ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಶ್ರೀಮತಿ ಶಕುಂತಲಾ ಪಾಟೀಲ ನರ್ಸಿಂಗ್ ಕಾಲೇಜಿನ ಚೇರ್ಮನ್ ಶ್ರೀ ಡಿ. ಬಿ. ಪಾಟೀಲ, ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತ ಅಧಿಕಾರಿಗಳಾದ ಶ್ರೀ ರಂಗನಾಥ ಎಂ. ವಿ. ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ ಹುಯಿಲಗೋಳ, ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಹಾಗೂ ಸಿಇಓ ಶ್ರೀ ಪಿ. ಎಚ್. ಕಡಿವಾಲ ಅವರು ವಿದ್ಯಾರ್ಥಿಗಳ ಪಥಸಂಚಲನದ ಗೌರವವನ್ನು ಸ್ವೀಕರಿಸಿದರು. ಕ್ರೀಡಾ ಜ್ಯೋತಿಯು ವಿದ್ಯಾದಾನ ಸಮಿತಿಯ ಮೈದಾನದಿಂದ ಹೊರಟು ಕಾರ್ಯಕ್ರಮದ ವೇದಿಕೆಯನ್ನು ತಲುಪಿತು. ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಸಸಿಗೆ ನೀರು ಎರೆಯುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.