

ಬೆಂಗಳೂರು: ನಮ್ಮ ಶಾಸಕಾಂಗಗಳು ಕಾನೂನುಗಳನ್ನು ರೂಪಿಸುವಲ್ಲಿ ಸಮರ್ಥ ಮತ್ತು ಪರಿಣಾಮಕಾರಿಯಾಗಿರಬೇಕು. ಆದರೆ, ಅಗತ್ಯವಿರುವ ಮಟ್ಟದಲ್ಲಿ ಚರ್ಚೆಗಳು, ಶಾಸಕರ ಭಾಗವಹಿಸುವಿಕೆ, ಚಿಂತನೆ ನಡೆಯದಿರುವುದು ಕಳವಳಕಾರಿ ಸಂಗತಿ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಭಿಪ್ರಾಯಪಟ್ಟರು.
"ಪ್ರಜಾಪ್ರಭುತ್ವ& ಸಂಸದೀಯ ಮೌಲ್ಯಗಳ ರಣೆ' ಕುರಿತು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ವಿಧಾನಸಭೆ ಸಭಾಂಗಣದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಡಳಿತದಲ್ಲಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಶಿಸ್ತು ಹಾಗೂ ಸಭ್ಯ ನಡವಳಿಕೆಯಿಂದ ವತಿರ್ಸಿ ಸಭೆಯ ನತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಸದನದಲ್ಲಿ ಯಾವುದೇ ವಿರೋಧ, ಭಿನ್ನಾಭಿಪ್ರಾಯ ಇರಬಾರದು ಎಂದಲ್ಲ. ವಾಸ್ತವವಾಗಿ ವಿರೋಧ, ಅಭಿಪ್ರಾಯ, ಭಿನ್ನತೆ, ವಾದ, ಚರ್ಚೆ, ಪ್ರತಿಭಟನೆಗಳು ನಮ್ಮ ಪ್ರಜಾಪ್ರಭುತ್ವದ ಆಧಾರವಾಗಿದೆ. ಈ ಗುಣಲಣಗಳು ನಮ್ಮ ಪ್ರಜಾಪ್ರಭುತ್ವವನ್ನು ಸಮೃದ್ಧವೂ ಮತ್ತು ರೋಮಾಂಚಕವೂ ಆಗಿಸಿವೆ. ಆದರೆ, ಪ್ರತಿಭಟನೆ ಸದನದ ನತೆಗೆ ಅನುಗುಣವಾಗಿ ಮತ್ತು ಸಂಸತ್ತಿನ ನಿಯಮಗಳಿಗೆ ಅನುಸಾರವಾಗಿರಬೇಕು ಎಂದ ಓಂ ಬಿರ್ಲಾ, ಆಡಳಿತವು ಜನ ಭಾವನೆಗಳು ಮತ್ತು ಆಕಾಂೆಗಳೊಂದಿಗೆ ಹೊಂದಿಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವರ ಯೋಗೇಮವನ್ನು ಖಚಿತಪಡಿಸಿಕೊಳ್ಳಲು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ವಿಧಾನಪರಿಷತ್ ಸಭಾಪತಿ ಮಾತನಾಡಿ, ಹೊಸ ಸಂಸತ್ ಭವನದ ಒಂದು ಭಾಗಕ್ಕೆ ಅನುಭವ ಮಂಟಪದ ಹೆಸರಿಡಬೇಕೆಂದು ಮನವಿ ಮಾಡಿದರು. ಸ್ಪೀಕರ್ ಮಾತನಾಡಿ, ಪ್ರತಿಪ ಕಾಂಗ್ರೆಸ್ ಗೈರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಭೆಗೆ ಬಹಿಷ್ಕಾರ ಹಾಕುತ್ತೇವೆ, ನಮಗೆ ಪಾಠ ಬೇಡ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಜೆಡಿಎಸ್ ಸದಸ್ಯರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಾಜರಾಗಿ ಭಾಷಣ ಆಲಿಸಿದರು.
