

ಮಾಸ್ಕೋ: ಹಾವು ತನ್ನ ಸ್ವಭಾವವನ್ನು ಎಂದಿಗೂ ಬಿಡುವುದಿಲ್ಲ! ಅದೇ ರೀತಿ ಅಪಾಯ ಎಂದು ತಿಳಿದಿದ್ದರೂ ಮನುಷ್ಯನ್ನು ತನ್ನ ಚಟವನ್ನು ಬಿಡುವುದಿಲ್ಲ. ಎಷ್ಟೋ ಮಂದಿ ಅಪಾಯಕಾರಿ ರೀಲ್ಸ್ಗಾಗಿ ಹಾವಿನ ಜತೆ ಆಟವಾಡುತ್ತಾರೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ( Video Viral) ಆಗುತ್ತಿದೆ. ಅದರಲ್ಲಿ ರಷ್ಯಾದ ಮಹಿಳೆಯೊಬ್ಬರ ಮೂಗಿನ ಮೇಲೆ ಹಾವು ದಾಳಿ ಮಾಡುತ್ತಿರುವುದು ಕಂಡುಬಂದಿದೆ.
ವೈರಲ್ ವಿಡಿಯೋದಲ್ಲಿ ರಷ್ಯಾದ ನೃತ್ಯಗಾರ್ತಿ ಹೆಬ್ಬಾವಿನ ಜತೆ ಫೋಟೋಶೂಟ್ ಮಾಡಿಸುತ್ತಿರುವುದನ್ನು ನೋಡಬಹುದು. ಹೆಬ್ಬಾವಿನ ಜತೆ 'ಕಿಸ್'ಗೆ ಪೋಸ್ ನೀಡುತ್ತಿರುವ ಸಮಯದಲ್ಲಿ ಹಾವು ಏಕಾಏಕಿ ಆಕೆಯ ಮೂಗಿನ ಮೇಲೆ ದಾಳಿ ಮಾಡುತ್ತದೆ. ಮಹಿಳೆಯ ಚುಂಬನ ಭಂಗಿಯು ಹೆಬ್ಬಾವನ್ನು ಆತ್ಮರಕ್ಷಣೆಯ ಕ್ರಮದಲ್ಲಿ ಇರಿಸುತ್ತದೆ ಮತ್ತು ಅದು ತಕ್ಷಣವೇ ಮಹಿಳೆಯ ಮೇಲೆ ದಾಳಿ ಮಾಡುತ್ತದೆ.ಈ ದಾಳಿಯಿಂದ ಮಹಿಳೆ ತುಂಬಾ ಹೆದರುತ್ತಾಳೆ ಹಾಗೂ ಗಾಯಗೊಂಡ ತಕ್ಷಣ ಹಾವನ್ನು ನೆಲದ ಮೇಲೆ ಬಿಟ್ಟು ಓಡಿಹೋಗುವುದನ್ನು ಕಾಣಬಹುದು.
ಈ ವಿಡಿಯೋವನ್ನು ಇದುವರೆಗೂ 18 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ರಷ್ಯಾದ ನರ್ತಕಿಯ ಯೋಗಕ್ಷೇಮವನ್ನು ತಿಳಿದುಕೊಳ್ಳಲು ಕೆಲವರು ಆಸಕ್ತಿ ವಹಿಸುತ್ತಿದ್ದಾರೆ, ಅಂತಹ ಹಾವುಗಳೊಂದಿಗೆ ಆಟವಾಡಬೇಡಿ ಎಂದು ಅನೇಕರು ಸಲಹೆ ನೀಡುತ್ತಿದ್ದಾರೆ. ರಷ್ಯಾದ ನೃತ್ಯಗಾರ್ತಿಗೆ ಹಾವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ, ಇದರಿಂದ ನಾವು ಏನು ಕಲಿತಿದ್ದೇವೆ?, ನಾನು ಇನ್ನೂ ಹೆದರುತ್ತಿದ್ದೇನೆ, ಹಾವು ಈಗ ಚೆನ್ನಾಗಿದೆಯೇ ಎಂದು ಕಾಮೆಂಟ್ ಮಾಡಿದ್ದಾರೆ.
ಆ ಮಹಿಳೆ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದು ತನ್ನ ತನ್ನ ಮೂಗಿನ ಸ್ಥಿತಿಯನ್ನು ತೋರಿಸಿದ್ದಾರೆ. ಹಾಗೂ ವಿಡಿಯೋದಲ್ಲಿ ನನ್ನ ಮೂಗು ಮುರಿಯಬಹುದು ಎಂದು ನಾನು ಭಾವಿಸಿದೆ, ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)