ಮಹಿಳೆಯರನ್ನು ಆಕರ್ಷಿಸುತ್ತಿರುವ ‘ಗ್ಲಾಸ್ ಸ್ಕಿನ್​​’​ನ ಟ್ರೆಂಡ್: ಅಸಲಿ ಸತ್ಯ ಬಿಚ್ಚಿಟ ಕೊರಿಯನ್ ಮಹಿಳೆ Video Viral

Untitled design - 2025-01-15T192803.720
Published on

ಕೊರಿಯನ್​​: ಕೊರಿಯನ್ ಗ್ಲಾಸ್ ಸ್ಕಿನ್ ಪಡೆಯಲು ಸಲಹೆಗಳನ್ನು ನೀಡುವ ಅನೇಕ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ(Video Viral) ನೋಡಬಹುದು. ಗ್ಲಾಸ್ ಸ್ಕಿನ್ ಪಡೆಯುವ ಹೆಸರಲ್ಲೂ ಹಲವು ಕ್ರೀಮ್​​​ಗಳನ್ನು ಪ್ರಚಾರ ಮಾಡಲಾಗುತ್ತದೆ. ತ್ವಚೆಯ ಆರೈಕೆಗೆ ಹೆಚ್ಚಿನ ಗಮನ ನೀಡುವ ಜನರು ವಿವಿಧ ಉತ್ಪನ್ನಗಳು ಅಥವಾ ಚಿಕಿತ್ಸೆಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಪರಿಪೂರ್ಣ ತ್ವಚೆಯನ್ನು ಪಡೆಯುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ನೈಸರ್ಗಿಕವಾಗಿ ಚರ್ಮವನ್ನು ಸ್ಪಷ್ಟ ಮತ್ತು ಹೊಳೆಯುವಂತೆ ಮಾಡುವ ಕೊರಿಯನ್ ಗ್ಲಾಸ್ ಸ್ಕಿನ್ ಕೇರ್ ಟ್ರೆಂಡ್ ಆಗಿದೆ.

ಮುಖದಲ್ಲಿ ಯಾವುದೇ ಗಾಯಾದ ಅಥವಾ ಇನ್ನು ಯಾವುದೇ ಗುರುತುಗಳಿಲ್ಲದೆ ಸಾಕಷ್ಟು ಹೊಳಪು ಮತ್ತು ಗಾಜಿನಂತೆ ನಯವಾಗಿರುತ್ತದೆ. ಆದರೆ ಇದೀಗ ಕೊರಿಯಾದ ಬ್ಯೂಟಿ ಬ್ಲಾಗರ್ ಒಬ್ಬರು ಈ ಗಾಜಿನ ಚರ್ಮದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಅವಳು ನೈಸರ್ಗಿಕ ಬೆಳಕಿನಲ್ಲಿ ನಿಂತು ಕ್ಯಾಮೆರಾವನ್ನು ತನ್ನ ಮುಖದ ಹತ್ತಿರ ತೆಗೆದುಕೊಳ್ಳುತ್ತಾಳೆ. ಆಕೆಯ ಮುಖದ ಚರ್ಮ ಹೇಗಿದೆ ಎಂದು ವಿಡಿಯೋದಲ್ಲಿ ನೀವು ಕಾಣಬಹುದು. ಮುಖದ ಮೇಲಿರುವ ಸಣ್ಣ ಸಣ್ಣ ರಂಧ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅದೆ ಆಕೆ ಬೆಳಕಿನಿಂದ ದೂರ ಹೋದ ತಕ್ಷಣ ಅವಳ ಮುಖವು ಸಂಪೂರ್ಣವಾಗಿ ಬದಲಾಗುತ್ತದೆ. ಇದು ಹೆಚ್ಚು ಮೃದುವಾಗಿ ಮತ್ತು ರಂಧ್ರಗಳಿಲ್ಲದೆ ಕಾಣುವುದನ್ನು ನೋಡಬಹುದು.

ಪರಿಪೂರ್ಣ ಚರ್ಮದ ಭ್ರಮೆಯನ್ನು ಸೃಷ್ಟಿಸುವ ಕ್ಯಾಮೆರಾ ಫಿಲ್ಟರ್‌ಗಳಿಗೆ ಇದರ ಕ್ರೆಡಿಟ್ ಹೋಗುತ್ತದೆ ಎಂದೆನ್ನಿಸುವುದಂತ ಸತ್ಯ. ಈ ವಿಡಿಯೋ ವೈರಲ್​ ಆದಾಗಿನಿಂದ ಇದುವರೆಗೂ 3 ದಶಲಕ್ಷಕ್ಕೂ ಹೆಚ್ಚು ಮಂದು ವೀಕ್ಷಿಸಿದ್ದಾರೆ ಮತ್ತು ಅನೇಕರು ಪ್ರತಿಕ್ರಿಯಿಸಿದ್ದಾರೆ. ಯಾವುದು ನಿಜ ಎಂದು ನನಗೆ ಅರ್ಥವಾಗಲಿಲ್ಲ?, ಗಾಜಿನ ಚರ್ಮವು ಏನೂ ಅಲ್ಲ ಅದು ಫಿಲ್ಟರ್, ಬನ್ನಿ ಯಾರೋ ಸತ್ಯ ಹೇಳಿದರು ಜನರು ಯಾವುದೇ ಕಾರಣವಿಲ್ಲದೆ ಹುಚ್ಚರಾಗುತ್ತಿದ್ದಾರೆ, ಸರಿ ಇದು ಮೇಕ್ಅಪ್ ಅಲ್ಲ ಆದರೆ ಫಿಲ್ಟರ್ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net