ಗುಲಾಬ್​ ಜಾಮೂನ್​ ತಿಂದ ಕೊರಿಯಾ ಹುಡುಗಿ; ಆಕೆಯ ರಿಯಾಕ್ಷನ್​​​ Video Viral

Untitled design - 2024-11-23T203206.870
Published on

ಕೊರಿಯಾದ ಹುಡುಗಿ ಕೆಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್​​​​ ಆಗಿ ಇರುತ್ತಾರೆ. ಆಕೆ ಭಾರತಕ್ಕೆ ಬಂದು ಇಲ್ಲಿನ ಆಹಾರವನ್ನು ತಿಂದು ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಜಿಲೇಬಿ ತಿಂದು ಆ ವಿಡಿಯೋವನ್ನು ಶೇರ್​ ಮಾಡಿದ್ದರು. ಆ ವಿಡಿಯೋಗೆ ನೀಡಿದ್ದ ಪ್ರತಿಕ್ರಿಯೆ ತಮಾಷೆಯಾಗಿದ್ದು ಜಾಲತಾಣದಲ್ಲಿ ವೈರಲ್( Video Viral)​ ಆಗಿತ್ತು. ಸದ್ಯ ಈಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿರುವ ಕೆಲ್ಲಿ ಅದರಲ್ಲಿ ಗುಲಾಬ್​ ಜಾಮೂನ್​ ಅನ್ನು ರುಚಿ ನೋಡಿದ್ದಾರೆ.

ವೈರಲ್​ ವಿಡಿಯೋದಲ್ಲಿ ಕೆಲ್ಲಿ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ಅವಳ ಕೈಯಲ್ಲಿ ಗುಲಾಬ್ ಜಾಮೂನ್ ಇದೆ. ಆಕೆ ಮೊದಲು ಅಂಗಡಿಯವನನ್ನು ಜಾಮೂನ್​ ಏಕೆ ಇಷ್ಟು ದೊಡ್ಡದಾಗಿದೆ ಮತ್ತು ಅದನ್ನು ಹೇಗೆ ತಿನ್ನಬೇಕೆಂದು ಕೇಳುತ್ತಾಳೆ. ಗುಲಾಬ್​ ಜಾಮೂನ್​ ಯಾವ ತರಹದ ಖಾದ್ಯ ಎಂದು ಚಮಚ ಹಿಡಿದು ನೋಡುತ್ತಾಳೆ.

ಅಂಗಡಿಯವನು ಆಕೆಗೆ ಹೇಗೆ ತಿನ್ನಬೇಕು ಎಂದು ಹೇಳುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಕೆಲ್ಲಿ ಅದನ್ನು ತಿಂದು ಬಹಳ ಖುಷಿಪಡುತ್ತಾಳೆ. ಮತ್ತು ವಾವ್​.... ಎಂದು ಹೇಳುತ್ತಾ ನಗಲು ಪ್ರಾರಂಭಿಸುತ್ತಾಳೆ. ಅಲ್ಲಿರುವ ಜನರೆಲ್ಲರೂ ಕೆಲ್ಲಿಯನ್ನೇ ನೋಡುವಂತೆ ಪ್ರತಿಕ್ರಿಯೆ ನೀಡುತ್ತಾಳೆ.

ಈ ವಿಡಿಯೋವನ್ನು ಇದುವೆರೆಗೂ 1 ಮಿಲಿಯನ್​ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಗುಲಾಬ್​ ಜಾಮೂನ್​ ಅನ್ನು ಚೌಮಿನ್​ನಂತೆ ತಿನ್ನಲಾಗುತ್ತಿದೆ, ಈ ಚೈನೀಸ್ ಏಕೆ ಇಂಗ್ಲಿಷ್​ನಲ್ಲಿ ಅತಿಯಾಗಿ ವರ್ತಿಸುತ್ತಿದೆ?, ಕೊರಿಯಾದಲ್ಲಿ ಅವರು ಎಲ್ಲವನ್ನು ತಿನ್ನುತ್ತಾರೆ ಇದು ನಾಟಕೀಯವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net