’ ಕೊಟ್ಟ ಕಾವ್ಯಾ
‘ಮದುವೆ ವಿಚಾರವಾಗಿ ಈಗಾಗಲೇ ಸಾಕಷ್ಟು ವದಂತಿಗಳು ಹರಿದಾಡಿವೆ. ಆದರೆ, ನಮ್ಮಿಬ್ಬರ ಗುರಿ ಈಡೇರಿಸಿಕೊಳ್ಳಬೇಕಿರುವುದರಿಂದ ಮದುವೆ ಬಗ್ಗೆ ಈಗಲೇ ಯಾವುದನ್ನೂ ವಿಚಾರಿಸಿಲ್ಲ. ಸದ್ಯಕ್ಕೆ ನಾವಿಬ್ಬರೂ ಹ್ಯಾಪಿಯಾಗಿದ್ದೇವೆ. ಅಷ್ಟಕ್ಕೂ ಮದುವೆ ಆಗಲೇಬೇಕೆಂದರೆ, ನಮ್ಮಿಬ್ಬರ ನಡುವಿನ ಡೇಟಿಂಗ್ ಬೋರ್ ಆದ್ಮೇಲೆ ಮದ್ವೆ ಆಗ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ಬೆಳಕಿನ ಹುಡುಕಾಟದಲ್ಲಿ… ನಟ ಉಪೇಂದ್ರ
ಇತ್ತ ಈ ಹಿಂದೆ ನಯನತಾರಾ ಮತ್ತು ವಿಘ್ನೇಶ್ ಮದುವೆ ವಿಚಾರವಾಗಿ ಸಾಕಷ್ಟು ರೂಮರ್ಗಳು ಹರಿದಾಡಿದ್ದವು. ಲಾಕ್ಡೌನ್ ವೇಳೆಯಲ್ಲಿಯೇ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅದಾದ ಬಳಿಕ ನಮ್ಮಿಬ್ಬರ ಮದುವೆ ಆಗಿಲ್ಲ ಎಂದೂ ಈ ಜೋಡಿ ಹೇಳಿಕೊಂಡಿತ್ತು. ಹೀಗೆ ಮದುವೆ ವಿಚಾರವಾಗಿಯೇ ಈ ಜೋಡಿ ಸುದ್ದಿ ಮಾಡುತ್ತಿದ್ದು, ಸದ್ಯಕ್ಕೆ ಮದುವೆ ಇಲ್ಲ ಎಂಬುದನ್ನು ಇದೀಗ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)