ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

Vidya Balan
Published on

ಮುಂಬೈ: ಬಾಲಿವುಡ್​ ನಟಿ ವಿದ್ಯಾ ಬಾಲನ್  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ತನ್ನ ಮೊದಲ ಪ್ರೀತಿಯ ಬಗ್ಗೆ ಮಾತನಾಡಿ, ಆತನಿಂದ ತಾನು ಮೋಸ ಹೋಗಿದ್ದೇನೆ ಎಂದು ವಿದ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ ಬಗ್ಗೆಯೂ ವಿದ್ಯಾ ಬಾಲನ್ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

 ವಿದ್ಯಾ ಬಾಲನ್​ ಮಾತನಾಡಿ, ' ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮೋಸ ಹೋದೆ. ನಾನು ಭೇಟಿ ಮಾಡಿದ ಮೊದಲ ವ್ಯಕ್ತಿ ನನಗೆ ಮೋಸ ಮಾಡಿದನು. ನಾವು ಬೇರೆ ಆದ್ವಿ. ಪ್ರೇಮಿಗಳ ದಿನದಂದು ಕಾಲೇಜಿನಲ್ಲಿ ಅವನೊಂದಿಗೆ ಜಗಳವಾಡಿದ್ದೆ. ಹಾಗಾಗಿ ಅವರು ನನಗೆ ಹೇಳಿದರು.. 'ನಾನು ನನ್ನ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ' ಎಂದರು. ಅವನ ಈ ಮಾತುಗಳು ನನ್ನ ಹೃದಯ ಒಡೆದು ಹೋಯಿತ್ತು. ಅವನು ನನ್ನನ್ನು ಈ ರೀತಿ ಪ್ರೀತಿಸುತ್ತಿದ್ದನು ಎಂದು ನನಗೆ ತುಂಬಾ ಬೇಸರವಾಯಿತು. ಆ ನಂತರ ನನ್ನ ಜೀವನವನ್ನು ಬದಲಾಯಿಸಿದೆ. ನಾನು ಕೆಲವು ಜನರನ್ನು ಪ್ರೀತಿಸುತ್ತಿದ್ದೆ ಆದರೆ ಯಾರೊಂದಿಗೂ ಆಳವಾದ ಸಂಬಂಧವನ್ನು ಹೊಂದಿರಲಿಲ್ಲ ಎಂದು ವಿದ್ಯಾ ಹೇಳಿದರು.

ಕೆಲ ಹೀರೋಗಳಿಗೆ ನನ್ನ ಜೊತೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ನಿರ್ಮಾಪಕರು ನನ್ನನ್ನು ಐರಿನ್ ಲೆಗ್ ಎಂದು ಭಾವಿಸಿದ್ದರು. ಕೆಲವು ಹೀರೋಗಳು ವಿದ್ಯಾಬಾಲನ್ ಜತೆ ನಟಿಸಲು ಕಂಫರ್ಟಬಲ್ ಆಗಿಲ್ಲ ಅನ್ನಿಸಿತ್ತು. ಯಶಸ್ವಿ ಚಿತ್ರಗಳನ್ನು ನೀಡಿದರೂ ಕೆಲವು ಸ್ಟಾರ್ ಹೀರೋಗಳು ತಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲೇಡಿ ಓರಿಯೆಂಟೆಡ್ ಚಿತ್ರಗಳು ನನ್ನನ್ನು ಹೆಚ್ಚು ಪ್ರಚೋದಿಸುತ್ತವೆ. ಇಂತಹ ಚಿತ್ರಗಳು ಬಂದರೆ ಜನ ಮೆಚ್ಚುವುದಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಹೆಣ್ಣನ್ನು ಹೆಚ್ಚು ಹೈಲೈಟ್ ಮಾಡುತ್ತಿರುವುದಕ್ಕೆ ಹೀರೋಗಳು ಖುಷಿ ಪಡುವುದಿಲ್ಲ. ನನ್ನ ಜತೆ ನಟಿಸದಿದ್ದರೆ ಅವರಿಗೇ ನಷ್ಟ ಎಂದಿದ್ದಾರೆ ವಿದ್ಯಾ ಬಾಲನ್.

ಇತ್ತೀಚೆಗೆ, ವಿದ್ಯಾ ಬಾಲನ್ ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿದ್ದಾರೆ.  'ದೋ ಔರ್ ದೋ ಪ್ಯಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರತೀಕ್ ಗಾಂಧಿ ಈ ಚಿತ್ರದ ನಾಯಕ. ಚಿತ್ರದಲ್ಲಿ ಇಲಿಯಾನಾ ಡಿಕ್ರೂಜ್ ಕೂಡ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net