

ಚಹಾ ಪ್ರಿಯರಿಗೆ ಟೀ ಎಂಬುದು ಕೇವಲ ಚಹಾವಲ್ಲ ಅದು ಅವರ ಭಾವನೆ. ಸಾಮಾಜಿಕ ಜಾಲತಾಣದಲ್ಲಿ ಚಹಾ ಪ್ರಿಯರು ಸಾಮಾನ್ಯವಾಗಿ ಚಹಾದೊಂದಿಗೆ ವಿಭಿನ್ನ ಪ್ರಯೋಗಗಳನ್ನು ಮಾಡುವುದನ್ನು ನೋಡಿರುತ್ತೇವೆ. ಅದರ ಕುರಿತು ಜನರು ತಮ್ಮ ಅಭಿಪ್ರಾಯವನ್ನು ಬೇಗನೆ ನೀಡುತ್ತಾರೆ. ಸದ್ಯ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಅದರಲ್ಲಿ ಮಹಿಳೆಯೊಬ್ಬರು ಬಟರ್ ಚಹಾ ಮಾಡಿ ನೀಡುತ್ತಾರೆ. ಇದು ನೋಡುಗರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಯೋದಲ್ಲಿ ಫುಡ್ ವ್ಲಾಗರ್ ಟೀ ಅಂಗಡಿಗೆ ಹೋಗಿ 5 ರೂಪಾಯಿ ಮೌಲ್ಯದ ಟೀ ಕೇಳುತ್ತಾರೆ. ಅದಕ್ಕೆ ಅಂಗಡಿಯಲ್ಲಿದ ಮಹಿಳೆ ನಿಮಗೆ ಇಲ್ಲಿ 5 ರೂಪಾಯಿ ಮೌಲ್ಯದ ಚಹಾ ಸಿಗುವುದಿಲ್ಲೆ ಎಂದು ಹೇಳುತ್ತಾರೆ. ಬಳಿಕ ವ್ಲಾಗರ್ ಸರಿ ನಿಮ್ಮಲ್ಲಿರುವ ಟೀ ಕೊಡಿ ಎಂದು ಕೇಳುತ್ತಾನೆ. ಬಳಿಕ ಆ ಮಹಿಳೆ ಚಹಾ ಮಾಡಲು ಪ್ರಾರಂಭಿಸುವುದನ್ನು ನೀವು ನೋಡಬಹುದು.
ಒಂದು ಪ್ಲೇಟ್ಗೆ ಈಗಾಗಲೇ ಫ್ಲಾಸ್ಕ್ನಲ್ಲಿ ಮಾಡಿಟ್ಟಿರುವ ಚಹಾವನ್ನು ತೆಗೆದುಕೊಳ್ಳುತ್ತಾಳೆ. ಆಗ ವ್ಲಾಗರ್ ಹಾಲಿನ ಕುರಿತು ಕೇಳುತ್ತಾನೆ. ಅಮೂಲ್ ಹಾಲು ಬಳಸುವುದಾಗಿ ತಿಳಿಸುತ್ತಾಳೆ. ಪ್ಲೇಟ್ಗೆ ಚಹಾ ಹಾಕಿದ ಬಳಿಕ ಅಮೂಲ್ ಬೆಣ್ಣೆ ತೆಗೆದು ಚಹಾಕ್ಕೆ ಸೇರಿಸುವುದನ್ನು ನೀವು ಕಾಣಬಹುದು. ಬಟರ್ ಟೀ' ಸಿದ್ಧವಾಗಿದೆ ಎಂದು ಹೇಳುತ್ತಾಳೆ.
ಬಟರ್ ಚಹಾ ವಿಡಿಯೋ ನೋಡಿದವರು ಮಹಿಳೆಯನ್ನು ಟೀಕಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಅಭಿರುಚಿಯನ್ನು ಹೊಂದಿದ್ದಾರೆ ಆದರೆ ನನ್ನ ರುಚಿಯನ್ನು ನಾನು ಎಂದಿಗೂ ಹಾಳು ಮಾಡುವುದಿಲ್ಲ, ಟೀ ಕುಡಿಯಲು ಮಾತ್ರವಲ್ಲ ನಿನಗೆ ಪಾಠ ಹೇಳಲು ಖಂಡಿತಾ ಲಕ್ಷ್ಮಿನಗರಕ್ಕೆ ಬರುತ್ತೇನೆ, ಏ ಹುಡುಗಿ ಭಾವನೆಗಳೊಂದಿಗೆ ಆಟವಾಡಬೇಡ, ಇದು ಸಂಪೂರ್ಣ ಅಸಂಬದ್ಧ ಎಂದು ಕಾಮೆಂಟ್ ಮಾಡಿದ್ದಾರೆ.