

ಶಿವಮೊಗ್ಗ: ವಿದ್ಯಾನಗರದ ರೈಲ್ವೆ ಹಳಿಗೆ ಅಡ್ಡಲಾಗಿ ಬುಧವಾರ ಮಧ್ಯಾಹ್ನ ಭಾರಿ ಗಾತ್ರದ ಕಂಟೈನರ್‌ವೊಂದು ಸಿಲುಕಿಕೊಂಡು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
ಯಶವಂತಪುರ-ಶಿವಮೊಗ್ಗ ರೈಲು ಬರುವ ವೇಳೆಗೆ ಗೇಟ್ ಹಾಕಲು ರೈಲ್ವೆ ಸಿಬ್ಬಂದಿ ಮುಂದಾದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಂಟೈನರ್ ರೈಲ್ವೆ ಹಳಿ ದಾಟಲು ಮುಂದಾಗಿತ್ತು. ಆಗ ಕಂಟೈನರ್‌ನ ಕೆಳಭಾಗ ಹಳಿಗೆ ಸಿಲುಕಿಕೊಂಡಿತ್ತು. ಇದರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಅದನ್ನು ತೆರವುಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಕಂಟೈನರ್ ಹಳಿಯಲ್ಲಿ ಸಿಲುಕಿದ್ದರಿಂದ ರೈಲು ಸಂಚಾರವನ್ನೂ ಕೆಲಕಾಲ ಮುಂದೂಡಲಾಗಿತ್ತು. ಬೇರೆ ವಾಹನಗಳೂ ತೆರಳಲು ಸಾಧ್ಯವಾಗದೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆ ನಂತರ ಕ್ರೇನ್ ತರಿಸಿ ಕಂಟೈನರ್‌ನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.