ವಿಧಾನಸೌಧದ ಸ್ಪೂರ್ತಿ
ಭಗವಾನ್ ಬಸವೇಶ್ವರರು 12ನೇ ಶತಮಾನದಲ್ಲಿ ನಿಮಿರ್ಸಿದ ಅನುಭವ ಮಂಟಪ, ಪ್ರಸ್ತುತ ಸಂದರ್ಭದಲ್ಲಿ ಜನಪ್ರತಿನಿಧಿಗಳ ಸಂಸತ್ತಿನ ಪ್ರತಿಬಿಂಬವಾಗಿದೆ. ರಾಣಿ ಚೆನ್ನಮ್ಮನ ಮಹಾನ್ ತ್ಯಾಗವು ನಮಗೆ ಸ್ಫೂತಿರ್ ನೀಡುತ್ತಲೇ ಇದೆ ಎಂದ ಓ ಬಿರ್ಲಾ, ನಾಡಪ್ರಭು ಕೆಂಪೇಗೌಡರನ್ನೂ ನೆನಪಿಸಿಕೊಂಡರು. ವಿಧಾನಸೌಧ ಕಟ್ಟಡವು ಪ್ರಜಾಪ್ರಭುತ್ವದೊಂದಿಗಿನ ಅದರ ಸುದೀರ್ ಪ್ರಯಾಣ ನಮಗೆ ಹೊಸ ಸ್ಪೂತಿರ್ ನೀಡುತ್ತದೆ ಎಂದೂ ಹೇಳಿದರು.
ಅನ್ನದಾನಿ ದನಿ
ಓಂ ಬಿರ್ಲಾ ಭಾಷಣ ಆರಂಭಿಸುತ್ತಿದ್ದಂತೆ ಜೆಡಿಎಸ್ ಶಾಸಕ ಅನ್ನದಾನಿ ಕನ್ನಡ ಧ್ವಜ ಹಿಡಿದು ಕನ್ನಡದಲ್ಲಿ ಮಾತನಾಡಿ ಎಂದು ಭಾಷಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಈ ಅಡಚಣೆಯನ್ನು ಗಂಭೀರವಾಗಿ ಪರಿಗಣಿಸಿದ ಲೋಕಸಭೆ ಸ್ಪೀಕರ್ ಭಾಷಣ ಮುಂದುವರಿಸಿದರು.
ಶಾಸಕರಿಗೆ ಪಾಠ
1. ಜನರ ಆಶಯ ಆಕಾಂಕ್ಷೆಗಳನ್ನು ಶಾಸಕಾಂಗಗಳ ಮೂಲಕ ಪೂರೈಸಲು ಶ್ರಮಿಸಿದಾಗ ಮಾತ್ರ ಸಂಸತ್ತು, ಶಾಸಕಾಂಗದ ಪ್ರತಿಷ್ಠೆ ಹೆಚ್ಚಿಸಬಹುದು.
2. ರಚನಾತ್ಮಕ ಚರ್ಚೆ ಶಾಸಕಾಂಗಗಳ ಚೌಕಟ್ಟಿನೊಳಗೆ ನಡೆಯುವುದನ್ನು ಖಾತ್ರಿಮಾಡಿಕೊಂಡಾಗ ಮಾತ್ರ ಹೆಚ್ಚು ಶಾಸಕಾಂಗವನ್ನು ಜವಾಬ್ದಾರಿಯುತವಾಗಿ ಮಾಡಬಹುದು.
3. ಕಾನೂನು ರಚಿಸುವ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗವಹಿಸುವಿಕೆ ಇರಬೇಕು. ಅಂತಿಮವಾಗಿ ಕಾನೂನು ರೂಪುಗೊಂಡ ಮೇಲೆ ಯಾರೂ ಇದರ ಬಗ್ಗೆ ಬೆರಳೆತ್ತಿ ತೋರುವಂತಿರಬಾರದು.
4. ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿತ್ವ ಮತ್ತು ನತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಜನಪ್ರತಿನಿಧಿಗಳು ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ವತಿರ್ಸಬಾರದು.
ಲೋಕಸಭೆಯ ಸಭಾಧ್ಯರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ದೇಶದ 75 ವರ್ಷಗಳ ಇತಿಹಾಸದಲ್ಲಿ, ವಿಧಾನಸೌಧ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನದಿಂದ ಇವತ್ತಿನವರೆಗೆ ಲೋಕಸಭಾ ಸಭಾಧ್ಯರು ವಿಧಾನಮಂಡಲದ ಜಂಟಿ ಅಧಿವೇಶನ ಕುರಿತು ಭಾಷಣ ಮಾಡಿಲ್ಲ.
|ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