

ಪ್ರಸ್ತುತ ಕಾಲದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸುತ್ತೇವೆ ಎಂಬ ಮಾತುಗಳನ್ನು ಕೇಳುವುದು ಬಹಳ ಕಷ್ಟ. ಏನಾದರೂ ಆಗಲಿ ಹೇಗಾದರೂ ಆಗಲಿ ಹಣ ಸಂಪಾದಿಸುತ್ತೇನೆ ಎಂದು ಹೇಳುವವರೆ ಹೆಚ್ಚು. ಇದಕ್ಕೆ ವಿರುದ್ಧವಾಗಿ ಬಾಲಕನೊಬ್ಬ ತಾನು ದುಡಿಯುತ್ತನೆ ಹೊರತು ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ(Viral Video). ವಂಚನೆ, ನಕಲಿ ಕೆಲಸಗಳ ಮೂಲಕ ಹಣ ಗಳಿಸುವವರಿಗೆ ಈ ಪುಟ್ಟ ಮಗುವಿನ ಮಾತು ಕಪಾಳಮೋಕ್ಷ ಮಾಡಿದಂತಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರದಿಂದ ದುಡಿಯುವುದು ಎಲ್ಲರ ಮಾತಲ್ಲ.
ವೈರಲ್ ವಿಡಿಯೋದಲ್ಲಿ ಪಾಪಡ್ ಮಾರಾಟ ಮಾಡುವ ಹುಡುಗನ ಜತೆ ಮಾತಾಡುವುದನ್ನು ನೋಡಬಹುದು. ಪಾಪಡ್ ಮಾರಾಟವಾಗುತ್ತಿಲ್ಲ ಎಂದು ಚಿಕ್ಕ ಹುಡುಗ ಹೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದವರು 5 ರೂ.ಗೆ ಕೊಡಿ ಎನ್ನುತ್ತಾರೆ. ಆಗ ಆ ಚಿಕ್ಕ ಹುಡುಗ 5 ರೂ.ಗೆ ಆಗಲ್ಲ ಅಣ್ಣ ಎನ್ನುತ್ತಾನೆ. ಹುಡುಗನೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ ನೀನು ನಿನ್ನ ತಾಯಿಯನ್ನು ಪ್ರೀತಿಸುತ್ತೀಯಾ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಗು ಹೌದು ಎಂದು ಹೇಳುತ್ತಾನೆ. ಹಾಗಾಗಿ ನಾನು ನನ್ನ ತಾಯಿಗೆ ನೀಡಲು ಕೊಳ್ಳುತ್ತೇನೆ. ನಾನು ಕೂಡ ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ನನ್ನ ತಾಯಿ ನಿನ್ನ ತಾಯಿಯಲ್ಲವೇ? ಎಂದು ಕೇಳುತ್ತಾರೆ.
ಅದನ್ನು ಕೇಳಿದ ಆ ಚಿಕ್ಕ ಹುಡುಗ 30 ರೂಪಾಯಿಯ ಪಾಪಡ್ ಅನ್ನು 5 ರೂಪಾಯಿಗೆ ಕೊಡಲು ಒಪ್ಪುತ್ತದೆ. ನಂತರ ಆ ಹುಡುಗನ ಪ್ರತಿಕ್ರಿಯೆ ಇಷ್ಟಪಟ್ಟ ಎದುರಿದ್ದ ವ್ಯಕ್ತಿ ಎಷ್ಟು ಮಾರಾಟವಾಗಿದೆ ಎಂದು ಕೇಳುತ್ತಾರೆ. ಚಿಕ್ಕ ಹುಡುಗ ಇನ್ನು ಮಾರಾಟವಾಗಿಲ್ಲ ಎಂದಾಗ ಪಾಪಡ್ ತುಂಬಾ ಇಷ್ಟವಾಯಿತು ಎಂದು ಹೇಳುತ್ತಾ 500 ರೂಪಾಯಿ ಕೊಡುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮಗು ಈ ರೀತಿ ಹೇಳುತ್ತದೆ.
500 ರೂಪಾಯಿ ನೋಡಿದ ಮಗು, ‘ಅಣ್ಣ ಇಷ್ಟು ತೆಗೆದುಕೊಳ್ಳಲಾರೆ’ ಎನ್ನುತ್ತದೆ. ಅದಕ್ಕೆ ಎದುರಿದ್ದ ವ್ಯಕ್ತಿ ಇದ್ದಷ್ಟು ಪಾಪಡ್ ಗಳನ್ನು ತೆಗೆದುಕೊಳ್ಳುತ್ತೇನೆ. ನನ್ನ ತಾಯಿಗೆ ಪಾಪಡ್ ಕೊಟ್ಟಿದ್ದೀಯಾ, ನಿನ್ನ ಅಮ್ಮನಿಗಾಗಿ ಇವುಗಳನ್ನು ನನ್ನಿಂದ ಇಟ್ಟುಕೊಳ್ಳಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮಗು ಇಲ್ಲ ಅಣ್ಣ, ನಾನು ಕೆಲಸ ಮಾಡಬಲ್ಲೆ ಆದರೆ ಭಿಕ್ಷೆ ಬೇಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ನಾನು ಬೇರೆಯವರ ಹಣವನ್ನು ಏಕೆ ತೆಗೆದುಕೊಳ್ಳುತ್ತೇನೆ? ಎನ್ನುತ್ತಾರೆ.
ಸುಮಾರು 59 ಸೆಕೆಂಡ್ಗಳ ಈ ಕ್ಲಿಪ್ ಇದರೊಂದಿಗೆ ಮುಗಿಯುತ್ತದೆ. ಈ ವಿಡಿಯೋವನ್ನು ಹಲವರು ಮೆಚ್ಚಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಚಿಂತನೆಯಾಗಿದೆ. ಒಂದು ದಿನ ನೀವು ಖಂಡಿತವಾಗಿಯೂ ಶ್ರೀಮಂತರಾಗುತ್ತೀರಿ, ಈ ಹುಡುಗನ ಮೌಲ್ಯಗಳು ಅವನ ವಯಸ್ಸಿಗಿಂತ ದೊಡ್ಡದ್ದು, ಒಬ್ಬ ಬಡ ಹುಡುಗ ಮಾತ್ರ ಅಂತಹ ಉತ್ತಮ ಮೌಲ್ಯಗಳನ್ನು ಹೊಂದಬಹುದು, ನೀವು ಹೃದಯಗಳನ್ನು ಗೆದ್ದಿದ್ದೀರಿ, ಅವರ ಮಾತುಗಳು ನನ್ನನ್ನು ಬೆಚ್ಚಿಬೀಳಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.