VIDEO | ವಿಕಿ ಕೌಶಲ್​ರ ಈ ಕೌಶಲ್ಯ ತಪ್ಪದೇ ನೋಡಿ

vicky
Published on

ಮುಂಬೈ : ಉರಿ ಸಿನಿಮಾದ ಖ್ಯಾತಿಯ ವಿಕಿ ಕೌಶಲ್ ತಮ್ಮ ಹೊಸ ಲುಕ್​ಅನ್ನು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ಬಿಳಿಯ ಅಂಗಿ ತೊಟ್ಟು ಕೂದಲಿಗೆ ಹೊಸ ಬಣ್ಣ ಮತ್ತು ಶೈಲಿ ನೀಡಿರುವ ಕೌಶಲ್​ರ ಈ ಚಿತ್ರಗಳಿಗೆ ಅವರ ಲಕ್ಷಾಂತರ ಅಭಿಮಾನಿಗಳು ಲೈಕುಗಳ ಸುರಿಮಳೆಗೈದಿದ್ದಾರೆ.

ತಾವು ನಟಿಸುವ ಚಿತ್ರಗಳಿಗೆ ಭರಪೂರ ತಯಾರಿ ನಡೆಸುವ ವಿಕಿ ಕೌಶಲ್ ತಮ್ಮ ಮುಂದಿನ ಚಿತ್ರ 'ದ ಇಮ್ಮಾರ್ಟಲ್ ಅಶ್ವತ್ಥಾಮ'ಕ್ಕಾಗಿ ಹಲವಾರು ಹೊಸ ತರಬೇತಿಗಳನ್ನು ಪಡೆಯುತ್ತಿದ್ದಾರೆ. ತಮ್ಮ ನಿತ್ಯದ ವರ್ಕೌಟ್​ನೊಂದಿಗೆ ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಾರೆ. ಇದೀಗ ದಂಡವನ್ನು ಆಡಿಸುವ ಪಾರಂಪರಿಕ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ನಿರಾಯಾಸವಾಗಿ ದಂಡವನ್ನು ಆಡಿಸುತ್ತಿರುವ ತಮ್ಮ ವಿಡಿಯೋ ಒಂದನ್ನು ವಿಕಿ ಕೌಶಲ್ ಇನ್ಸ್​​ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ “ಪರ್ವತದಂತೆ ಸ್ಥಿರವಾಗಿ ನಿಲ್ಲಿ, ನದಿಯಂತೆ ಹರಿಯುತ್ತಾ ಹೋಗಿ ...ನಿಜವಾಗಿ ದಂಡದಿಂದ ಹೊಡೆತ ತಿನ್ನುವವರೆಗೆ!" ಎಂದು ತಮಾಷೆಯ ಶೀರ್ಷಿಕೆ ಕೊಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net